ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ. 1 ರಿಂದ ಜಾರಿಯಾಗಲಿದೆ ಅನ್ ಲಾಕ್ 5.O: ಯಾವುದೆಲ್ಲ ಓಪನ್ ಆಗುತ್ತೆ ಗೊತ್ತಾ?

|
Google Oneindia Kannada News

ನವದೆಹಲಿ, ಸಪ್ಟೆಂಬರ್.28: ನೊವೆಲ್ ಕೊರೊನಾವೈರಸ್ ಸೋಂಕು ಹರಡುವಿಕೆ ನಿಯಂತ್ರಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅನ್ ಲಾಕ್ 4.0 ನಿಯಮಗಳು ಸಪ್ಟೆಂಬರ್.30ರಂದು ಅಂತ್ಯಗೊಳ್ಳಲಿವೆ.

Recommended Video

UNLOCK 5.0 ಎನಿರತ್ತೆ ? ಎನಿರಲ್ಲಾ?? | Oneindia Kannada

ಕೊರೊನಾವೈರಸ್ ಸೋಂಕಿನಿಂದ ತತ್ತರಿಸಿದ ದೇಶದ ಏಳು ಪ್ರಮುಖ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚಿಗಷ್ಟೇ ವಿಡಿಯೋ ಸಂವಾದ ನಡೆಸಿದ್ದರು. ಮೈಕ್ರೋ ಕಂಟೇನ್ಮೆಂಟ್ ಝೋನ್ ಪರಿಕಲ್ಪನೆ ಬಗ್ಗೆ ಚರ್ಚಿಸಲಾಗಿತ್ತು. ನವದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಏಳು ರಾಜ್ಯಗಳ ಸಿಎಂಗಳಿಗೆ ಕೊವಿಡ್-19 ಸೋಂಕು ನಿಯಂತ್ರಿಸುವ ಉದ್ದೇಶದಿಂದ ವಾರದಲ್ಲಿ ಒಂದರಿಂದ ಎರಡು ದಿನ ಲಾಕ್ ಡೌನ್ ಮಾಡುವಂತೆ ಪ್ರಧಾನಿ ಮೋದಿ ಸಲಹೆ ನೀಡಿದ್ದರು.

ಕರ್ನಾಟಕ ಅನ್ ಲಾಕ್ 4.0 ಮಾರ್ಗಸೂಚಿಯಲ್ಲಿ ಇರುವುದೇನು? ಕರ್ನಾಟಕ ಅನ್ ಲಾಕ್ 4.0 ಮಾರ್ಗಸೂಚಿಯಲ್ಲಿ ಇರುವುದೇನು?

ಅಕ್ಟೋಬರ್.01ರಿಂದ ದೇಶಾದ್ಯಂತ ಅನ್ ಲಾಕ್ 5.0 ಜಾರಿಗೊಳ್ಳಲಿದೆ. ಈ ಬಾರಿ ಕೇಂದ್ರ ಸರ್ಕಾರವು ಯಾವೆಲ್ಲ ವಲಯಗಳ ಪುನಾರಂಭಕ್ಕೆ ಅನುಮತಿ ನೀಡುತ್ತದೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ. ಹೊಸ ಮಾರ್ಗಸೂಚಿಯಲ್ಲಿ ಏನಿರುತ್ತದೆ ಏನಿರುವುದಿಲ್ಲ ಎಂಬುದರ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಆರ್ಥಿಕ ವಲಯದಲ್ಲಿ ಚಟುವಟಿಕೆ

ಆರ್ಥಿಕ ವಲಯದಲ್ಲಿ ಚಟುವಟಿಕೆ

ಭಾರತದಲ್ಲಿ ಶಾಪಿಂಗ್ ಮಾಲ್, ರೆಸ್ಟೋರೆಂಟ್, ಸಲೂನ್, ಜಿಮ್ ಗಳ ಪುನಾರಂಭಕ್ಕೆ ಕೇಂದ್ರ ಗೃಹ ಸಚಿವಾಲಯವು ಅನುಮತಿ ನೀಡಿದೆ. ಅಕ್ಟೋಬರ್.01ರಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಈ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ಅನುಮತಿ ಸಿಗಲಿದೆ. ಇದರ ಜೊತೆಗೆ ಕೊರೊನಾವೈರಸ್ ಹರಡುವಿಕೆ ತಡೆಯುವ ರೀತಿಯಲ್ಲಿ ಕಂಟೇನರ್ ‌ಗಳು ಮತ್ತು ಲಾಕ್‌ಡೌನ್‌ಗಳನ್ನು ಮರು ಮೌಲ್ಯಮಾಪನ ಮಾಡುವಂತೆ ಪ್ರಧಾನಿ ಮೋದಿ ರಾಜ್ಯಗಳನ್ನು ಕೋರಿದ್ದಾರೆ. ಈ ಕಾರಣದಿಂದ ಆರ್ಥಿಕ ಚಟುವಟಿಕೆಗಳಿಗೆ ಸಮಸ್ಯೆಯಾಗಬಾರದು. ಇದರ ಬದಲಿಗೆ ಪರಿಣಾಮಕಾರಿ ಪರೀಕ್ಷೆ, ಚಿಕಿತ್ಸೆ ಮತ್ತು ಕಣ್ಗಾವಲು ಮತ್ತು ಸ್ಪಷ್ಟ ಸಂದೇಶ ಕಳುಹಿಸುವಿಕೆ ಮೇಲೆ ನಾವು ಗಮನ ಹರಿಸಬೇಕಿದೆ" ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಮನರಂಜನೆ

