ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನ್‌ಲಾಕ್ 5: ಶಾಲೆಗಳ ಪುನರಾರಂಭ ಯಾವಾಗ? ಹೇಗೆ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 30: ದೇಶದಾದ್ಯಂತ ಜಾರಿಯಲ್ಲಿದ್ದ ಅನ್‌ಲಾಕ್ ಪ್ರಕ್ರಿಯೆ 4.0 ಮುಕ್ತಾಯವಾಗಿದ್ದು, ಅಕ್ಟೋಬರ್ 1ರಿಂದ ಅನ್‌ಲಾಕ್ 5ರ ನಿಯಮಗಳು ಜಾರಿಯಾಗಲಿವೆ. ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ ಕೇಂದ್ರ ಸರ್ಕಾರ ಅನೇಕ ನಿಯಮಗಳಲ್ಲಿ ವಿನಾಯಿತಿ ನೀಡಿದೆ. ಇದರಲ್ಲಿ ಶಾಲೆಗಳನ್ನು ಮರು ಆರಂಭಿಸುವ ಸಂಗತಿಯೂ ಸೇರಿದೆ.

ದೇಶದ ಅನೇಕ ಭಾಗಗಳಲ್ಲಿ ಹಲವು ಶಾಲೆಗಳು ಆನ್‌ಲೈನ್ ತರಗತಿಗಳನ್ನು ನಡೆಸುತ್ತಿವೆ. ಆದರೆ, ಎಲ್ಲ ವಿದ್ಯಾರ್ಥಿಗಳಿಗೂ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹಾಗೆಂದು ಈಗ ಶಾಲೆಗಳನ್ನು ತೆರೆದು ವಿದ್ಯಾರ್ಥಿಗಳಿಗೆ ಪಾಠ ಮಾಡುವಂತಹ ಪರಿಸ್ಥಿತಿ ಇಲ್ಲ. ಇದುವರೆಗೂ ಶಾಲೆಗಳನ್ನು ಮರು ಆರಂಭಿಸಲು ನಿರ್ಬಂಧ ವಿಧಿಸಿದ್ದ ಕೇಂದ್ರ ಸರ್ಕಾರ, ತನ್ನ ನಿಯಮಗಳನ್ನು ಸಡಿಲಿಸಿದೆ. ಶಾಲೆ ತೆರೆಯುವ ಹಾಗೂ ಶಿಕ್ಷಣ ಸಂಬಂಧಿ ಚಟುವಟಿಕೆಗಳನ್ನು ನಡೆಸುವ ಸ್ವಾತಂತ್ರ್ಯವನ್ನು ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದೆ.

Breaking ಅನ್‌ಲಾಕ್ 5.0 ಬಿಡುಗಡೆ: ಚಿತ್ರಮಂದಿರ ತೆರೆಯಲು ಅನುಮತಿBreaking ಅನ್‌ಲಾಕ್ 5.0 ಬಿಡುಗಡೆ: ಚಿತ್ರಮಂದಿರ ತೆರೆಯಲು ಅನುಮತಿ

ಕೇಂದ್ರ ಸರ್ಕಾರ ಹೊರಡಿಸಿರುವ ಅನ್‌ಲಾಕ್ 5ರ ಮಾರ್ಗಸೂಚಿ ಪ್ರಕಾರ ಶಾಲೆಗಳನ್ನು ಆರಂಭಿಸುವ ನಿರ್ಧಾರವನ್ನು ರಾಜ್ಯ ಸರ್ಕಾರಗಳು ತೆಗೆದುಕೊಳ್ಳಬಹುದಾಗಿದೆ. ಅಕ್ಟೋಬರ್ 15ರ ನಂತರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಅನುಮತಿ ನೀಡಲಾಗಿದೆ. ಆದರೆ ಅದಕ್ಕೆ ಅನೇಕ ನಿಬಂಧನೆಗಳು ಕೂಡ ಇವೆ. ಮುಂದೆ ಓದಿ...

ಸರ್ಕಾರಗಳಿಗೆ ಅವಕಾಶ

ಸರ್ಕಾರಗಳಿಗೆ ಅವಕಾಶ

ಶಾಲೆಗಳು ಮತ್ತು ತರಬೇತಿ ಸಂಸ್ಥೆಗಳನ್ನು ಶ್ರೇಣೀಕೃತ ಮಾದರಿಯಲ್ಲಿ ಪುನಃ ಆರಂಭಿಸಲು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳಿಗೆ ಅ. 15ರ ಬಳಿಕ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ನೀಡಲಾಗಿದೆ. ಸಂಬಂಧಿತ ಶಾಲೆ/ಮ್ಯಾನೇಜ್ಮೆಂಟ್ ಜತೆ ಸಮಾಲೋಚನೆ ನಡೆಸಿ, ಅಲ್ಲಿನ ಪರಿಸ್ಥಿತಿಗಳ ಮೌಲ್ಯಮಾಪನ ಮತ್ತು ಷರತ್ತುಗಳ ಅಡಿ ನಿರ್ಧಾರ ತೆಗೆದುಕೊಳ್ಳಬಹುದು.

