ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.26: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಆ.26: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

10.55: ನರೇಂದ್ರ ಮೋದಿ ಸರ್ಕಾರ ಬುಲೆಟ್ ರೈಲು ಯೋಜನೆ ಘೋಷಣೆ ಮಾಡುತ್ತಿದ್ದಂತೆ ಚೀನಾ ಹಾಗೂ ಜಪಾನ್ ದೇಶಗಳು ತಮ್ಮ ಬುಲೆಟ್ ರೈಲು ಭಾರತಕ್ಕೆ ಮಾರಾಟ ಮಾಡಲು ಪೈಪೋಟಿ ನಡೆಸಿವೆ.
10.50: ಅಹಮದಾಬಾದ್ ಹಾಗೂ ಮುಂಬೈ ಕಾರಿಡಾರ್ ನಡುವೆ ಬುಲೆಟ್ ರೈಲು ಓಡಿಸಲು ಜಪಾನ್ ಉತ್ಸುಕವಾಗಿದ್ದು, ಈಗಾಗಲೇ ಸಮೀಕ್ಷೆ ನಡೆಸಿರುವ ಸುದ್ದಿ ಬಂದಿದೆ.
10.45: ಭಾರತದ ಬುಲೆಟ್ ಟ್ರೈನ್ ಯೋಜನೆಗೆ ಮತ್ತೆ ಚಾಲನೆ ಬಂದಿದೆ. ಮುಂಬೈ, ದೆಹಲಿ ಆಗ್ರಾ, ಮೈಸೂರು-ಬೆಂಗಳೂರು- ಚೆನ್ನೈ, ಮುಂಬೈ-ಗೋವಾ ಹಾಗೂ ಹೈದರಾಬಾದ್-ಸಿಕಂದರಾಬಾದ್ ಮಾರ್ಗಗಳಲ್ಲಿ ಯೋಜನೆ ಜಾರಿಗೊಳ್ಳಲಿದೆ. ಸುಮಾರು 60,000 ಕೋಟಿ ವೆಚ್ಚದ ಯೋಜನೆ ಇದಾಗಿದೆ. [ಬುಲೆಟ್ ರೈಲಿನ ವಿಶೇಷತೆಗಳು!]

Updates India, International News in Brief Aug 26

10.20: ಫ್ರಾನ್ಸ್ ನಲ್ಲಿ ಸರ್ಕಾರ ವಿಸರ್ಜನೆಗೊಂಡಿದೆ. ದೇಶದ ತಟಸ್ಥ ಆರ್ಥಿಕತೆ ಬಗ್ಗೆ ತನ್ನದೇ ಸಚಿವ ಸಂಪುಟದಲ್ಲಿ ಎದ್ದಿರುವ ಬಹಿರಂಗ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಸೋಮವಾರ ಸರ್ಕಾರವನ್ನು ವಿಸರ್ಜಿಸಿದ್ದಾರೆ.
10.00 : ಫ್ರಾನ್ಸ್ ಪ್ರಧಾನಿ ಮ್ಯಾನುಯಲ್ ವಾಲ್ಸ್ ರಾಜೀನಾಮೆಯನ್ನು ಸ್ವೀಕರಿಸಿದ ಹೊಲಾಂಡ್, ಮಂಗಳವಾರದ ವೇಳೆಗೆ ನೂತನ ಸರಕಾರವನ್ನು ರಚಿಸುವಂತೆ ಅವರಿಗೆ ಸೂಚನೆ ನೀಡಿದರು.
9.45: ಮುಂಬೈ ವಿಮಾನ ನಿಲ್ದಾಣದಲ್ಲಿ ಎಬೋಲಾ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸೋಮವಾರ ಒಬ್ಬ ಪ್ರಯಾಣಿಕರಿಗೆ ಸೋಂಕು ಇರುವ ಶಂಕೆ ವ್ಯಕ್ತವಾಗಿತ್ತು.[ಎಬೋಲಾ ವೈರಾಣು ಭೀತಿ 'ಸೆಕ್ಸ್'ಗೂ ಕೊಕ್ಕೆ]
9.30: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಭಾರತೀಯ ಯೋಧರು ಹಾಗೂ 5 ಜನ ಉಗ್ರರು ಹತರಾಗಿದ್ದಾರೆ.
English summary
Top news in brief for the day: China and Japan are once again in competition, this time for the lucrative high speed rail network market in India and many more news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X