ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳ ಶಿಕ್ಷಣದ ಸಲುವಾಗಿ ಕಿಡ್ನಿ ಮಾರಲು ಮುಂದಾದ ಮಹಾತಾಯಿ

By ಗುಲಾಂ ರಬ್ಬಾನಿ ಸಾಷಾ
|
Google Oneindia Kannada News

ಆಗ್ರಾ, ಜೂನ್ 1: ಮಕ್ಕಳ ಸಲುವಾಗಿ ತಾಯಿ ಎಂಥ ತ್ಯಾಗಕ್ಕೂ ಸಿದ್ಧಳಾಗುತ್ತಾಳೆ ಅನ್ನೋದು ಕಾಲಾಂತರದಿಂದಲೂ ಸಾಬೀತಾಗುತ್ತಿರುವ ವಿಚಾರ. ಉತ್ತರಪ್ರದೇಶದಲ್ಲಿನ ಆಗ್ರಾದ ರೋಹ್ತಾ ವಲಯದಲ್ಲಿ ತನ್ನ ನಾಲ್ಕು ಮಕ್ಕಳ ವಿದ್ಯಾಭ್ಯಾಸ ಹಾಗೂ ಭವಿಷ್ಯಕ್ಕಾಗಿ ಮಹಿಳೆಯೊಬ್ಬರು ಕಿಡ್ನಿಯನ್ನೇ ಮಾರಾಟಕ್ಕೆ ಇಟ್ಟಿದ್ದಾರೆ.

ಸಾಮಾಜಿಕ ಸಂಘಟನೆಯೊಂದರ ಸಹಾಯದಿಂದ ಆರತಿ ಶರ್ಮಾ ಸಾಮಾಜಿಕ ಜಾಲ ತಾಣದಲ್ಲಿ ಪತ್ರವೊಂದನ್ನು ಅಪ್ ಲೋಡ್ ಮಾಡಿದ್ದಾರೆ. ದೇಶದಲ್ಲಿ ಅಗತ್ಯ ಇರುವ ಯಾರಿಗಾದರೂ ಕಿಡ್ನಿ ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ. ಆರತಿ ಅವರಿಗೆ ಮೂವರು ಹೆಣ್ಣು ಹಾಗೂ ಒಂದು ಗಂಡು ಮಗು.[ಅಣ್ಣನಿಗೆ ಕಿಡ್ನಿ ದಾನ ಮಾಡಿದ ತಮ್ಮ ಅನಿಲ್ - ಸಂದರ್ಶನ]

UP: Mother offers to sell kidney to pay daughters' education

ಸಿಬಿಎಸ್ ಇ ಶಾಲೆಯಲ್ಲಿ ಓದುತ್ತಿರುವ ಈ ಮಕ್ಕಳ ಶಾಲೆ ಫೀ ಕಟ್ಟುವುದಕ್ಕೆ ಆಗಿಲ್ಲ. ಆಗ ಶಾಲೆ ಆಡಳಿತ ಮಂಡಳಿ ಹೊರಗೆ ಕಳುಹಿಸಿದೆ. ಆರತಿ ಅವರ ಪತಿಯದು ರೆಡಿಮೇಡ್ ಬಟ್ಟೆ ವ್ಯಾಪಾರ. ಅಪನಗದೀಕರಣ ಘೋಷಣೆ ಆಗುವವರೆಗೆ ಈ ಕುಟುಂಬದಲ್ಲಿ ಯಾವುದೇ ಆರ್ಥಿಕ ಸಮಸ್ಯೆ ಇರಲಿಲ್ಲ. ಆದರೆ ಆ ನಂತರ ತೊಂದರೆಗೆ ಸಿಕ್ಕಿಕೊಂಡು, ಶಾಲೆಗೆ ಫೀ ಕಟ್ಟಲು ಸಾಧ್ಯವಾಗಿಲ್ಲ.

ಸ್ಥಳೀಯ ಅಧಿಕಾರಿಗಳನ್ನು ಬೇಟಿಯಾಗಿ ಮಕ್ಕಳಿಗೆ ಸಹಾಯ ಮಾಡುವುದಕ್ಕೆ ಆರತಿ ಕೇಳಿಕೊಂಡಿದ್ದಾರೆ. 'ಯೋಗ್ಯತೆಗೆ ತಕ್ಕಂತೆ ಮಕ್ಕಳನ್ನು ಓದಿಸಬೇಕು' ಎಂಬ ಒರಟು ಉತ್ತರಗಳೇ ಅವರಿಗೆ ಎದುರಾಗಿವೆ. ಕಡೆಗೆ ಮುಖ್ಯಮಂತ್ರಿ ಆದಿತ್ಯನಾಥ್ ರನ್ನೇ ಭೇಟಿಯಾಗಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಆದರೆ ಇನ್ನೂ ಯಾವ ನೆರವೂ ಸಿಕ್ಕಿಲ್ಲ.[ತೀರಿಕೊಂಡ ತಾಯಿಯ ಎದೆಹಾಲು ಕುಡಿಯಲು ಯತ್ನಿಸುತ್ತಿದ್ದ ಮಗು]

ಅಸಹಾಯಕರಾದ ಆರತಿ ಸಂಯಮ ಕಳೆದುಕೊಂಡು, ಬೇಟಿ ಬಚಾವೋ-ಬೇಟಿ ಪಡಾವೋ ಅನ್ನೋದೆಲ್ಲ ಬರೀ ಘೋಷಣೆ. ವಾಸ್ತವದಲ್ಲಿ ಯಾರೂ ಏನೂ ಮಾಡಲ್ಲ. ಎಲ್ಲರೂ ಭ್ರಷ್ಟರೇ. ಮತಕ್ಕಾಗಿ ಮಾತನಾಡುತ್ತಾರೆ ಅಷ್ಟೇ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಆರತಿ ಅವರ ಮಕ್ಕಳಿಗೆ ಐಎಎಸ್ ಆಗಿ, ಈ ದೇಶಕ್ಕಾಗಿ ಸೇವೆ ಮಾಡುವ ಕನಸಿದೆ. ಆದರೆ ಶಿಕ್ಷಣ ಪಡೆಯುವುದಕ್ಕೇ ಎಷ್ಟೆಲ್ಲ ಶ್ರಮ ಪಡಬೇಕಿದೆ.

English summary
In a perfect example that a mother can go to any extent for her children, a woman from Rohta region in Agra of Uttar Pradesh had offered to sell her kidney to anybody in need to pay the fees for the education of her daughter and ensure she her a secured life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X