ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಚ ರಾಜ್ಯಗಳಲ್ಲಿ 115 ಮಿಲಿಯನ್ ಮತಗಳ ಎಣಿಕೆ ಆರಂಭ

|
Google Oneindia Kannada News

ಬಹುನಿರೀಕ್ಷಿತ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಘೋಷಣೆಯಲಾಗಲಿದೆ. ಹೀಗಾಗಿ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ ಮತ್ತು ಗೋವಾ ರಾಜ್ಯಗಳಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಐದು ರಾಜ್ಯಗಳಲ್ಲಿ ಹರಡಿರುವ 650 ಸ್ಥಾನಗಳಿಗೆ ಸುಮಾರು 115 ಮಿಲಿಯನ್ ಮತಗಳು ಎಣಿಕೆಯಾಗಲಿವೆ. 2024 ರ ಸಂಸತ್ತಿನ ಚುನಾವಣೆಗೂ ಮುನ್ನ ಈ ಚುನಾವಣೆಯನ್ನು ಸೆಮಿಫೈನಲ್ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಬಿಜೆಪಿ ಮತ್ತೆ ಅಧಿಕಾರ ಗದ್ದುಗೆ ಏರಲು ಪ್ರಯತ್ನಿಸುತ್ತಿದೆ.

ಪಂಚ ರಾಜ್ಯಗಳಲ್ಲಿ ಹರಡಿರುವ 650 ಸ್ಥಾನಗಳ ಪೈಕಿ ಅಧಿಕ ಸ್ಥಾನಗಳು ಉತ್ತರಪ್ರದೇಶದಲ್ಲಿರುವುದರಿಂದ ಈ ಬಾರಿ ಎಲ್ಲರ ಚಿತ್ತ ಉತ್ತರ ಪ್ರದೇಶದತ್ತ ನೆಟ್ಟಿದೆ. ಇಲ್ಲಿ ಬಿಜೆಪಿ ಇತಿಹಾಸ ನಿರ್ಮಿಸಲು ನೋಡುತ್ತಿದೆ. ಬಿಜೆಪಿ ಯುಪಿಯನ್ನು ಗೆದ್ದರೆ ಎರಡನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಂಡ ಸಾಧನೆಯಾಗುತ್ತದೆ.

Assembly Elections 2022 Results Live: ಪಂಚರಾಜ್ಯಗಳಲ್ಲಿ ಮತಎಣಿಕೆ ಆರಂಭAssembly Elections 2022 Results Live: ಪಂಚರಾಜ್ಯಗಳಲ್ಲಿ ಮತಎಣಿಕೆ ಆರಂಭ

ಮುಖ್ಯಮಂತ್ರಿಯಾಗಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಪದಚ್ಯುತಗೊಳಿಸಿದ ನಂತರ ಪಂಜಾಬ್ ಕೂಡ ಎದುರಿಸಿದ ರಾಜಕೀಯ ಗೊಂದಲಗಳನ್ನು ಪರಿಗಣಿಸಿದರೆ ಇದೂ ಆಸಕ್ತಿದಾಯಕ ಯುದ್ಧವಾಗಿದೆ. ಕ್ಯಾಪ್ಟನ್ ಸಿಂಗ್ ಅವರು ಕಾಂಗ್ರೆಸ್ ತೊರೆದ ನಂತರ ಹೊಸ ಪಕ್ಷವನ್ನು ಸ್ಥಾಪಿಸಿದರು. ಆಮ್ ಆದ್ಮಿ ಪಕ್ಷದ ಕದನವೂ ಇಲ್ಲಿ ಜೋರಾಗಿದೆ. ಹೀಗಾಗಿ ಪಂಜಾಬ್ ಚುನಾವಣೆ ಕೂಡ ಭಾರೀ ನಿರೀಕ್ಷೆಯನ್ನು ಹುಟ್ಟಿಸಿದೆ. ಇಲ್ಲಿಯವರೆಗೆ ಎಎಪಿ ರೇಸ್‌ನಲ್ಲಿ ಮುಂದುವರೆಯುತ್ತದೆ ಎಂದು ಎಕ್ಸಿಟ್ ಪೋಲ್‌ಗಳು ಹೇಳಿವೆ. AAP ಪಂಜಾಬ್ ಅನ್ನು ಗೆದ್ದರೆ, ಅದು ತನ್ನ ಮೊದಲ ಪೂರ್ಣ ರಾಜ್ಯವನ್ನು ಆಳುತ್ತದೆ. ದೆಹಲಿಯ ಹೊರಗೆ ತನ್ನ ಹೆಜ್ಜೆಗುರುತನ್ನು ವಿಸ್ತರಿಸುತ್ತದೆ.

