ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಾಪ್ ಬಳಕೆದಾರರೇ ಎಚ್ಚರ!: ಕೂಡಲೇ ಆಪ್ ಅಪ್ಡೇಟ್ ಮಾಡಿಕೊಳ್ಳಿ

|
Google Oneindia Kannada News

ನವದೆಹಲಿ, ಮೇ 14: ವಾಟ್ಸಾಪ್ ಬಳಕೆ ಈಗ ಊಟ, ನಿದ್ದೆಯಷ್ಟೇ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಹಾಸುಹೊಕ್ಕಾಗಿದೆ. ವಾಟ್ಸಾಪ್ ನೋಡದೆ ಬೆಳಕಾಗುವುದಿಲ್ಲ, ಕತ್ತಲೂ ಆಗುವುದಿಲ್ಲ ಎಂಬಂತೆ ನಾವು ಅದಕ್ಕೆ ಒಗ್ಗಿಹೋಗಿದ್ದೇವೆ. ವಾಟ್ಸಾಪ್ ಕೂಡ ಗ್ರಾಹಕರನ್ನು ಮೆಚ್ಚಿಸಲು ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಆದರೆ, ವಾಟ್ಸಾಪ್ ಬಳಕೆದಾರರಲ್ಲಿ ಹೆಚ್ಚಿನವರಿಗೆ ಅದನ್ನು ನಿರಂತರವಾಗಿ ಅಪ್‌ಡೇಟ್ ಮಾಡಬೇಕೆಂಬುದು ತಿಳಿದಿಲ್ಲ. ಈಗಂತೂ ನೀವು ಅದನ್ನು ಅಪ್ಡೇಟ್ ಮಾಡದೆ ಹೋದರೆ ಅಪಾಯ ತಪ್ಪಿದ್ದಲ್ಲ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ತನ್ನ ಎಲ್ಲ 1.5 ಬಿಲಿಯನ್ ಬಳಕೆದಾರರು ವಾಟ್ಸಾಪ್ ಅನ್ನು ಕೂಡಲೇ ಅಪ್‌ಡೇಟ್ ಮಾಡಿಕೊಳ್ಳುವಂತೆ ಸಂಸ್ಥೆ ಸೂಚನೆ ನೀಡಿದೆ.

ವಾಟ್ಸಾಪ್ ವಾಯ್ಸ್ ಕಾಲ್ ಮೂಲಕ ಮಿಸ್ಡ್ ಕಾಲ್ ಕೊಟ್ಟು ವೈರಸ್ ಅನ್ನು ಫೋನ್‌ನಲ್ಲಿ ಬಿಡುಗಡೆ ಮಾಡುವಂತಹ ಹೊಸ ಮಾದರಿಯ ಸೈಬರ್ ದಾಳಿ ನಡೆಯುವ ಅಪಾಯವನ್ನು ವಾಟ್ಸಾಪ್ ಸಂಸ್ಥೆ ಪತ್ತೆಹಚ್ಚಿದೆ. ಈ ರೀತಿ ದಾಳಿ ಮಾಡುವ ವೈರಸ್ ಮೂಲಕ ಫೋನ್‌ನಲ್ಲಿರುವ ಎಲ್ಲ ಮಾಹಿತಿಗಳನ್ನೂ ಕದಿಯಲಾಗುತ್ತದೆ. ಇದಕ್ಕೆ ಪರಿಹಾರ ಒದಗಿಸುವ ಸಲುವಾಗಿ ವಾಟ್ಸಾಪ್ ಹೊಸ ಸಾಪ್ಟ್‌ವೇರ್‌ಅನ್ನು ಸಿದ್ಧಪಡಿಸಿದೆ. ಅದಕ್ಕಾಗಿ ಕೂಡಲೇ ಅಪ್ಡೇಟ್ ಮಾಡಿಕೊಳ್ಳಿ ಎಂದು ಸಲಹೆ ನೀಡಿದೆ.

'ಮುಂದಿನ ವಾಟ್ಸಾಪ್ ಭಾರತದಿಂದ ಬರಲಿದೆ': ಸಿಇಒ ಅಭಿಜಿತ್ ಬೋಸ್ 'ಮುಂದಿನ ವಾಟ್ಸಾಪ್ ಭಾರತದಿಂದ ಬರಲಿದೆ': ಸಿಇಒ ಅಭಿಜಿತ್ ಬೋಸ್

