ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ ಅಂತ್ಯದ ತನಕ ಲಸಿಕೆ ಸಿಗಲ್ಲ; ಸುಪ್ರೀಂಗೆ 9 ರಾಜ್ಯಗಳ ಅಫಿಡೆವಿಟ್

|
Google Oneindia Kannada News

ನವದೆಹಲಿ, ಮೇ 13; ಮೇ ಅಂತ್ಯದ ವೇಳೆಗೆ ನಾವು ಬೇಡಿಕೆ ಇಟ್ಟಿರುವ ಕೋವಿಡ್ ಲಸಿಕೆ ಉತ್ಪಾದಕರಿಂದ ರಾಜ್ಯಕ್ಕೆ ತಲುಪಬಹುದು ಎಂದು 9 ರಾಜ್ಯಗಳು ಸುಪ್ರೀಂಕೋರ್ಟ್‌ಗೆ ಹೇಳಿಕೆ ನೀಡಿವೆ.

ಸುಪ್ರೀಂಕೋರ್ಟ್ ಕೋವಿಡ್ ಲಸಿಕೆ ಪೂರೈಕೆ ಬಗ್ಗೆ ಸ್ವಯಂ ಪ್ರೇರಿತ ಅರ್ಜಿಯನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಲಸಿಕೆ ಬರುವ ತನಕ 18-44 ವರ್ಷದವಿಗೆ ಲಸಿಕೆ ನೀಡುವುದು ಕಷ್ಟಸಾಧ್ಯವಾಗಲಿದೆ ಎಂದು ರಾಜ್ಯಗಳು ಹೇಳಿವೆ.

ತಮಿಳುನಾಡಿನಲ್ಲಿ 2ನೇ ಡೋಸ್ ಕೊರೊನಾ ಲಸಿಕೆ ಪಡೆದ ನಟ ರಜನಿಕಾಂತ್ ತಮಿಳುನಾಡಿನಲ್ಲಿ 2ನೇ ಡೋಸ್ ಕೊರೊನಾ ಲಸಿಕೆ ಪಡೆದ ನಟ ರಜನಿಕಾಂತ್

ಪಂಜಾಬ್, ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ, ಜಾರ್ಖಂಡ್, ಹಿಮಾಚಲ ಪ್ರದೇಶ, ಛತ್ತೀಶ್‌ಗಢ್‌, ನಾಗಾಲ್ಯಾಂಡ್, ಮಣಿಪುರ ರಾಜ್ಯಗಳು ಈ ಕುರಿತು ಸುಪ್ರೀಂಕೋರ್ಟ್‌ಗೆ ಅಫಿಡೆವಿಟ್ ಸಲ್ಲಿಕೆ ಮಾಡಿವೆ.

Corona vaccine

25 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳು ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ಲಸಿಕೆ ನೀಡಲು ಕೈಗೊಂಡ ಕ್ರಮಗಳ ಕುರಿತು ನ್ಯಾಯಾಲಯಕ್ಕೆ ಅಫಿಡೆವಿಟ್ ಸಲ್ಲಿಸಿವೆ. ಸಿಕ್ಕಿಂ ಮತ್ತು ಉತ್ತರಾಖಂಡ್ ರಾಜ್ಯಗಳು ಇನ್ನು ಮಾಹಿತಿ ನೀಡಬೇಕಿದೆ.

ಕರ್ನಾಟಕದಲ್ಲಿಯೇ ಲಸಿಕೆ ಉತ್ಪದನಾ ಘಟಕ ಸ್ಥಾಪನೆ? ಕರ್ನಾಟಕದಲ್ಲಿಯೇ ಲಸಿಕೆ ಉತ್ಪದನಾ ಘಟಕ ಸ್ಥಾಪನೆ?

ಅಫಿಡೆವಿಟ್‌ನಲ್ಲಿ ರಾಜ್ಯದ ಆರೋಗ್ಯ ಸ್ಥಿತಿ, ಆಕ್ಸಿಜನ್ ಲಭ್ಯತೆ, ಇದುವರೆಗೂ ಲಸಿಕೆ ನೀಡಿದ ಸಂಖ್ಯೆ, 18-44 ವಯೋಮಿತಿ ಅವರಿಗೆ ಲಸಿಕೆ ನೀಡಲು ಬೇಕಾದ ಡೋಸ್‌ಗಳ ಸಂಖ್ಯೆ ಮುಂತಾದ ಮಾಹಿತಿಗಳನ್ನು ನೀಡಲಾಗಿದೆ.

