• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮದುವೆಯಾಗದ ಮುಸ್ಲಿಂ ಯುವಕರಿಗಿಲ್ಲ ಇರಾಕ್ ವೀಸಾ

|

ಬೆಂಗಳೂರು, ಡಿ. 5 : ಧಾರ್ಮಿಕ ಆಚರಣೆ ಹೆಸರಲ್ಲಿ ಇರಾಕ್ ಗೆ ತೆರಳುವ ಭಾರತೀಯ ಮುಸ್ಲಿಂ ಯುವಕರಿಗೆ ವೀಸಾ ನೀಡಿಕೆ ಪ್ರಕ್ರಿಯೆ ಜಟಿಲವಾಗಿದೆ. ಭಾರತದ ಯುವಕರು ಜಿಹಾದಿ ಸಂಘಟನೆಗಳಿಗೆ ಸೇರಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇರಾಕ್ ವೀಸಾ ನೀಡಿಕೆ ಏಜೆನ್ಸಿಗಳು ಕಠಿಣ ಕ್ರಮಕ್ಕೆ ಮುಂದಾಗಿವೆ.

ಮಹಾರಾಷ್ಟ್ರ ಕಲ್ಯಾಣದ ನಾಲ್ವರು ಯುವಕರು ಐಎಸ್ ಐಎಸ್ ಉಗ್ರ ಸಂಘಟನೆ ಸೇರಿದ ಪ್ರಕರಣದ ನಂತರ ಈ ಬೆಳವಣಿಗೆಯಾಗಿದೆ. 30 ವರ್ಷ ಕೆಳಗಿನ ಅವಿವಾಹಿತ ಭಾರತೀಯ ಯುವಕರಿಗೆ ಇರಾಕ್ ಏಜೆನ್ಸಿಗಳು ವೀಸಾ ನಿರಾಕರಣೆಗೆ ಮುಂದಾಗಿವೆ.[ಹಿಂದಿರುಗಿದ ಉಗ್ರ ಬಾಯ್ಬಿಟ್ಟ ಸ್ಫೋಟಕ ಮಾಹಿತಿಗಳು]

ಧಾರ್ಮಿಕ ಭೇಟಿ ನೆಪದಲ್ಲಿ ಇರಾಕ್ ಗೆ ತೆರಳುವ ಭಾರತೀಯ ಮುಸ್ಲಿಂ ಯುವಕರು ಜಿಹಾದಿ ಉಗ್ರ ಸಂಘಟನೆಗೆ ಸೇರಿಕೊಳ್ಳುವ ಆತಂಕ ಹೆಚ್ಚಾಗಿದ್ದು ಇಂಥ ತೀರ್ಮಾನಕ್ಕೆ ಬರಲಾಗಿದೆ ಎಂದು ಏಜೆನ್ಸಿಗಳು ತಿಳಿಸಿವೆ.[ಒಂದು ಕೈಯಲ್ಲಿ ಎಕೆ47, ಮತ್ತೊಂದು ಕೈಯಲ್ಲಿ ಮಗು!]

ಇರಾಕ್ ವೀಸಾ ನೀತಿ ಜಟಿಲ ಮಾಡಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.

ಇರಾಕ್ ಗೆ ತೆರಳಿ ಉಗ್ರ ಸಂಘಟನೆ ಸೇರಿ ಭಾರತಕ್ಕೆ ಹಿಂದಿರುಗಿದ್ದ ಅರೀಬ್ ಮಜೀದ್ ನನ್ನು ಇತ್ತೀಚೆಗಷ್ಟೇ ಪೊಲೀಸರು ಬಂಧಿಸಿದ್ದರು. ಪೊಲೀಸರ ಬಳಿ ಉಗ್ರ ಅನೇಕ ಮಹತ್ವದ ಮಾಹಿತಿಗಳನ್ನು ಬಾಯಿ ಬಿಟ್ಟಿದ್ದ. ಭಾರತದ 13 ಯುವಕರು ಕೆಲ ಕಾರಣಗಳಿಂದ ಉಗ್ರ ಸಂಘಟನೆ ಸೇರಿದ್ದಾರೆ ಎಂದು ಹೇಳಿದ್ದ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Iraq visa agency's decided to disclaimer visa to Indian Muslim Youths. Unmarried Muslim Youths did not get Iraq visa easily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more