ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಪಿ-ಕಾಂಗ್ರೆಸ್ ಮಧ್ಯೆ ಸೀಟು ಹಂಚಿಕೆ ಚೌಕಾಶಿ, ಏನಾಗಬಹುದು ಮೈತ್ರಿ?

By ವಿಕಾಸ್ ನಂಜಪ್ಪ
|
Google Oneindia Kannada News

ಲಖನೌ, ಜನವರಿ 21: ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ಮಧ್ಯೆ ಈಗ ಮೈತ್ರಿ ಚೌಕಾಶಿ ಆರಂಭವಾಗಿದೆ. ಕಾಂಗ್ರೆಸ್ 110 ಸ್ಥಾನಗಳನ್ನು ಬಿಟ್ಟುಕೊಡುವಂತೆ ಕಾಂಗ್ರೆಸ್ ಬೇಡಿಕೆಯಿಟ್ಟಿದೆ. ಆದರೆ ಅಖಿಲೇಶ್ ಯಾದವ್ 99 ಸ್ಥಾನಗಳನ್ನು ಬಿಟ್ಟುಕೊಡುವುದಾಗಿ ಹೇಳಿದ್ದಾರೆ.

ಪಕ್ಷದ ಪ್ರಣಾಳಿಕೆಯನ್ನು ಭಾನುವಾರ ಬಿಡುಗಡೆ ಮಾಡುವುದಕ್ಕೆ ಅಖಿಲೇಶ್ ಎಲ್ಲ ಸಿದ್ಧತೆ ನಡೆಸಿದ್ದಾರೆ. ಸದ್ಯದಲ್ಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಕ್ಕೆ ಪ್ರಾಮುಖ್ಯ ನೀಡಿರುವ ಅವರಿಗೆ, ಮೈತ್ರಿ ಮಾತುಕತೆ ನಂತರದ ಆದ್ಯತೆ. ಏಕೆಂದರೆ ಚುನಾವಣೆಗೆ ಸಮಯ ತುಂಬ ಹತ್ತಿರ ಇದೆ.[ಉತ್ತರಪ್ರದೇಶ: ಶಿವಪಾಲ್ ಸೇರಿದಂತೆ 191 ಅಭ್ಯರ್ಥಿಗಳ ಪಟ್ಟಿ ಪ್ರಕಟ]

Akhilesh Yadav

ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸುವುದಕ್ಕೆ ಜನವರಿ 24 ಕೊನೆ ದಿನವಾಗಿದೆ. ಅಖಿಲೇಶ್ ಶನಿವಾರ ಕಾಂಗ್ರೆಸ್ ನಾಯಕರ ಜತೆಗೆ ಬಾಗಿಲ ಹಿಂದಿನ ಮಾತುಕತೆ ನಡೆಸಿದ್ದಾರೆ. ಈ ಮಧ್ಯೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಅವರ ಜತೆ ಸೀಟು ಹಂಚಿಕೆ ವಿಚಾರವಾಗಿಯೇ ಮಾತು ಕತೆ ನಡೆಸಿದ್ದಾರೆ.[ಉತ್ತರ ಪ್ರದೇಶ: ಕಾಂಗ್ರೆಸ್-ಎಸ್ಪಿ ಗೆಲುವಿಗೆ 35-37% ಮತಗಳು ಸಾಕಂತೆ!]

ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಮಧ್ಯೆ ಮೈತ್ರಿ ಮುರಿದು ಬೀಳದಂತೆ ಏನೆಲ್ಲ ಪ್ರಯತ್ನ ಮಾಡಬೇಕೋ ಅದೆಲ್ಲವನ್ನೂ ಸ್ಥಳೀಯ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ.

English summary
There has been no breakthrough in the talks between the Samajwadi Party and the Congress in Uttar Pradesh. The Congress is now demanding 110 seats on which it wants to contest the Uttar Pradesh assembly elections. Chief Minister of UP, Akhilesh Yadav is however ready to offer just 99.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X