ಬಿಜೆಪಿ ದೂರವಿಡಲು 'ಆನೆ-ಸೈಕಲ್' ಒಂದಾಗ್ತೀವಿ - ಅಖಿಲೇಶ್

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಮಾರ್ಚ್ 09 : ಮತದಾನೋತ್ತರ ಸಮೀಕ್ಷೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ಅಧಿಕಾರಕ್ಕೇರಲು ಕೆಲವು ಸ್ಥಾನಗಳ ಕೊರತೆ ಕಾಣಿಸುತ್ತಿದೆ. ಇದೇ ವೇಳೆಗೆ ಬಿಬಿಸಿ ಜತೆ ಮಾತನಾಡಿರುವ ಅಖಿಲೇಶ್ ಯಾದವ್ ತಾನು ಬಿಎಸ್ಪಿ ಜತೆ ಕೈ ಜೋಡಿಸಲೂ ಸಿದ್ದ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುವುದು ಯಾರಿಗೂ ಬೇಕಾಗಿಲ್ಲ. ಬಿಜೆಪಿ ರಾಜ್ಯದಲ್ಲಿ ರಿಮೋಟ್ ಕಂಡ್ರೋಲ್ ಮೂಲಕ ಆಡಳಿತ ನಡೆಸುವುದು ಬೇಡ ಎಂದು ಅಖಿಲೇಶ್ ಹೇಳಿದ್ದಾರೆ.

UP Election Exit Poll Result 2017 : Akhilesh ready for tie up with BSP if SP falls short in UP

ಬಿಬಿಸಿ ಜತೆ ಸಂದರ್ಶನದಲ್ಲಿ ಮಾತನಾಡಿದ ಅವರು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ಅಧಿಕಾರ ನಡೆಸಲು ಸ್ಥಾನಗಳ ಕೊರತೆ ಕಂಡುಬಂದರೆ ಬಿಎಸ್ಪಿ ಜತೆ ಮೈತ್ರಿ ಮಾಡಿಕೊಳ್ಳಲು ನಾವು ಸಿದ್ದವಿದ್ದೇವೆ ಎಂದು ಹೇಳಿದ್ದಾರೆ. ಈ ಮೂಲಕ ಹೇಗಾದರೂ ಮಾಡಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಯೋಚಿಸಿದ್ದಾರೆ.

ಕಳೆದ 15 ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಎಸ್ಪಿ ಮತ್ತು ಬಿಎಸ್ಪಿ ಬದ್ಧ ವೈರಿಗಳಾಗಿರುವುದರಿಂದ ಅಖಿಲೇಶ್ ಯಾದವ್ ಹೇಳಿಕೆ ಹಲವರನ್ನು ಅಚ್ಚರಿಯಲ್ಲಿ ಕೆಡವಿದೆ. ಈಗಾಗಲೇ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡಿದೆ.

ಆದರೆ ಯಾವುದೇ ಚುನಾವಣೋತ್ತರ ಸಮೀಕ್ಷೆಗಳೂ ಎಸ್ಪಿ ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬರಲಿವೆ ಎಂದು ಹೇಳಿಲ್ಲ. ಹೆಚ್ಚಿನ ಸಮೀಕ್ಷೆಗಳು ಬಿಜೆಪಿ ಅಧಿಕಾರಕ್ಕೆ ಬರಲಿವೆ ಎಂದು ಹೇಳಿವೆ. ಆದರೆ ಯಾವುದೇ ಸಮೀಕ್ಷೆಗಳೂ ಬಹುಮತಕ್ಕಿಂತ ತುಂಬಾ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದಿಲ್ಲ ಎನ್ನುವುದೂ ಗಮನಾರ್ಹ.

ಹೀಗಾಗಿ ಬಿಜೆಪಿಗೆ ಬಹುಮತಕ್ಕೆ ಕೆಲವು ಸೀಟುಗಳ ಕೊರತೆ ಕಂಡು ಬಂದರೆ ಎಸ್ಪಿ-ಬಿಎಸ್ಪಿ-ಕಾಂಗ್ರೆಸ್ ತ್ರಿಕೋನ ಮೈತ್ರಿಕೂಟದ ಮೂಲಕ ಆಡಳಿತ ನಡೆಸುವ ಯೋಚನೆಯಲ್ಲಿ ಅಖಿಲೇಶ್ ಇದ್ದಂತೆ ಕಾಣಿಸುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
With the exit polls not giving the Samajwadi Party the best of chances in Uttar Pradesh, Akhilesh Yadav has said that he is ready for a tie up with the BSP.
Please Wait while comments are loading...