ಇಂದು ಅರ್ಜಿಯ ವಿವರವಾದ ವಿಚಾರಣೆ ಮೂವರು ನ್ಯಾಯಮೂರ್ತಿಗಳ ಪೀಠದಲ್ಲಿ ನಡೆಯಬೇಕಿತ್ತು. ಆದರೆ, ನ್ಯಾಯೂರ್ತಿ ಡಿ. ವೈ. ಚಂದ್ರಚೂಡ್ ವಿಚಾರಣೆಗೆ ಗೈರು ಹಾಜರಾಗಿದ್ದ ಕಾರಣ ಅರ್ಜಿ ವಿಚಾರಣೆಯನ್ನು ಮುಂದೂಡಲಾಯಿತು.

ಭಾರತದಲ್ಲಿ ತಗ್ಗಿದ ಕೊರೊನಾವೈರಸ್ ಲಸಿಕೆ ವಿತರಣೆ ಪ್ರಮಾಣ!ಭಾರತದಲ್ಲಿ ತಗ್ಗಿದ ಕೊರೊನಾವೈರಸ್ ಲಸಿಕೆ ವಿತರಣೆ ಪ್ರಮಾಣ!

31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮೊದಲ ಮತ್ತು 2ನೇ ಹಂತದಲ್ಲಿ ಎಷ್ಟು ಡೋಸ್ ಲಸಿಕೆ ನೀಡಲಾಗಿದೆ ಎಂದು ಕೋರ್ಟ್‌ಗೆ ಮಾಹಿತಿ ನೀಡಿದ್ದವು. 17 ರಾಜ್ಯಗಳು 18-44 ವರ್ಷದವರಿಗೆ ಲಸಿಕೆ ನೀಡಲು ತಾವು ಬೇಡಿಕೆ ಸಲ್ಲಿಸಿರುವ ಡೋಸ್‌ಗಳ ಬಗ್ಗೆ ಮಾಹಿತಿ ಕೊಟ್ಟಿದ್ದವು.

ಪಶ್ಚಿಮ ಬಂಗಾಳ, ಛತ್ತೀಸ್‌ಗಢ್‌, ಆಂಧ್ರ ಪ್ರದೇಶ ಮತ್ತು ಕೇರಳ ರಾಜ್ಯಗಳು ಕೇಂದ್ರ ಸರ್ಕಾರದ ಲಸಿಕೆ ಹಂಚಿಕೆ ನೀತಿಯನ್ನು ಪ್ರಶ್ನೆ ಮಾಡಿವೆ. ಕೆಲವು ರಾಜ್ಯಗಳು ಲಸಿಕೆಯ ಕೊರತೆ ಇದೆ, ಬೇಡಿಕೆ ಇಟ್ಟಿರುವ ಲಸಿಕೆ ತಕ್ಷಣಕ್ಕೆ ಸಿಗುವುದಿಲ್ಲ ಎಂಬ ಮಾಹಿತಿಯನ್ನು ನೀಡಿವೆ.

Recommended Video

Covidನಿಂದ ಗುಣಮುಖರಾದವರು ತಕ್ಷಣ ಲಸಿಕೆ ತೆಗೆದುಕೊಳ್ಳಬೇಡಿ | Oneindia Kannada

ರಾಜ್ಯಗಳು ಲಸಿಕಾ ತಯಾರಿಕಾ ಕಂಪನಿಗಳಿಂದ ನೇರವಾಗಿ ಖರೀದಿ ಮಾಡಿ 18-44 ವರ್ಷದವರಿಗೆ ನೀಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಫ್ರಂಟ್‌ಲೈನ್ ವರ್ಕರ್‌ಗಳಿಗೆ ಕೇಂದ್ರವೇ ಲಸಿಕೆ ಪೂರೈಕೆ ಮಾಡಲಿದೆ. ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವ ಅಫಿಡೆವಿಟ್‌ನಲ್ಲಿ ಕಂಪನಿಗಳು ಶೇ 50ರಷ್ಟು ಲಸಿಕೆಯನ್ನು ಕೇಂದ್ರಕ್ಕೆ ನೀಡಬೇಕು. ಉಳಿದ ಶೇ 50ರಷ್ಟು ಲಸಿಕೆ ರಾಜ್ಯ, ಖಾಸಗಿ ಆಸ್ಪತ್ರೆಗೆ ನೀಡಲು ಅವಕಾಶ ಕೊಡಲಾಗಿದೆ ಎಂದು ಹೇಳಿದೆ.

English summary
In a affidavit to supreme court 9 states said that they are unlikely to receive their quota of Covid-19 vaccine doses from companies by May-end.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X