ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕ್ಸಲ್ ಪರ ಚಿಂತಕರ ಬಂಧನ ಈಗ, ಪಟ್ಟಿ ಸಿದ್ಧವಾಗಿದ್ದು ಯುಪಿಎ ಕಾಲದಲ್ಲಿ

|
Google Oneindia Kannada News

ನವದೆಹಲಿ, ಅಗಸ್ಟ್ 29: ನಕ್ಸಲರಿಗೆ ನೆರವು ನೀಡಿದ ಆರೋಪದ ಮೇಲೆ ಐವರನ್ನು ಬಂಧಿಸಿದ ಮಹಾರಾಷ್ಟ್ರ ಪೊಲೀಸರ ಕ್ರಮವನ್ನು ಕೇಂದ್ರ ಸರಕಾರವು ಬಲವಾಗಿ ಸಮರ್ಥಿಸಿಕೊಂಡಿದೆ. ಈಗ ಬಂಧನ ಆಗಿರುವವರ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳಿವೆ. ಇವರೆಲ್ಲ ದೊಡ್ಡ ಮಟ್ಟದ ಪಿತೂರಿ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಬಂಧಿತರು ನಕ್ಸಲಿಯರಿಗೆ ಆರ್ಥಿಕ ನೆರವು ಸೇರಿ ಇತರ ಸಹಾಯ ಮಾಡುತ್ತಿದ್ದರು ಎಂದು ಗೃಹ ಸಚಿವಾಲಯ ಹೇಳಿದೆ. ಇದರ ಜತೆಗೆ ಭಯೋತ್ಪಾದನಾ ಗುಂಪುಗಳ ಜತೆಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಗಳು ನಡೆಯುತ್ತಿದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಂಧಿತರಾಗಿರುವ ಐವರು ವಿಚಾರವಾದಿಗಳು ಯಾರು, ಅವರ ಹಿನ್ನೆಲೆ ಏನು?ಬಂಧಿತರಾಗಿರುವ ಐವರು ವಿಚಾರವಾದಿಗಳು ಯಾರು, ಅವರ ಹಿನ್ನೆಲೆ ಏನು?

ನಕ್ಸಲರು ಹಾಗೂ ಎಡಪಂಥೀಯ ಸಿದ್ಧಾಂತ ಹೊಂದಿರದವರ ಜತೆಗೂ ಸಂಪರ್ಕ ಸಾಧಿಸಲು ಯತ್ನಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದು, ಈ ಪ್ರಕರಣವು ನ್ಯಾಯಾಲಯದಲ್ಲಿ ಗಟ್ಟಿಯಾಗಿ ನಿಲ್ಲಲು ಬೇಕಾದ ಪ್ರಬಲ ಸಾಕ್ಷ್ಯಾಧಾರಗಳನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ.

UPA prepared list of 128 naxal friendly outfits, arrested sympathisers were part of it: Report

ಪುಣೆ ಪೊಲೀಸರು ಕೇಂದ್ರಕ್ಕೆ ವರದಿಯೊಂದನ್ನು ಸಲ್ಲಿಸಿದ್ದಾರೆ. ಅದರ ಪ್ರಕಾರ, 2012ರಲ್ಲಿ ಯುಪಿಎ ಸರಕಾರದಿಂದ 128 ಸಂಘಟನೆಗಳನ್ನು ಗುರುತಿಸಲಾಗಿತ್ತು. ಅವುಗಳಿಗೆ ನಕ್ಸಲರೊಂದಿಗೆ ಸಂಬಂಧವಿತ್ತು. ಎಲ್ಲ ರಾಜ್ಯಗಳಿಗೂ ಪತ್ರ ಬರೆದು, ಯಾವ ವ್ಯಕ್ತಿಗಳಿಗೆ ಈ ಸಂಘಟನೆಗಳಿಗೆ ಸಂಬಂಧವಿದೆಯೋ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು.

ಏನಿದು ಭೀಮಾ ಕೊರೆಗಾಂವ್ ವಿವಾದ? ವಿಚಾರವಾದಿಗಳ ಬಂಧನ ಏಕೆ?ಏನಿದು ಭೀಮಾ ಕೊರೆಗಾಂವ್ ವಿವಾದ? ವಿಚಾರವಾದಿಗಳ ಬಂಧನ ಏಕೆ?

ವರವರ ರಾವ್, ಸುಧಾ ಭಾರದ್ವಾಜ್, ಸುರೇಂದ್ರ ಗಡ್ಲಿಂಗ್, ರೋನಾ ವಿಲ್ಸನ್, ಅರುಣ್ ಫೆರಿರಾ, ವೆರ್ನಾನ್ ಗೊನ್ಸಾಲ್ವಿಸ್, ಮಹೇಶ್ ರಾವತ್ ಅವರು ಸಂಬಂಧಪಟ್ಟ ಸಂಸ್ಥೆಗಳು 128ರ ಪಟ್ಟಿಯಲ್ಲಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಮಾವೋವಾದಿಗಳ ನಂಟು: ಬಂಧಿತ ವಿಚಾರವಾದಿಗಳಿಗೆ ಸೆ.6ರ ವರೆಗೆ ಗೃಹ ಬಂಧನಮಾವೋವಾದಿಗಳ ನಂಟು: ಬಂಧಿತ ವಿಚಾರವಾದಿಗಳಿಗೆ ಸೆ.6ರ ವರೆಗೆ ಗೃಹ ಬಂಧನ

ಸಿಪಿಐ (ಮಾವೋಯಿಸ್ಟ್) ತನ್ನ ಗುರಿ ತಲುಪುವ ಉದ್ದೇಶದಿಂದ 'ನಗರ ಚಟುವಟಿಕೆ'ಗೆ ಹೆಚ್ಚು ಪ್ರಾಮುಖ್ಯ ನೀಡಿ, ಚಳವಳಿಗೆ ಬೆಂಬಲ ನೀಡಲಾರಂಭಿಸಿತ್ತು. ನಗರ ಚಟುವಟಿಕೆಗಳು ಆ ಸಂಘಟನೆಗೆ ನಾಯಕತ್ವ ಮತ್ತು ಸಂಪನ್ಮೂಲ ಒದಗಿಸುವ ಮುಖ್ಯ ಮೂಲವಾಗಿತ್ತು. ತಂತ್ರಜ್ಞಾನ, ಮಾಹಿತಿ, ತಜ್ಞರು ಮತ್ತಿತರ ಬೆಂಬಲ ನೀಡುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ.

English summary
The Centre will strongly back the action taken by the Maharashtra Police which arrested five persons on the charge that they were helping naxalites. The police say that the fresh arrests were made on the basis of solid evidence and there was a major conspiracy in the making.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X