ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ರಾಷ್ಟ್ರಪತ್ನಿ' ಹೇಳಿಕೆ ವಿವಾದ: ಅಧೀರ್ ರಂಜನ್ ಚೌಧರಿ ದೇಶದ ಕ್ಷಮೆಯಾಚಿಸಲಿ ಎಂದ ಯೋಗಿ ಆದಿತ್ಯನಾಥ್

|
Google Oneindia Kannada News

ನವದೆಹಲಿ, ಜುಲೈ 29: ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ ನೀಡಿದ 'ರಾಷ್ಟ್ರಪತ್ನಿ' ಹೇಳಿಕೆ ವಿರುದ್ಧ ಬಿಜೆಪಿ ಟೀಕೆ ಮುಂದುವರೆಸಿದೆ. ಗುರುವಾರ ಲೋಕಸಭೆಯಲ್ಲಿ ಚೌಧರಿ ಹೇಳಿಕೆ ವಿರುದ್ಧ ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಅಧೀರ್ ರಂಜನ್ ಚೌಧರಿ ಹೇಳಿಕೆಯನ್ನು ಟೀಕಿಸಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಂಜನ್ ಚೌಧರಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕಟುವಾಗಿ ಟೀಕಿಸಿದ್ದಾರೆ. "ರಾಷ್ಟ್ರಪತಿಗಳ ಬಗ್ಗೆ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಮಾಡಿರುವ ಟೀಕೆ ಅತ್ಯಂತ ಖಂಡನೀಯ. ಈ ಹೇಳಿಕೆಯು ಭಾರತದ ಸಂವಿಧಾನಕ್ಕೆ ಮಾಡಿದ ಅವಮಾನವಾಗಿದೆ" ಎಂದು ಯೋಗಿ ಆದಿತ್ಯನಾಥ್ ಎಎನ್ಐಗೆ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ನಿಗಿ ನಿಗಿ ಕೆಂಡವಾದ ಸೋನಿಯಾ ಗಾಂಧಿಲೋಕಸಭೆಯಲ್ಲಿ ನಿಗಿ ನಿಗಿ ಕೆಂಡವಾದ ಸೋನಿಯಾ ಗಾಂಧಿ

ಹೇಳಿಕೆ ನೀಡಿರುವ ಅಧೀರ್ ರಂಜನ್ ಚೌಧರಿ ಮತ್ತು ಕಾಂಗ್ರೆಸ್ ಪಕ್ಷ ದೇಶದ ಕ್ಷಮೆ ಯಾಚಿಸಬೇಕು ಎಂದು ಅವರು ಒತ್ತಾಯಿಸಿದರು. "ರಾಷ್ಟ್ರಪತಿಗಳು ದೇಶದ ಅತ್ಯುನ್ನತ ಸಾಂವಿಧಾನಿಕ ಸ್ಥಾನವನ್ನು ಹೊಂದಿರುವುದರಿಂದ ಇದು ಭಾರತಕ್ಕೆ ಮಾಡಿದ ಅವಮಾನವಾಗಿದೆ. ಈ ಖಂಡನೀಯ ಹೇಳಿಕೆಗಾಗಿ, ಪಕ್ಷ ಮತ್ತು ಸಂಸದರು ಭಾರತದ ಕ್ಷಮೆಯಾಚಿಸಬೇಕು." ಎಂದು ಯೋಗಿ ಆದಿತ್ಯನಾಥ್ ಒತ್ತಾಯಿಸಿದರು.

 ಕ್ಷಮೆಯಾಚಿಸುವಂತೆ ಮುಖ್ಯಮಂತ್ರಿಗಳ ಒತ್ತಾಯ

ಕ್ಷಮೆಯಾಚಿಸುವಂತೆ ಮುಖ್ಯಮಂತ್ರಿಗಳ ಒತ್ತಾಯ

ಅಧೀರ್ ರಂಜನ್ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಕೂಡಲೇ ಕ್ಷಮೆ ಯಾಚನೆ ಮಾಡುವಂತೆ ಒತ್ತಾಯಿಸಿದ್ದಾರೆ. ದ್ರೌಪದಿ ಮುರ್ಮು ಬುಡಕಟ್ಟು ಜನಾಂಗದ ಪ್ರತಿನಿಧಿಯಾಗಿದ್ದಾರೆ, ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ದೇಶದ ಅತ್ಯುನ್ನತ ಹುದ್ದೆಯಲ್ಲಿದ್ದಾಗ ಅವರ ಬಗ್ಗೆ ಹೇಳಿಕೆ ನೀಡಬಾರದು ಎಂದು ಹೇಳಿದ್ದಾರೆ.

