ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8ನೇ ತರಗತಿ ವಿದ್ಯಾರ್ಥಿಯಿಂದ ಆಪರೇಶನ್: ಹೀಗೊಂದು ಆಘಾತಕಾರೀ ಮಾಹಿತಿ!

|
Google Oneindia Kannada News

ಶಾಮ್ಲಿ, ಜುಲೈ 04: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶದ ಶಾಮ್ಲಿಯಲ್ಲಿರುವ ಆರ್ಯನ್ ಖಾಸಗಿ ಆಸ್ಪತ್ರೆಯಲ್ಲಿ 8 ನೇ ತರಗತಿಯ ವಿದ್ಯಾರ್ಥಿಯೊಬ್ಬ ರೋಗಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ನರ್ದೇವ್ ಸಿಂಗ್ ಎಂಬ ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ ರೋಗಿಯೊಬ್ಬರಿಗೆ ಆಪರೇಶನ್ ಮಾಡುತ್ತಿರುವ ದೃಶ್ಯ ಸೆರೆಯಾಗಿ ವಿವಾದ ಸೃಷ್ಟಿಸಿದೆ. ಆಸ್ಪತ್ರೆಯ ಕಾಂಪೌಂಡರ್ ರೋಗಿಗೆ ಅನಸ್ತೇಶಿಯಾ ನೀಡುತ್ತಿರುವುದೂ ಈ ವಿಡಿಯೋದಲ್ಲಿ ಸೆರೆಯಾಗಿದೆ. ಅಲ್ಲದೆ ಆಪರೇಶನ್ ನಡೆಯುತ್ತಿದ್ದ ಸಂದರ್ಭದಲ್ಲಿ ಹಲವಾರು ಸಿಬ್ಬಂದಿ ಜೊತೆಯಲ್ಲೇ ಇದ್ದು, ಅವರಿಗೆಲ್ಲ ಆಪರೇಶನ್ ಥಿಯೇಟರ್ ಒಳಗೆ ಬರಲು ಅನುಮತಿ ಸಿಕ್ಕಿದ್ದು ಹೇಗೆ ಎಂಬ ಅನುಮಾನ ಎದ್ದಿದೆ.

ಇದೆಂಥ ಆಸ್ಪತ್ರೆ ನೋಡಿ, ರೋಗಿಯನ್ನು ಬೆಡ್ ಶೀಟ್ ನಲ್ಲೇ ಎಳೆದೊಯ್ದರು! ಇದೆಂಥ ಆಸ್ಪತ್ರೆ ನೋಡಿ, ರೋಗಿಯನ್ನು ಬೆಡ್ ಶೀಟ್ ನಲ್ಲೇ ಎಳೆದೊಯ್ದರು!

ಈ ಆಸ್ಪತ್ರೆ ನರ್ದೇವ್ ಸಿಂಗ್ ಕುಟುಂಬಕ್ಕೆ ಸೇರಿದ್ದಾಗಿದ್ದು, ಈಗಾಗಲೇ ಈ ಆಸ್ಪತ್ರೆಯ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬಂದಿವೆ. ಕಳೆದ ಒಂದು ವರ್ಷದಲ್ಲಿ ವೈದ್ಯರ ನಿರ್ಲಕ್ಷ್ಯದಿಂದಲೇ ಈ ಆಸ್ಪತ್ರೆಯಲ್ಲಿ 20 ಕ್ಕೂ ಹೆಚ್ಚು ಜನ ಮೃತರಾಗಿದ್ದಾರೆ ಎಂದು, ಐದಕ್ಕೂ ಹೆಚ್ಚು ಜನ ಆಸ್ಪತ್ರೆ ವಿರುದ್ಧ ದಾವೆ ಹೂಡಿದ್ದಾರೆ.

UP Shocker! Class 8th pass student operates patient

ಈ ಕುರಿತು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಸ್ಪಗತ್ರೆಯ ಮಾಲೀಕನಿಗೆ ರಾಜಕೀಯ ಸಂಪರ್ಕ ಇರುವುದರಿಂದ ಇದುವರೆಗೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ.

English summary
In a shocking video that went viral on social media, a Class 8th student can be seen operating a patient at a private hospital in Uttar Pradesh's Shamli. Nardev Singh is apparently class eighth pass and owner of the Aryan hospital, where he could be seen operating the patient in the video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X