ವಿದ್ಯಾರ್ಥಿಗಳ ಆದ್ಯತೆ ಮುಖ್ಯ

ವಿದ್ಯಾರ್ಥಿಗಳ ಆದ್ಯತೆ ಮುಖ್ಯ

* ಆನ್‌ಲೈನ್/ದೂರ ಶಿಕ್ಷಣಗಳನ್ನು ಬೋಧನೆಯ ಮಾದರಿಯಾಗಿ ಮುಂದುವರಿಸಬಹುದು. ಇದಕ್ಕೆ ಉತ್ತೇಜನ ನೀಡಬಹುದು.

* ಆನ್‌ಲೈನ್ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳಲ್ಲಿ ಮತ್ತು ತರಗತಿಗಳಿಗೆ ಖುದ್ದು ಹಾಜರಾಗುವುದಕ್ಕಿಂತ ಆನ್‌ಲೈನ್ ತರಗತಿಗಳಿಗೇ ಹಾಜರಾಗಲು ವಿದ್ಯಾರ್ಥಿಗಳು ಆದ್ಯತೆ ನೀಡುವಲ್ಲಿ, ಅದಕ್ಕೆ ಅನುಮತಿಯನ್ನು ನೀಡಬೇಕಾಗುತ್ತದೆ.

ಪೋಷಕರ ಅನುಮತಿ ಬೇಕು

ಪೋಷಕರ ಅನುಮತಿ ಬೇಕು

* ಪೋಷಕರ ಲಿಖಿತ ಸಮ್ಮತಿ ಇದ್ದರೆ ಮಾತ್ರವೇ ವಿದ್ಯಾರ್ಥಿಗಳು ಶಾಲೆ ಅಥವಾ ಶಿಕ್ಷಣ ಸಂಸ್ಥೆಗಳಿಗೆ ಹಾಜರಾಗಬಹುದು.

* ತರಗತಿಗಳಲ್ಲಿ ಹಾಜರಾತಿಯನ್ನು ಹೇರಲು ಸಾಧ್ಯವಿಲ್ಲ. ಇದು ಸಂಪೂರ್ಣವಾಗಿ ಪೋಷಕರ ಸಮ್ಮತಿಯ ಮೇರೆಗೆ ಅವಲಂಬಿತವಾಗಿರುತ್ತದೆ.

ತಮ್ಮದೇ ನಿಯಮಗಳನ್ನು ರೂಪಿಸಬೇಕು

ತಮ್ಮದೇ ನಿಯಮಗಳನ್ನು ರೂಪಿಸಬೇಕು

* ಶಾಲೆಗಳನ್ನು ಮತ್ತು ಇತರೆ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಶಿಕ್ಷಣ ಸಚಿವಾಲಯ ಹೊರಡಿಸುವ ಎಸ್‌ಒಪಿ ಆಧಾರದಲ್ಲಿ ಅರೋಗ್ಯ ಹಾಗೂ ಸುರಕ್ಷತೆಯ ಮುನ್ನೆಚ್ಚರಿಕೆ ಕ್ರಮಗಳಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳು ತಮ್ಮದೇ ಎಸ್‌ಒಪಿಯನ್ನು ಸಿದ್ಧಪಡಿಸಬೇಕು.

* ಪುನರಾರಂಭಿಸಲು ಅನುಮತಿ ಪಡೆದ ಶಾಲೆಗಳು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಇಲಾಖೆಗಳು ಹೊರಡಿಸುವ ಎಸ್‌ಒಪಿಯನ್ನು ಪಾಲನೆ ಮಾಡುವುದು ಕಡ್ಡಾಯವಾಗಿದೆ.

ಕಾಲೇಜುಗಳು ಶುರುವಾಗುತ್ತದೆಯೇ?

ಕಾಲೇಜುಗಳು ಶುರುವಾಗುತ್ತದೆಯೇ?

* ಉನ್ನತ ಶಿಕ್ಷಣ ಇಲಾಖೆಯು ಪರಿಸ್ಥಿತಿಯ ಮೌಲ್ಯ ಮಾಪನದ ಆಧಾರದಲ್ಲಿ ಗೃಹ ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಕಾಲೇಜುಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಸಮಯವನ್ನು ನಿರ್ಧರಿಸಲಿದೆ. ಆನ್‌ಲೈನ್ ಅಥವಾ ದೂರಶಿಕ್ಷಣ ಕಲಿಕೆಗೆ ಬೋಧನೆಯ ಆದ್ಯತೆಯನ್ನಾಗಿ ಮುಂದುವರಿಸಲು ಸಲಹೆ ನೀಡಲಾಗಿದೆ.

English summary
Unlock 5.0 Guidelines: Union government said states/UTs can take a decision after October 15 for re-opening of schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X