ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು.28: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಜು. 28: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
10.40: ಆರೆಸ್ಸೆಸ್ ಎಲ್ಲೆಡೆ ವಿಷ ಬೀಜ ಬಿತ್ತುತ್ತಿದೆ. ಉತ್ತರಪ್ರದೇಶದ ಕೋಮು ಗಲಭ್ಗೆ ಸಂಘ ಪರಿವಾರವೇ ಕಾರಣ ಎಂದು ಸಚಿವ ಅಜಂ ಖಾನ್ ಹೇಳಿದ್ದಾರೆ.
10.35: ಹಿಂಸೆ ಪೀಡಿತ ಉತ್ತರಪ್ರದೇಶದ ಸಹರಾನ್ ಪುರದಲ್ಲಿ ಶಾಂತಿ ಸ್ಥಾಪಿಸಲು ಸರ್ಕಾರ ಹೆಣಗಾಡುತ್ತಿರುವ ಸಂದರ್ಭದಲ್ಲೇ ಸಮಾಜವಾದಿ ಪಕ್ಷದ ಸಚಿವ ಅಜಂ ಖಾನ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
10.25: ಸೇನಾಪಡೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸಲು ಮೋದಿ ಸರ್ಕಾರ ಕ್ರಮ ಕೈಗೊಂಡಿದೆ. ಭೂಸೇನೆಯ ಇಂಜಿನಿಯರಿಂಗ್, ವೈಮಾನಿಕ ಮತ್ತು ಸಂಕೇತ ವಿಭಾಗಗಳಲ್ಲಿ ಮಹಿಳೆಯರ ನೇಮಕ ಮಾಡಲು ಒಪ್ಪಿಗೆ ಸೂಚಿಸಿದೆ.

Updates India, International News in Brief July 28

10.20: ಯುಎಸ್ ನ ಕಡಲ ತಟದಲ್ಲಿ ವಿಮಾನ ಗುದ್ದಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ.
10.15: ಉತ್ತರಾಖಂಡ್ ನಲ್ಲಿ ಮತ್ತೆ ಮಳೆ ಕಾಟ ಶುರುವಾಗಿದ್ದು, ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭೂಕುಸಿತದಿಂದಾಗಿ ಐವರು ಮೃತಪಟ್ಟ ಘಟನೆ ವರದಿಯಾಗಿದೆ.
10.00: ಉತ್ತರಪ್ರದೇಶದ ಗಲಭೆಗೆ ಸಂಬಂಧಿಸಿದಂತೆ ಇದುವರೆವಿಗೂ ಸುಮಾರು 38 ಮಂದಿಯನ್ನು ಬಂಧಿಸಲಾಗಿದ್ದು, 9 ಎಫ್ ಐಆರ್ ಗಳನ್ನು ದಾಖಲಿಸಲಾಗಿದೆ.
9.30: ಇಸ್ರೇಲ್ ನಲ್ಲಿ ಏಳು ದಿನ ಕದನ ವಿರಾಮ ಘೋಷಿಸುವಂತೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಆಗ್ರಹಿಸಿದ್ದಾರೆ.
English summary
Top news in brief for the day:Uttar Pradesh Minister Azam Khan today indirectly took aim at the Hindu outfit RSS for the clashes in the state, saying plans to "jeopardise" the peace in UP was being done in Nagpur, the outfit's headquarters and many more news from the around the globe on July 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X