ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ ಗೆಲುವಿನೊಂದಿಗೆ ರಾಜ್ಯಸಭೆಯಲ್ಲೂ ಬಿಜೆಪಿಯದ್ದೇ ಕಾರುಬಾರು

ಉತ್ತರ ಪ್ರದೇಶದಲ್ಲಿ ಭರ್ಜರಿ ಗೆಲುವಿನೊಂದಿಗೆ ಭಾರತೀಯ ಜನತಾ ಪಕ್ಷ ಹೆಚ್ಚಿನ ರಾಜ್ಯಸಭಾ ಸ್ಥಾನಗಳನ್ನು ಗೆಲ್ಲಲಿದೆ. ಇದರಿಂದ ಅಲ್ಲಿಯೂ ಬಹುಮತ ಪಡೆಯುವತ್ತ ಹೆಜ್ಜೆ ಹಾಕಲಿದೆ.

By ಅನುಶಾ ರವಿ
|
Google Oneindia Kannada News

ನವದೆಹಲಿ, ಮಾರ್ಚ್ 11: ರಾಷ್ಟ್ರ ರಾಜಕಾರಣದಲ್ಲಿ ಉತ್ತರ ಪ್ರದೇಶ ಯಾಕೆ ಕಿಂಗ್ ಮೇಕರ್ ಎನ್ನಲು ಇಲ್ಲೊಂದು ಉತ್ತಮ ನಿದರ್ಶನವಿದೆ.

ಉತ್ತರ ಪ್ರದೇಶದಲ್ಲಿ ಭರ್ಜರಿ ಗೆಲುವಿನೊಂದಿಗೆ ಭಾರತೀಯ ಜನತಾ ಪಕ್ಷ ಹೆಚ್ಚಿನ ರಾಜ್ಯಸಭಾ ಸ್ಥಾನಗಳನ್ನು ಗೆಲ್ಲಲಿದೆ. ಇದರಿಂದ ಅಲ್ಲಿಯೂ ಬಹುಮತ ಪಡೆಯುವತ್ತ ಹೆಜ್ಜೆ ಹಾಕಲಿದೆ. ರಾಜ್ಯಸಭಾದಲ್ಲೂ ಬಹುಮತ ಪಡೆದರೆ ಕೇಂದ್ರ ತನಗೆ ಬೇಕಾದ ಕಾನೂನುಗಳನ್ನು ಆರಾಮವಾಗಿ ಜಾರಿಗೆ ತರಬಹುದು.[ಟ್ವಿಟ್ಟರ್ ಜೋಕ್ಸ್: ರಾಹುಲ್ ಬಿಜೆಪಿಗೆ ವೋಟ್ ಮಾಡಿದ್ದಾರಾ?]

250 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಿಜೆಪಿ ಸದ್ಯ 53 ಸದಸ್ಯರನ್ನು ಹೊಂದಿದೆ. ಆದರೆ 60 ಸದಸ್ಯರನ್ನು ಹೊಂದಿರುವ ಕಾಂಗ್ರೆಸಿಗಿಂತ ಹಿಂದಿದೆ. ಉತ್ತರ ಪ್ರದೇಶ ಗೆಲುವಿನೊಂದಿಗೆ ಬಿಜೆಪಿ ಕಾಂಗ್ರೆಸನ್ನು ಸುಲಭವಾಗಿ ಹಿಮ್ಮೆಟ್ಟಿಸಲಿದೆ.

UP Election Result 2017: With big Uttar Pradesh win, BJP is stronger in Rajya Sabha

ರಾಜ್ಯಸಭೆಯಲ್ಲಿ 31 ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶ ಇಡೀ ದೇಶದಲ್ಲೇ ಅತೀ ಹೆಚ್ಚಿನ ರಾಜ್ಯ ಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯವೂ ಹೌದು. ಇದರಲ್ಲಿ ಈಗಾಗಲೇ ಸಮಾಜವಾದಿ ಪಕ್ಷ 18, ಬಹುಜನ ಸಮಾಜವಾದಿ ಪಕ್ಷ 6, ಬಿಜೆಪಿ ಮತ್ತು ಕಾಂಗ್ರೆಸಿನಿಂದ ತಲಾ 3 ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಇದ್ದಾರೆ.[ಯುಪಿಯಲ್ಲಿ ತಮ್ಮೊಂದಿಗೆ ಎಸ್ಪಿಯನ್ನೂ ಮುಳುಗಿಸಿದ ರಾಹುಲ್]

ಯುಪಿ ಜಯಭೇರಿಯೊಂದಿಗೆ ಸದ್ಯ ರಾಜ್ಯ ಸಭೆಯಲ್ಲಿ ಅತೀ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಅವಕಾಶ ಬಿಜೆಪಿ ಮುಂದಿದೆ. ಯುಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಲು ಪ್ರತಿ ಸ್ಥಾನಕ್ಕೆ 34 ಮತಗಳು ಅಗತ್ಯವಾಗಿದ್ದು ಬಿಜೆಪಿ 9 ಸ್ಥಾನಗಳನ್ನು ಆರಾಮವಾಗಿ ಗೆಲ್ಲಬಹುದು. ಇನ್ನು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮೂವರನ್ನು ರಾಜ್ಯಸಭೆಗೆ ಕಳುಹಿಸಬಹುದು. ಆದರೆ ಬಿಎಸ್ಪಿಗೆ ಒಂದೂ ಸ್ಥಾನ ಗೆಲ್ಲಲು ಸಾದ್ಯವಿಲ್ಲ.
ಬಿಜೆಪಿ 9 ಸ್ಥಾನ ಗೆದ್ದರೂ ಬಹುಮತಕ್ಕೆ ಬೇಕಾದಷ್ಟು ಸ್ಥಾನಗಳು ದಕ್ಕುವುದಿಲ್ಲ. ಆದರೆ ಆ ನಿಟ್ಟಿನಲ್ಲಿ ಹೆಜ್ಜೆ ಹಾಕಬಹುದು ಅಷ್ಟೆ.[ಮತ ಯಂತ್ರಗಳ ದೋಷದಿಂದ ಬಿಜೆಪಿಗೆ ಜಯ: ಮಾಯಾವತಿ ದೂರು]

ನೋಟಾ ಮತಗಳಿಲ್ಲ

ಇಡೀ ಉತ್ತರ ಪ್ರದೇಶದಲ್ಲಿ ಕೇವಲ 1,12,207 'ನೋಟಾ' (NOTA - None Of The Above) ಮತಗಳಷ್ಟೆ ಚಲಾವಣೆಯಾಗಿವೆ. ಅಂದರೆ ಶೇಕಡಾ 0.9 ಮಾತ್ರ. ಇತ್ತೀಚಿನ ಚುನಾವಣೆಗಳಲ್ಲಿ ಬಹುಶಃ ಅತೀ ಕಡಿಮೆ ನೋಟಾ ಮತಗಳು ಚಲಾವಣೆಯಾಗಿದ್ದು ಉತ್ತರ ಪ್ರದೇಶದಲ್ಲಿ ಇರಬಹುದೇನೋ.

English summary
Only one per cent of the voters have used None Of The Above option. A total of 11,22,07 have exercised this option. The exact per centage of those who have exercised the NOTA is 0.9 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X