UP Election Result 2022: 115 Million Votes to Be Counted Start for 5 State Polls

ಕೋವಿಡ್-19 ಪ್ರೋಟೋಕಾಲ್‌ಗಳ ನಡುವೆ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಉತ್ತರ ಪ್ರದೇಶದಲ್ಲಿ ವದಂತಿ ಹರಡುವಿಕೆ, ಪ್ರೋಟೋಕಾಲ್ ಮತ್ತು ತಪ್ಪು ಮಾಹಿತಿಗಳನ್ನು ಎದುರಿಸಲು ಭಾರತದ ಚುನಾವಣಾ ಆಯೋಗವು ಮೂರು ಹಂತದ ಭದ್ರತೆಯನ್ನು ಜಾರಿಗೆ ತಂದಿದೆ. ಎಲ್ಲಾ ಸ್ಟ್ರಾಂಗ್ ರೂಮ್‌ಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಕೇಂದ್ರ ಪಡೆಗಳಿಂದ ಒಳ ಬಂದೋಬಸ್ತ್ ಮಾಡಲಾಗುತ್ತಿದೆ. ಇದಲ್ಲದೇ ಸ್ಟ್ರಾಂಗ್ ರೂಂಗಳ 24/7 ಸಿಸಿಟಿವಿ ಕವರೇಜ್ ಇದೆ.

ಇನ್ನೂ ಮಣಿಪುರದಲ್ಲಿ 60 ಸ್ಥಾನಗಳ ಪೈಕಿ ಬಿಜೆಪಿಗೆ ಹೆಚ್ಚು ಸ್ಥಾನ ಸಿಗಬಹುದು ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತವೆ. 60 ಸ್ಥಾನಗಳ ಪೈಕಿ ಸುಮಾರು 26 ರಿಂದ 31 ದಾಟಲಿದೆ. ಈ ಮೂಲಕ ಬಿಜೆಪಿ ಮತ್ತೊಮ್ಮೆ ಅಧಿಕಾರ ಗದ್ದುಗೇರಲಿದೆ. ಮ್ಯಾಜಿಕ್ ನಂಬರ್ 31 ದಾಟಲಿದೆ ಎಂದು ಸಮೀಕ್ಷೆ ಹೇಳಿದೆ.

UP Election Result 2022: 115 Million Votes to Be Counted Start for 5 State Polls

ಉತ್ತರಖಂಡದಲ್ಲಿ ಕಾಂಗ್ರೆಸ್ ಪಕ್ಷ ಅತೀ ಹೆಚ್ಚು ಸ್ಥಾನಗಳನ್ನು ಪಡೆದರೆ, ಬಿಜೆಪಿ ಎರಡನೇ ಸ್ಥಾನಗಳನ್ನು ಪಡೆಯುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಸಮೀಕ್ಷೆ ಹೇಳಿದೆ. ಇನ್ನೂ ಗೋವಾದಲ್ಲಿ ಬಿಜೆಪಿ ಅಧಿಕ ಸಂಖ್ಯೆಯಲ್ಲಿ ಸ್ಥಾನಗಳನ್ನು ಪಡೆಯುವ ಮೂಲಕ ವಿಜಯದ ಪತಾಕೆ ಹಾರಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆ ಹೇಳಿದೆ. ಕಾಂಗ್ರೆಸ್ ಎರಡನೇ ಸ್ಥಾನವನ್ನು ಪಡೆಯಲಿದೆ ಎನ್ನಲಾಗಿದೆ.

Recommended Video

ಬಿಜೆಪಿ ಮತ್ತೆ ಕುದುರೆ ವ್ಯಾಪಾರ ಶುರು ಮಾಡಿದ್ರಾ ! | Oneindia Kannada

English summary
Uttar Prades Election Result 2022: The big day is here and the country would find out who has come out as a winner in the elections that were held in the five states of Uttar Pradesh, Punjab, Uttarakhand, Manipur and Goa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X