ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಿಧತೆಯಲ್ಲಿ ಏಕತೆ ನಮ್ಮ ದೊಡ್ಡ ಶಕ್ತಿ: ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಪ್ರಣಬ್

By Sachhidananda Acharya
|
Google Oneindia Kannada News

ನಾಗ್ಪುರ, ಜೂನ್ 7: ದೇಶದ ಜನರು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಕಾರ್ಯಕ್ರಮ ಮುಗಿದಿದೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದಲ್ಲಿ ತಮ್ಮ ಭಾಷಣ ಮಾಡಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಆರ್.ಎಸ್.ಎಸ್ ಮೂರನೇ ವರ್ಷದ 'ಶಿಕ್ಷಾ ವರ್ಗ್'ನಲ್ಲಿ ಮಾತನಾಡಿದ ಅವರು ಹೆಚ್ಚಿನ ಸಮಯವನ್ನು ಭಾರತದ ಘನ ಇತಿಹಾಸ ಮತ್ತು ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ವಿವರಿಸಲು ಮೀಸಲಿಟ್ಟರು.

ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ಮನೆಗೆ ಭೇಟಿ ನೀಡಿದ ಮುಖರ್ಜಿಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ಮನೆಗೆ ಭೇಟಿ ನೀಡಿದ ಮುಖರ್ಜಿ

"ಭಾರತದ ವಿಷಯದಲ್ಲಿ ರಾಷ್ಟ್ರ, ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಪರಿಕಲ್ಪನೆ ಮತ್ತು ನಿಮ್ಮೊಂದಿಗೆ ನನ್ನ ತಿಳುವಳಿಕೆಯನ್ನು ಹಂಚಿಕೊಳ್ಳಲು ನಾನು ಇಲ್ಲಿದ್ದೇನೆ," ಎಂದು ಮುಖರ್ಜಿ ಭಾಷಣ ಆರಂಭಿಸಿದರು.

Unity in Diversity is our greatest power: Pranab in RSS function

"ಸಂಘರ್ಷ ಮತ್ತು ಸಮೀಕರಣದ ದೀರ್ಘಕಾಲದ ಪ್ರಕ್ರಿಯೆಯ ನಂತರ ನಮ್ಮ ರಾಷ್ಟ್ರೀಯ ಗುರುತು ಹೊರಹೊಮ್ಮಿದೆ. ಅನೇಕ ಸಂಸ್ಕೃತಿಗಳು ಮತ್ತು ನಂಬಿಕೆಗಳು ನಮ್ಮನ್ನು ವಿಶೇಷವಾಗಿಸಿವೆ ಮತ್ತು ಸಹಿಷ್ಣುಗಳನ್ನಾಗಿಸಿದೆ," ಎಂದು ಅವರು ವಿವರಿಸಿದರು.

ಒಂದು ರೀತಿಯಲ್ಲಿ ಪ್ರಣಬ್ ಮಾತು ಆರ್.ಎಸ್.ಎಸ್ ನ ಕುಡಿ ಮೀಸೆಯ ಯುವಕರಿಗೆ ಪಾಠದಂತಿತ್ತು. "ತತ್ವಗಳು ಮತ್ತು ಗುರುತು ಅಥವಾ ಧರ್ಮ, ಪ್ರದೇಶ, ದ್ವೇಷ ಮತ್ತು ಅಸಹಿಷ್ಣುತೆಗಳ ವಿಷಯದಲ್ಲಿ ನಮ್ಮ ರಾಷ್ಡ್ರೀಯತೆಯನ್ನು ವಿವರಿಸುವ ಯಾವುದೇ ಪ್ರಯತ್ನ ನಮ್ಮ ಗುರುತನ್ನು ದುರ್ಬಲಗೊಳಿಸುತ್ತದೆ," ಎಂದು ಅವರು ಇದೇ ಸಂದರ್ಭದಲ್ಲಿ ಕಿವಿಮಾತು ಹೇಳಿದರು.

Unity in Diversity is our greatest power: Pranab in RSS function

"'ರಾಷ್ಟ್ರೀಯತೆಯು ಹಿಂದೂ, ಮುಸ್ಲಿಮರು, ಸಿಖ್ಖರು ಮತ್ತು ಭಾರತದ ಇತರ ಗುಂಪುಗಳ ಸೈದ್ಧಾಂತಿಕ ಸಮ್ಮಿಳನದಿಂದ ಮಾತ್ರ ಸಾಧ್ಯವಿದೆ ಎಂದು ನನಗೆ ಮನವರಿಕೆಯಾಗಿದೆ' ಎಂಬುದಾಗಿ ರಾಷ್ಟ್ರೀಯತೆಯ ಬಗ್ಗೆ ಪಂಡಿತ್ ನೆಹರೂ ಅವರು ತಮ್ಮ 'ಡಿಸ್ಕವರಿ ಆಫ್ ಇಂಡಿಯಾ' ಎಂಬ ಪುಸ್ತಕದಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ," ಎಂದು ಅವರು ತಿಳಿಸಿ ಹೇಳಿದರು.

"ಗಾಂಧಿಯವರು ವಿವರಿಸಿದಂತೆ ಭಾರತೀಯ ರಾಷ್ಟ್ರೀಯತೆಯು ಪ್ರತ್ಯೇಕವಾಗಿಲ್ಲ ಅಥವಾ ಆಕ್ರಮಣಕಾರಿ ಅಥವಾ ಹಾನಿಕಾರಕವಲ್ಲ," ಎಂದು ಅವರು ವಿವರಿಸಿದರು. ಒಟ್ಟಿನಲ್ಲಿ ವಿವಿಧತೆಯಲ್ಲಿ ಏಕತೆ ಹೊಂದಿರುವುದೇ ನಮ್ಮ ದೇಶದ ದೊಡ್ಡ ಶಕ್ತಿ ಎಂದು ತಮ್ಮ ಭಾಷಣದುದ್ದಕ್ಕೂ ಪ್ರತಿಪಾದಿಸಿದರು.

English summary
“As Gandhi ji explained Indian nationalism was not exclusive nor aggressive nor destructive,” said Dr Pranab Mukherjee at RSS's Tritiya Varsh event in Nagpur, Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X