ಈಗಾಗಲೇ ಅನೇಕ ವಾಟ್ಸಾಪ್ ಬಳಕೆದಾರರ ಫೋನ್‌ಗಳು ದುಷ್ಕರ್ಮಿಗಳು ಎಸಗುತ್ತಿರುವ ವೈರಸ್‌ ದಾಳಿಗೆ ತುತ್ತಾಗಿವೆ. ಮೇ ತಿಂಗಳ ಆರಂಭದಲ್ಲಿಯೇ ಈ ಬಗ್ಗೆ ಗೊತ್ತಾಗಿದೆ. ಕೂಡಲೇ ಅದಕ್ಕೆ ಪರಿಹಾರ ಒದಗಿಸುವ ಸಲುವಾಗಿ ಸಾಫ್ಟ್‌ವೇರ್ ಒಂದನ್ನು ಸಿದ್ಧಪಡಿಸಿ ಬಿಡುಗಡೆ ಮಾಡಲಾಗಿದೆ ಎಂದು ವಾಟ್ಸಾಪ್ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಆಪ್‌ನ ವಾಯ್ಸ್ ಕಾಲ್ ಫೀಚರ್ ಬಳಸಿಕೊಂಡು ಕರೆ ಮಾಡಲಾಗುತ್ತದೆ. ಇಲ್ಲಿ ಕರೆ ಸ್ವೀಕಾರ ಮಾಡದೆ ಇದ್ದರೂ ಫೋನ್‌ನಲ್ಲಿ ವೈರಸ್ ಅಳವಡಿಸಲಾಗುತ್ತದೆ. ಈ ಮೂಲಕ ಫೋನ್‌ನಲ್ಲಿರುವ ಮಹತ್ವದ ಮಾಹಿತಿ, ದಾಖಲೆಗಳನ್ನು ಕದಿಯುತ್ತಾರೆ.

ಇಸ್ರೇಲ್ ಸೈಬರ್ ವೈರಸ್

ಇಸ್ರೇಲ್ ಸೈಬರ್ ವೈರಸ್

ಇಸ್ರೇಲ್ ಸರ್ಕಾರಕ್ಕಾಗಿ ಕೆಲಸ ಮಾಡುವ ಎನ್‌ಎಸ್‌ಒ ಸಮೂಹ ಎಂಬ ಸೈಬರ್ ಕಂಪೆನಿ ಈ ಸ್ಪೈವೇರ್‌ಅನ್ನು ಸಿದ್ಧಪಡಿಸಿದೆ. ಇದು ಆಂಡ್ರಾಯ್ಡ್ ಮತ್ತು ಐಫೋನ್‌ಗಳೆರಡಕ್ಕೂ ಹಾನಿ ಮಾಡಬಲ್ಲದು ಎಂದು ವಾಟ್ಸಾಪ್ ಕಂಪೆನಿ ತಿಳಿಸಿದೆ.

ಅಪರಾಧ ಮತ್ತು ಭಯೋತ್ಪಾದನೆಯನ್ನು ತಡೆಗಟ್ಟುವ ಏಕೈಕ ಉದ್ದೇಶದಿಂದ ಅಧಿಕೃತ ಸರ್ಕಾರಿ ಸಂಸ್ಥೆಗಳಿಗೆ ಈ ತಂತ್ರಜ್ಞಾನದ ಪರವಾನಗಿ ನೀಡಲಾಗಿದೆ. ಪರವಾನಗಿ ನೀಡುವ ಮತ್ತು ಪರಿಶೀಲನೆಯ ಪ್ರಕ್ರಿಯೆ ನಡೆಸುವುದರಿಂದ ತಾನು ಈ ವ್ಯವಸ್ಥೆಯನ್ನು ನಿರ್ವಹಣೆ ಮಾಡುತ್ತಿಲ್ಲ ಎಂದು ಎನ್‌ಎಸ್‌ಒ ತಿಳಿಸಿದೆ.

Whatsapp ಗ್ರೂಪ್ ಕಿರಿಕಿರಿಗೆ ಸದ್ಯದಲ್ಲೇ ಗುಡ್ ಬೈ... ಹೇಗಂತೀರಾ? Whatsapp ಗ್ರೂಪ್ ಕಿರಿಕಿರಿಗೆ ಸದ್ಯದಲ್ಲೇ ಗುಡ್ ಬೈ... ಹೇಗಂತೀರಾ?

ವೈರಸ್ ಬಂದರೆ ಏನಾಗುತ್ತದೆ?

ವೈರಸ್ ಬಂದರೆ ಏನಾಗುತ್ತದೆ?

ಕೋಡ್ ಮೂಲಕ ಬರುವ ಕರೆಯು ಮೊಬೈಕ್ ಹ್ಯಾಕ್ ಮಾಡುತ್ತದೆ. ಮೊಬೈಲ್‌ನಲ್ಲಿ ಇರುವ ಎಲ್ಲ ಕರೆಗಳ ದಾಖಲೆ, ಸಂದೇಶ, ಇ-ಮೇಲ್‌ಗಳು, ಸಂಪರ್ಕ ಸಂಖ್ಯೆ, ಇತರೆ ಆಪ್‌ಗಳ ಮಾಹಿತಿ ಎಲ್ಲವನ್ನು ಕದಿಯಲಾಗುತ್ತದೆ. ಇದು ಇಸ್ರೇಲ್‌ನ ಸೈಬರ್ ಇಂಟೆಲಿಜೆನ್ಸ್ ಕಂಪೆನಿ ಎನ್‌ಎಸ್ಒಗೆ ಸಿಗುತ್ತದೆ. ಎಷ್ಟು ಫೋನ್‌ಗಳನ್ನು ಇದುವರೆಗೂ ಗುರಿಯಾಗಿಸಿ ಹ್ಯಾಕ್ ಮಾಡಲಾಗಿದೆ ಎಂಬುದರ ಬಗ್ಗೆ ಕಂಪೆನಿ ಮಾಹಿತಿ ನೀಡಿಲ್ಲ. ಈ ವೈರಸ್‌ ಅನ್ನು ಬಳಸಿಕೊಂಡು ಬಳಕೆದಾರರ ಫೋನ್ ಹ್ಯಾಕ್ ಮಾಡಿ ಮಾಹಿತಿ ಕದಿಯಲಾಗುತ್ತಿದೆ.