"ಇಂತಹ ಹೇಳಿಕೆ ನೀಡುವ ಮೂಲಕ, ಮಹಿಳೆಯರು ಮತ್ತು ರಾಷ್ಟ್ರಪತಿಗಳಿಗೆ ಅಗೌರವ ತೋರಿದ್ದಾರೆ" ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಹಿಮಾಚಲದ ಜೈರಾಮ್ ಠಾಕೂರ್ ಕೂಡ ರಂಜನ್ ಚೌಧರಿ ಹೇಳಿಕೆಗೆ ಟೀಕೆ ವ್ಯಕ್ತಪಡಿಸಿದ್ದಾರೆ.

 ದ್ರೌಪದಿ ಮುರ್ಮು ಬಳಿ ಕ್ಷಮೆಯಾಚಿಸುತ್ತೇನೆ, ಆದರೆ ಬಿಜೆಪಿ ವಂಚಕರ ಕ್ಷಮೆ ಕೇಳಲ್ಲ: ಅಧೀರ್ ರಂಜನ್ ಚೌಧರಿ ದ್ರೌಪದಿ ಮುರ್ಮು ಬಳಿ ಕ್ಷಮೆಯಾಚಿಸುತ್ತೇನೆ, ಆದರೆ ಬಿಜೆಪಿ ವಂಚಕರ ಕ್ಷಮೆ ಕೇಳಲ್ಲ: ಅಧೀರ್ ರಂಜನ್ ಚೌಧರಿ

 ಸಂಸತ್‌ನಲ್ಲಿ ಪ್ರತಿಭಟನೆ ಮಾಡಿದ್ದ ಬಿಜೆಪಿ

ಸಂಸತ್‌ನಲ್ಲಿ ಪ್ರತಿಭಟನೆ ಮಾಡಿದ್ದ ಬಿಜೆಪಿ

ಚೌಧರಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಬಿಜೆಪಿ ಗುರುವಾರ ಲೋಕಸಭೆಯಲ್ಲಿ ಭಾರಿ ಗದ್ದಲ ಸೃಷ್ಟಿಸಿತು. ಬಿಜೆಪಿ ನಾಯಕರು ಕಾಂಗ್ರೆಸ್ ಸಂಸದನ ವಿರುದ್ಧ ಹರಿಹಾಯ್ದರು. ರಾಷ್ಟ್ರಪತ್ನಿ ಎಂದು ಹೇಳಿಕೆ ನೀಡುವ ಮೂಲಕ ರಾಷ್ಟ್ರಪತಿಗಳಿಗೆ ಅವಮಾನ ಮಾಡಿದ್ದಾರೆ. ಚೌಧರಿ ಕೂಡಲೆ ಕ್ಷಮೆ ಕೇಳಬೇಕು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ನಿರ್ಮಲಾ ಸೀತಾರಾಮನ್ ಒತ್ತಾಯಿಸಿದ್ದರು.


ಗುರುವಾರ ವಿರೋಧ ಪಕ್ಷದ ಮೂವರು ಸಂಸದರನ್ನು ಅಮಾನುಗೊಳಿಸಲಾಗಿದೆ. ಒಟ್ಟಾರೆ ಅಮಾನತುಗೊಂಡ ಸಂಸದರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಒಂದು ದಿನವೂ ಕಲಾಪ ಸುಗಮವಾಗಿ ನಡೆದಿಲ್ಲ. ಇಷ್ಟು ದಿನ ವಿರೋಧ ಪಕ್ಷಗಳ ಪ್ರತಿಭಟನೆಯಿಂದ ಕಲಾಪ ವ್ಯರ್ಥವಾಗಿದ್ದರೆ, ಗುರುವಾರ ಆಡಳಿತ ಪಕ್ಷದ ನಾಯಕರೇ ಪ್ರತಿಭಟನೆ, ಕೋಲಾಹಲ ಸೃಷ್ಟಿಸಿದರು.

