ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನ್ ಲಾಕ್ 1.0: ಜಿಮ್ ತೆರೆಯಲು ಅನುಮತಿ ನೀಡಿದ ಸಿಕ್ಕಿಂ ಸರ್ಕಾರ

|
Google Oneindia Kannada News

ಜೂನ್ 10: ಮಹಾಮಾರಿ ಕೋವಿಡ್-19 ತಡೆಗಟ್ಟಲು ದೇಶದಾದ್ಯಂತ ಲಾಕ್ ಡೌನ್ ಘೋಷಿಸಲಾಗಿತ್ತು. ಪರಿಣಾಮ, ಹೋಟೆಲ್, ರೆಸ್ಟೋರೆಂಟ್, ಜಿಮ್, ಧಾರ್ಮಿಕ ಕೇಂದ್ರಗಳು ಬಂದ್ ಆದವು. ಆದ್ರೀಗ ಕಂಟೇನ್ಮೆಂಟ್ ಝೋನ್ ಗಳಲ್ಲಿ ಮಾತ್ರ ಲಾಕ್ ಡೌನ್ ಮುಂದುವರೆಯಲಿದ್ದು, ಉಳಿದ ಪ್ರದೇಶಗಳನ್ನು 'ಅನ್ ಲಾಕ್' ಮಾಡಲಾಗುತ್ತಿದೆ.

Recommended Video

ಕೊರೊನಾದಿಂದ ಪ್ರಾಣಕಳೆದುಕೊಂಡ ಶಾಸಕ | DMK MLA | J Anbazhagan | Oneindia Kannada

ಸದ್ಯ ದೇಶದಾದ್ಯಂತ ಅನ್ ಲಾಕ್ 1.0 ಜಾರಿಯಲ್ಲಿದೆ. ಧಾರ್ಮಿಕ ಕೇಂದ್ರಗಳು, ಹೋಟೆಲ್, ರೆಸ್ಟೋರೆಂಟ್, ಮಾಲ್ ಗಳು ರೀ-ಓಪನ್ ಆಗಿವೆ. ಆದ್ರೆ, ಜಿಮ್ ಗಳು ಮಾತ್ರ ಎಲ್ಲೂ ತೆರೆದಿಲ್ಲ.

ಲಾಕ್‌ಡೌನ್‌: 800ಕ್ಕೂ ಅಧಿಕ ಫಿಟ್ನೆಸ್ ಸಿಬ್ಬಂದಿ ಕೆಲಸದಿಂದ ವಜಾಲಾಕ್‌ಡೌನ್‌: 800ಕ್ಕೂ ಅಧಿಕ ಫಿಟ್ನೆಸ್ ಸಿಬ್ಬಂದಿ ಕೆಲಸದಿಂದ ವಜಾ

ಹೀಗಿರುವಾಗಲೇ, ಜಿಮ್ ಗಳನ್ನು ತೆರೆಯಲು ಸಿಕ್ಕಿಂ ಸರ್ಕಾರ ಅನುಮತಿ ನೀಡಿದೆ.

ಇಂದಿನಿಂದ (ಬುಧವಾರ, ಜೂನ್ 10) ಸಿಕ್ಕಿಂನಲ್ಲಿ ಜಿಮ್ ಗಳು ತೆರೆಯಲಿವೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 6 ಗಂಟೆಯವರೆಗೂ ಜಿಮ್ ಗಳನ್ನು ಓಪನ್ ಮಾಡಬಹುದಾಗಿದೆ. ಒಮ್ಮೆಲೆ 50% ರಷ್ಟು ಮಂದಿಗೆ ಮಾತ್ರ ಜಿಮ್ ಒಳಗೆ ಪ್ರವೇಶ ನೀಡಬೇಕು ಎಂದು ಸಿಕ್ಕಿಂ ಸರ್ಕಾರ ಸೂಚಿಸಿದೆ.

Unlock 1.0: Sikkim Government Allows Gyms To Reopen

ಲಾಕ್ ಡೌನ್ ನಿಂದಾಗಿ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದ ಸಿಕ್ಕಿಂಗೆ ಭಾರಿ ಹೊಡೆತ ಬಿದ್ದಿತ್ತು. ಹೋಟೆಲ್, ರೆಸ್ಟೋರೆಂಟ್ ಉದ್ಯಮಕ್ಕೂ ಪೆಟ್ಟು ಬಿದ್ದಿತ್ತು.

ಎಚ್ಚರ! ಕೊರೊನಾ ವೈರಸ್ ಹರಡುವ ಅಪಾಯಕಾರಿ ಸ್ಥಳ ಜಿಮ್‌ಎಚ್ಚರ! ಕೊರೊನಾ ವೈರಸ್ ಹರಡುವ ಅಪಾಯಕಾರಿ ಸ್ಥಳ ಜಿಮ್‌

ಇಂದಿನಿಂದ (ಬುಧವಾರ, ಜೂನ್ 10) ಸಿಕ್ಕಿಂನಲ್ಲಿ ಹೋಟೆಲ್, ರೆಸ್ಟೋರೆಂಟ್ ಗಳನ್ನೂ ತೆರೆಯಲಾಗಿದೆ. ಕೋವಿಡ್-19 ತಡೆಗಟ್ಟಲು ನೀಡಲಾಗಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರ್ಕಾರ ತಿಳಿಸಿದೆ.

English summary
Unlock 1.0: Sikkim Government allows Gyms to reopen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X