ಪತಿ ನಾಗ್ಪುರದಲ್ಲಿ, ಪತ್ನಿ ಅಮೆರಿಕ, ವಾಟ್ಸ್ ಅಪ್ ವಿಡಿಯೋ ಮೂಲಕ ವಿಚ್ಛೇದನಪತಿ ನಾಗ್ಪುರದಲ್ಲಿ, ಪತ್ನಿ ಅಮೆರಿಕ, ವಾಟ್ಸ್ ಅಪ್ ವಿಡಿಯೋ ಮೂಲಕ ವಿಚ್ಛೇದನ

ಯಾವ ಆವೃತ್ತಿ ಅಪ್‌ಡೇಟ್ ಮಾಡಬೇಕು?

ಯಾವ ಆವೃತ್ತಿ ಅಪ್‌ಡೇಟ್ ಮಾಡಬೇಕು?

ಹೀಗಾಗಿ ಆಂಡ್ರಾಯ್ಡ್‌ನ v2.19.134 ಮತ್ತು ಅದರ ಹಿಂದಿನ ಆವೃತ್ತಿ, ಐಫೋನ್‌ನ ಐಒಎಸ್ v2.19.51 ಹಾಗೂ ಹಿಂದಿನ ಆವೃತ್ತಿ, ವಿಂಡೋಸ್‌ ಫೋನ್‌ಗಳಲ್ಲಿನ v2.18.348 ಮತ್ತು ಹಿಂದಿನ ಅವೃತ್ತಿ ಹಾಗೂ ಟೈಜೆನ್‌ನ v2.18.15 ಮತ್ತು ಹಿಂದಿನ ಆವೃತ್ತಿಯ ಅಪ್ಲಿಕೇಷನ್‌ಗಳನ್ನು ಅಪ್‌ಡೇಟ್ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಅಪ್‌ಡೇಟ್ ಮಾಡಿಕೊಳ್ಳುವುದು ಹೇಗೆ?

ಅಪ್‌ಡೇಟ್ ಮಾಡಿಕೊಳ್ಳುವುದು ಹೇಗೆ?

ನಿಮ್ಮ ಮೊಬೈಲ್ ಅಂತರ್ಜಾಲ ಸಂಪರ್ಕ ಆನ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ ಆಪ್ ತೆರೆದು ಅಲ್ಲಿ ಮೇಲ್ಭಾಗದ ಎಡತುದಿಯಲ್ಲಿರುವ ಮೆನುವನ್ನು ಒತ್ತಬೇಕು. ಬಳಿಕ ಮೈ ಆಪ್ಸ್ ಆಂಡ್ ಗೇಮ್ಸ್ ತೆರೆಯಬೇಕು. ಒಂದು ವೇಳೆ ಇತ್ತೀಚೆಗೆ ಆಪ್ ಅಪ್‌ಡೇಟ್ ಆಗಿದ್ದರೆ ಮತ್ತೆ ಅಪ್‌ಡೇಟ್ ಮಾಡುವ ಅಗತ್ಯವಿಲ್ಲ. ಇಲ್ಲದಿದ್ದರೆ ವಾಟ್ಸಾಪ್‌ ಅಪ್‌ಡೇಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅಪ್‌ಡೇಟ್ ಮಾಡಬೇಕು.

ಆಪಲ್ ಫೋನ್‌ಗಳಲ್ಲಿ ಆಪ್ ಸ್ಟೋರ್‌ಗೆ ಹೋಗಿ ಪರದೆಯ ಕೆಳಭಾಗದಲ್ಲಿರುವ ಅಪ್‌ಡೇಟ್ಸ್‌ ಬಟನ್ ಕ್ಲಿಕ್ ಮಾಡಬೇಕು. ಅಲ್ಲಿ ವಾಟ್ಸಾಪ್ ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗಿರದೆ ಇದ್ದರೆ ಅಪ್‌ಡೇಟ್ ಮೇಲೆ ಕ್ಲಿಕ್ ಮಾಡಬೇಕು.

English summary
Whatsapp company directed all its 1.5 billion users to update the application as a spyware developed by the israeli cyber intelligence company NSO Group hacks the mobile phones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X