ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Unlock 3.0: ಚಿತ್ರಮಂದಿರ, ಜಿಮ್ ಕೇಂದ್ರಕ್ಕೆ ವಿನಾಯಿತಿ?

|
Google Oneindia Kannada News

ನವದೆಹಲಿ, ಜುಲೈ 27: ಕೊರೊನಾವೈರಸ್ ಸೋಂಕು ಹರಡದಂತೆ ದೇಶದೆಲ್ಲೆಡೆ ವಿಧಿಸಲಾಗಿದ್ದ ಲಾಕ್ಡೌನ್ ಗಳು ತೆರವುಗೊಂಡು ಅನ್ ಲಾಕ್ ಶುರುವಾಗಿ ಎರಡು ಅವಧಿ ಮುಗಿಯುತ್ತಾ ಬಂದಿದೆ. ಆಗಸ್ಟ್ 1ರಿಂದ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಸಚಿವಾಲಯ ಹೊರಡಿಸುವ ಸಾಧ್ಯತೆಯಿದೆ.

ಅನ್ ಲಾಕ್ 3.0 ಆಗಸ್ಟ್ 1ರಿಂದ ಆರಂಭಗೊಂಡರೆ ಏನೆಲ್ಲ ವಿನಾಯಿತಿ ಸಿಗಬಹುದು, ಯಾವೆಲ್ಲ ರಾಜ್ಯಗಳಲ್ಲಿ ಹೆಚ್ಚಿನ ಕಠಿಣ ಕ್ರಮ ಅನುಸರಿಸಲು ಸೂಚಿಸಲಾಗುತ್ತದೆ ಎಂಬುದು ಈಗ ಕುತೂಹಲಕಾರಿಯಾಗಿದೆ. ಪ್ರಧಾನಿ ಮೋದಿ ಅವರು ಇಂದಿನಿಂದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಅನ್ ಲಾಕ್, ಕೊರೊನಾ ನಿಯಂತ್ರಣ ಕುರಿತಂತೆ ಬೇಕಾದ ತುರ್ತು ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ.

ಕರ್ನಾಟಕದಲ್ಲಿ ಆಗಸ್ಟ್ ತಿಂಗಳಲ್ಲೂ ಭಾನುವಾರದ ಲಾಕ್ ಡೌನ್ ವಿಸ್ತರಣೆಕರ್ನಾಟಕದಲ್ಲಿ ಆಗಸ್ಟ್ ತಿಂಗಳಲ್ಲೂ ಭಾನುವಾರದ ಲಾಕ್ ಡೌನ್ ವಿಸ್ತರಣೆ

ಮಾರ್ಚ್ 24ರಿಂದ ಬಂದ್ ಆಗಿರುವ ಸಿನಿಮಾ ಥಿಯೇಟರ್ ಗಳನ್ನು ಮತ್ತೆ ಆರಂಭಿಸಲು ಸೂಚಿಸುವ ಸಾಧ್ಯತೆ ಹೆಚ್ಚಿದೆ ಎಂಬ ಮಾಹಿತಿಯಿದೆ. ಜೊತೆಗೆ ಜಿಮ್, ಈಜುಕೊಳ ಆರಂಭಿಸಲು ನಿರ್ಬಂಧಿತ ಅವಕಾಶ ಸಿಗಬಹುದು. ಶೇ 50 ರಷ್ಟು ಮಂದಿಗೆ ಒಮ್ಮೆಗೆ ಚಿತ್ರಮಂದಿರ, ಜಿಮ್ ಪ್ರವೇಶಿಸಲು ಅನುಮತಿ ಸಿಗಲಿದೆ.

Unlock 3.0: Cinema halls, gyms likely to open; Schools, metros to remain shut

ಆದರೆ, ಶಾಲೆ, ಕಾಲೇಜು, ಮೆಟ್ರೋ ರೈಲುಗಳ ಸಂಚಾರ ಸಾಧ್ಯವಿಲ್ಲ ಎಂದು ಗೃಹ ಸಚಿವಾಲಯದ ಮೂಲಗಳಿಂದ ತಿಳಿದು ಬಂದಿದೆ.

ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕಾಗಿ ಲಾಕ್ಡೌನ್ ಸಡಿಲಗೊಳಿಸಿದ್ದರಿಂದ ಕರ್ನಾಟಕದಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಲೇ ಇದೆ. ಆದರೆ, ಇದಕ್ಕೆ ಬೇರೆ ಬೇರೆ ಕಾರಣಗಳಿವೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಭಾರತದಲ್ಲಿ 1,436,019 ಕೊವಿಡ್ 19 ಪ್ರಕರಣಗಳಿದ್ದು, 32,812 ಮಂದಿ ಮೃತರಾಗಿದ್ದು, 918,735 ಮಂದಿ ಚೇತರಿಕೆ ಕಂಡಿದ್ದಾರೆ.

English summary
With the unlock 2.0 nearing its end in July, the government is set to frame fresh guidelines for Unlock 3.0 which will come into force from August 1. In the third phase, a few more relaxations are being worked upon by the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X