ಭಾರತರತ್ನ ಪುರಸ್ಕೃತರಿಂದ ಈ ಬಾರಿಯೂ ಮತದಾನ ಸಾಧ್ಯವಿಲ್ಲ!

Posted By:
Subscribe to Oneindia Kannada

ಲಕ್ನೋ, ಫೆಬ್ರವರಿ 17: ನವಾಬರ ನಗರಿ ಲಕ್ನೋ ಲೋಕಸಭಾ ಕ್ಷೇತ್ರದಿಂದ ಸತತ ಐದು ಬಾರಿ ಆಯ್ಕೆಯಾಗಿ, ಲಕ್ನೋ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ 141ನೇ ಸಂಖ್ಯೆ ಹೊಂದಿರುವ 'ಭಾರತ ರತ್ನ' ಈ ಬಾರಿಯೂ ಮತದಾನ ಮಾಡಲು ಸಾಧ್ಯವಾಗುತ್ತಿಲ್ಲ.

ಹೌದು, ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮತದಾರರ ಗುರುತಿನ ಸಂಖ್ಯೆ141. ಅನಾರೋಗ್ಯ ಪೀಡಿತರಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ನಿಲ್ಲಿಸಿರುವ ವಾಜಪೇಯಿ ಅವರು 2004ರ ಲೋಕಸಭಾ ಚುನಾವಣೆಯಲ್ಲಿ ಕೊನೆ ಬಾರಿ ಮತದಾನ ಮಾಡಿದ್ದರು. ನಂತರ ಮತದಾನ ಮಾಡಿಲ್ಲ.

UP Elections 2017: Former PM Atal Bihari Vajpayee may not cast vote

1991,1996,1998,1999 ಮತ್ತು 2004ರ ಲೋಕಸಭಾ ಚುನಾವಣೆಗಳಲ್ಲಿ ಲಕ್ನೋ ಕ್ಷೇತ್ರದಿಂದ ವಾಜಪೇಯಿ ಆಯ್ಕೆಯಾಗಿದ್ದರು. 2009 ಮತ್ತು 2014ರಲ್ಲಿ ಬಿಜೆಪಿ ಅಭ್ಯರ್ಥಿಯೇ ಗೆದ್ದುಕೊಂಡಿದ್ದಾರೆ.

2007 ಮತ್ತು 2012ರ ವಿಧಾನಸಭಾ ಚುನಾವಣೆಗಳು ಹಾಗೂ 2009 ಮತ್ತು 2014ರ ಲೋಕಸಭಾ ಚುನಾವಣೆಗಳಲ್ಲಿ ಮತದಾನ ಮಾಡಲು ಅವರಿಗೆ ಸಾಧ್ಯವಾಗಿಲ್ಲ.

ಫೆಬ್ರವರಿ 19ರಂದು ವಿಧಾನಸಭಾ ಚುನಾವಣೆಯಲ್ಲಿಯೂ ಮತ ಚಲಾಯಿಸಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದು ವಾಜಪೇಯಿ ಅವರ ನಿಕಟ ಸಹಾಯಕ ಶಿವಕುಮಾರ್ ತಿಳಿಸಿದರು. ವಾಜಪೇಯಿಯವರು ಮತದಾನ ಮಾಡಬೇಕಾಗಿರುವ ಮತಗಟ್ಟೆ ಲಕ್ನೋ ಮಹಾನಗರ ಪಾಲಿಕೆ ಕಚೇರಿಯಲ್ಲಿ ಸ್ಥಾಪನೆಗೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Prime Minister Atal Bihari Vajpayee is unlikely to cast his vote in the Uttar Pradesh election due to poor health conditions. Voter No. 141 of Lucknow Central constituency was supposed to vote in the third phase of the 2017 election scheduled for Sunday on February 19.
Please Wait while comments are loading...