 ಶುಕ್ರವಾರವೂ ಮುಗಿಯದ ವಿವಾದ

ಶುಕ್ರವಾರವೂ ಮುಗಿಯದ ವಿವಾದ

ಸಂಸತ್ತಿನ ಮುಂಗಾರು ಅಧಿವೇಶನದ ಹತ್ತನೇ ದಿನವೂ ಬಿಜೆಪಿ-ಕಾಂಗ್ರೆಸ್ ನಡುವಿನ ವಾಕ್ಸಮರ ಮುಂದುವರೆದಿದೆ. ತನ್ನ ಹೇಳಿಕೆಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕ್ಷಮೆ ಯಾಚಿಸಲೇಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದೆ. ಆದರೆ ತಾನು ಯಾವುದೇ ಕಾರಣಕ್ಕೂ ಬಿಜೆಪಿ ನಾಯಕರ ಮುಂದೆ ಕ್ಷಮೆ ಯಾಚಿಸುವುದಿಲ್ಲ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
ಗುರುವಾರ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಚೌಧರಿ, ರಾಷ್ಟ್ರಪತಿ ಭೇಟಿಗಾಗಿ ಸಮಯ ಕೇಳಿದ್ದೇನೆ, ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮಾತನಾಡುತ್ತೇನೆ. ನನ್ನ ಹೇಳಿಕೆಯಿಂದ ಅವರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಾನು ಉದ್ದೇಶಪೂರ್ವಕವಾಗಿ ಹೇಳಿಕೆ ನೀಡಿಲ್ಲ, ಬಾಯಿ ತಪ್ಪಿ ಹೇಳಿದ್ದೇನೆ ಎಂದು ಸಮರ್ಥನೆ ಮಾಡಿಕೊಂಡಿದ್ದರು.

 ಡೋಂಟ್ ಟಾಕ್ ಟು ಮಿ ಎಂದ ಸೋನಿಯಾ ಗಾಂಧಿ

ಡೋಂಟ್ ಟಾಕ್ ಟು ಮಿ ಎಂದ ಸೋನಿಯಾ ಗಾಂಧಿ

ಚೌಧರಿ ಹೇಳಿಕೆ ವಿವಾದ ಪಡೆಯುತ್ತಿದ್ದಂತೆ ಸೋನಿಯಾ ಗಾಂಧಿ ಸ್ಪಷ್ಟನೆ ನೀಡಿದ್ದರು. ಚೌಧರಿ ತಮ್ಮ ಹೇಳಿಕೆಗೆ ಕ್ಷಮೆ ಕೋರಿದ್ದಾರೆ ಎಂದು ಸೋನಿಯಾ ತಿಳಿಸಿದ್ದರು. ಚೌಧರಿ ಈಗಾಗಲೇ ತಮ್ಮ ಹೇಳಿಕೆಗಳಿಗೆ ಕ್ಷಮೆಯಾಚಿಸಿದ್ದಾರೆ ಮತ್ತು ಬಿಜೆಪಿ ಅವರ ಹೆಸರನ್ನು ವಿವಾದಕ್ಕೆ ಎಳೆಯಬಾರದು ಎಂದು ವಿವರಿಸಲು ಸೋನಿಯಾ ಗಾಂಧಿ ಬಿಜೆಪಿ ಸಂಸದೆ ರಮಾ ದೇವಿ ಅವರಿಗೆ ಮನವರಿಕೆ ಮಾಡಿಕೊಡುತ್ತಿದ್ದರು.

ಸ್ಮೃತಿ ಇರಾನಿ ಸೇರಿದಂತೆ ಬಿಜೆಪಿಯ ಮಹಿಳಾ ಸಂಸದರ ಗುಂಪು ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕು ಎಂದು ಕೂಗುತ್ತಿದ್ದರು. ಇದರಿಂದ ಸಂಯಮ ಕಳೆದುಕೊಂಡ ಸೊನಿಯಾ ಗಾಂಧಿ ಸ್ಮೃತಿ ಇರಾನಿ ಬಳಿ ನನ್ನ ಹತ್ತಿರ ಮಾತನಾಡಬೇಡ ಎಂದು ನೇರವಾಗಿಯೇ ಹೇಳಿದ್ದರು.

Recommended Video

ಆಸ್ತಿ ಮಾಲೀಕರು ಕಟ್ಟಡದ ಪ್ಲಿಂತ್ ಲೈನ್ (ಬಿಪಿಎಲ್) ಸರಿಪಡಿಸುವಾಗ ಹುಷಾರ್ !! | OneIndia Kannada

English summary
Uttar Pradesh CM Yogi Adityanath among With BJP ruled state Chief Ministers Condemned the Adhir Ranjan Remark On President Draupadi murmu. The remark made by the Congress MP about the President is highly condemnable. This comment is also an insult to the constitution of India, Yogi Adityanath said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X