ಮನರಂಜನೆ

ದೇಶಾದ್ಯಂತ ಅಕ್ಟೋಬರ್.01ರಿಂದ ಸಿನಿಮಾ ಹಾಲ್ ಗಳನ್ನು ತೆರೆಯುವುದಕ್ಕೆ ಅನುಮತಿ ಸಿಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಮಿತ್ ಖರೆ, ಚಿತ್ರಮಂದಿರಗಳನ್ನು ತೆರೆಯುವುದಕ್ಕೆ ಕೇಂದ್ರ ಗೃಹ ಸಚಿವಾಲಯಕ್ಕೆ ಸಲಹೆ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಅಕ್ಟೋಬರ್.01 ರಿಂದ ಸಿನಿಮಾ ಥಿಯೇಟರ್ ಗಳ ಪುನಾರಂಭಿಸಲು ತೀರ್ಮಾನಿಸಲಾಗಿದ್ದು, ಶೇ.50 ಮಾತ್ರ ವೀಕ್ಷಕರಿಗೆ ಅನುಮತಿ ನೀಡಲಾಗುತ್ತದೆ. ಸಾಮಾಜಿಕ ಅಂತರ ಮತ್ತು ಕೊವಿಡ್-19 ಮಾರ್ಗಸೂಚಿ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ.

ಪ್ರವಾಸಿಗರಿಗೆ ಸಿಹಿಸುದ್ದಿ

ಪ್ರವಾಸಿಗರಿಗೆ ಸಿಹಿಸುದ್ದಿ

ಕೊರೊನಾವೈರಸ್ ಸೋಂಕು ಹರಡುವಿಕೆ ಮತ್ತು ಭಾರತ ಲಾಕ್ ಡೌನ್ ನಿಂದಾಗಿ ಪ್ರವಾಸೋದ್ಯಮ ವಲಯಕ್ಕೆ ಭಾರಿ ಹೊಡೆತ ಬಿದ್ದಿತ್ತು. ಅಕ್ಟೋಬರ್.01 ರಿಂದ ದೇಶಾದ್ಯಂತ ಪ್ರಮುಖ ಪ್ರವಾಸಿ ತಾಣಗಳನ್ನು ತೆರೆಯುವುದಕ್ಕೆ ಅನುಮತಿ ಸಿಗಲಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಉತ್ತರಾಖಂಡ್ ಸರ್ಕಾರವು ರಾಜ್ಯದಲ್ಲಿರುವ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಕಳೆದ ಆಕ್ಟೋಬರ್.21ರಂದು ಆಗ್ರಾದಲ್ಲಿ ಇರುವ ಪ್ರೇಮಸೌಧ ತಾಜ್ ಮಹಲ್ ಪ್ರವೇಶಕ್ಕೆ ಸರ್ಕಾರವು ಅನುಮತಿ ನೀಡಿತ್ತು. ಕೊವಿಡ್-19 ಹರಡುವಿಕೆ ಭೀತಿಯಲ್ಲಿ ಮುಚ್ಚಲಾಗಿದ್ದ ತಾಜ್ ಮಹಲ್ ನ್ನು ತೆರೆಯಲಾಗಿದ್ದು, ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿತ್ತು.

ದೇಶದಲ್ಲಿನ ಶಾಲಾ-ಕಾಲೇಜುಗಳ ಕಥೆ

ದೇಶದಲ್ಲಿನ ಶಾಲಾ-ಕಾಲೇಜುಗಳ ಕಥೆ

ಅನ್ ಲಾಕ್ 4.0 ಮಾರ್ಗಸೂಚಿಗಳ ಪ್ರಕಾರ, ದೇಶಾದ್ಯಂತ ಹಲವಾರು ಶಾಲೆಗಳಲ್ಲಿ ಸೆಪ್ಟೆಂಬರ್ 21 ರಿಂದ 9-12 ತರಗತಿಯ ವಿದ್ಯಾರ್ಥಿಗಳಿಗೆ ಪುನರಾರಂಭಿಸಲು ಅನುಮತಿ ನೀಡಲಾಗಿತ್ತು. ಮುಂದಿನ ತಿಂಗಳು ಕೂಡಾ ಈ ನಿಯಮವನ್ನೇ ಮುಂದುವರಿಸುವ ಸಾಧ್ಯತೆಯಿದೆ. ಪ್ರಾಥಮಿಕ ತರಗತಿಗಳು ಇನ್ನೂ ಕೆಲವು ವಾರಗಳವರೆಗೆ ಮುಚ್ಚಲ್ಪಡುತ್ತವೆ. ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಿಗೆ ಸಂಬಂಧಿಸಿದಂತೆ, ಸಂಸ್ಥೆಗಳು ಈಗಾಗಲೇ ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿವೆ. ನೂತನ ಶೈಕ್ಷಣಿಕ ವರ್ಷವು ಆನ್‌ಲೈನ್ ತರಗತಿಗಳ ಮೂಲಕ ಪ್ರಾರಂಭವಾಗಲಿದೆ ಎಂದು ತಿಳಿದು ಬಂದಿದೆ.

English summary
Unlock 5.0 Guidelines: Cinema Halls, Tourism, Educational Institutions; What To Expect In October.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X