ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನ್‌ಲಾಕ್‌ 4 ಮಾರ್ಗಸೂಚಿ: ಶಾಲೆ, ಚಿತ್ರಮಂದಿರ ತೆರೆಯಲು ಒಪ್ಪಿಗೆ ಇಲ್ಲ

|
Google Oneindia Kannada News

ನವದೆಹಲಿ, ಆಗಸ್ಟ್ 29: ಕೇಂದ್ರ ಸರ್ಕಾರವು ಅನ್‌ಲಾಕ್‌ 4 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಅನ್‌ಲಾಕ್ 4 ನಿಯಮ ಘೋಷಣೆಯಾಗಿದ್ದು, ಸೆಪ್ಟೆಂಬರ್ 7 ರಿಂದ ಮೆಟ್ರೋ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.ಹಂತ ಹಂತವಾಗಿ ಮೆಟ್ರೋ ರೈಲು ಸಂಚಾರ ಆರಂಭಗೊಳ್ಳಲಿದೆ. ರೈಲಿನಲ್ಲಿ 100 ಮಂದಿ ಮಾತ್ರ ಸಂಚರಿಸಬಹುದಾಗಿದೆ.

ಶಾಲೆ, ಕಾಲೇಜುಗಳು, ಈಜುಕೊಳ, ಥಿಯೇಟರ್‌ಗಳನ್ನು ತೆರೆಯುವುದಿಲ್ಲ. ಸೆಪ್ಟೆಂಬರ್ 30ರವರೆಗೂ ಈ ನಿಯಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

school

-ಮೆಟ್ರೋ ರೈಲು ಸಂಚಾರಕ್ಕೆ ಅಸ್ತು ಎಂದಿದ್ದು, ಶಾಲಾ, ಕಾಲೇಜುಗಳು ಎಂದಿನಂತೆ ಮುಚ್ಚಿರಲಿವೆ ಎಂದು ತಿಳಿಸಿದೆ. ಆನ್‌ಲೈನ್ ಶಿಕ್ಷಣ ಮುಂದುವರೆಯಲಿದೆ. ಈ ನಿಯಮ ಸೆಪ್ಟೆಂಬರ್ 30ರವರೆಗೆ ಜಾರಿಯಲ್ಲಿರಲಿದೆ.

-ರಾಜ್ಯಗಳು ಹಾಗೂ ಯೂನಿವರ್ಸಿಟಿಗಳು ಶೇ.50ರಷ್ಟು ಶಿಕ್ಷಕರನ್ನೊಳಗೊಂಡು ಕಾಲೇಜು ತೆರೆಯಬಹುದಾಗಿದೆ. ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಸೆಪ್ಟೆಂಬರ್ 21ರ ಬಳಿಕ ಕಾಲೇಜುಗಳನ್ನು ತೆರೆಯಬಹುದು.

ಅನ್‌ಲಾಕ್‌ 4: ಸೆಪ್ಟೆಂಬರ್ 7 ರಿಂದ ಮೆಟ್ರೋ ರೈಲು ಸಂಚಾರಕ್ಕೆ ಕೇಂದ್ರ ಅನುಮತಿಅನ್‌ಲಾಕ್‌ 4: ಸೆಪ್ಟೆಂಬರ್ 7 ರಿಂದ ಮೆಟ್ರೋ ರೈಲು ಸಂಚಾರಕ್ಕೆ ಕೇಂದ್ರ ಅನುಮತಿ

-9 ರಿಂದ 12ನೇ ತರಗತಿ ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಮೇರೆಗೆ ಶಾಲೆಗಳಿಗೆ ತೆರಳಬಹುದಾಗಿದೆ.

-ಪಿಎಚ್‌ಡಿ, ಪಿಜಿ ವಿದ್ಯಾರ್ಥಿಗಳಿಗೆ ಕಾಲೇಜುಗಳಿಗೆ ಹೋಗಲು ಅವಕಾಶ ನೀಡಲಾಗಿದೆ.

-ಸೆಪ್ಟೆಂಬರ್ 7 ರಿಂದ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ

-ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಏನೇ ಕಾರ್ಯಕ್ರಮಗಳಿರಲಿ 100ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ. ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಫೇಸ್‌ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

-ಸಿನಿಮಾ ಹಾಲ್, ಈಜುಕೊಳ ಸೇರಿದಂತೆ ಹಲವು ಸ್ಥಳಗಳು ಬಂದ್ ಇರಲಿವೆ.

-ರಾಜ್ಯದೊಳಗೆ ಮತ್ತು ರಾಜ್ಯದ ಹೊರಗೆ ಓಡಾಡಲು ಯಾವುದೇ ಅನುಮತಿ ಇರುವುದಿಲ್ಲ.

- ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಪ್ರಮುಖವಾಗಿದೆ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಂತಿಲ್ಲ. ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕಿದೆ.

English summary
Unlock 4 Guidelines Out Metro Rail To Be allowed from September 7 In Graded Manner, Scools colleges to Stay Shut
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X