ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ದಿನಗಳ ರಾಷ್ಟ್ರ ವ್ಯಾಪ್ತಿ ಬ್ಯಾಂಕ್ ಮುಷ್ಕರಕ್ಕೆ ಕರೆ

|
Google Oneindia Kannada News

ನವದೆಹಲಿ, ಜನವರಿ 15 : ಯುನೈಟೆಡ್ ಪೋರಮ್ ಆಫ್ ಬ್ಯಾಂಕ್ ಯೂನಿಯನ್ ಎರಡು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಜನವರಿ 31ರಿಂದ ಎರಡು ದಿನಗಳ ಕಾಲ ಮುಷ್ಕರ ನಡೆಯಲಿದೆ.

ವೇತನ ಪರಿಷ್ಕರಣೆಗೆ ಬ್ಯಾಂಕ್ ಸಿಬ್ಬಂದಿ ಬೇಡಿಕೆ ಇಟ್ಟಿದ್ದರು. ಮಾತುಕತೆ ವಿಫಲವಾದ ಹಿನ್ನಲೆಯಲ್ಲಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ. ಜನವರಿ 31 ಮತ್ತು ಫೆಬ್ರವರಿ 1ರಂದು ಮುಷ್ಕರ ನಡೆಸಲಾಗುತ್ತದೆ ಎಂದು ಯೂನಿಯನ್ ಹೇಳಿದೆ.

2020ನೇ ಸಾಲಿನ ಬ್ಯಾಂಕ್ ರಜಾ ದಿನಗಳ ಸಂಪೂರ್ಣ ಪಟ್ಟಿ2020ನೇ ಸಾಲಿನ ಬ್ಯಾಂಕ್ ರಜಾ ದಿನಗಳ ಸಂಪೂರ್ಣ ಪಟ್ಟಿ

United Forum Of Bankers Called For Two Days Of Strike

ಮುಷ್ಕರದ ದಿನ ಯಾವುದೇ ಬ್ಯಾಂಕ್ ವಹಿವಾಟು ಇರುವುದಿಲ್ಲ ಎಂದು ಯುಎಫ್‌ಬಿ ಸಿದ್ದಾರ್ಥ್ ಖಾನ್ ಹೇಳಿದ್ದಾರೆ. ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ.

ಬೆಂಗಳೂರು ಬ್ಯಾಂಕ್‌ಗೆ ಆರ್‌ಬಿಐ ನೋಟಿಸ್; ಗ್ರಾಹಕರಲ್ಲಿ ಆತಂಕಬೆಂಗಳೂರು ಬ್ಯಾಂಕ್‌ಗೆ ಆರ್‌ಬಿಐ ನೋಟಿಸ್; ಗ್ರಾಹಕರಲ್ಲಿ ಆತಂಕ

ಯುನೈಟೆಡ್ ಪೋರಮ್ ಆಫ್ ಬ್ಯಾಂಕ್ ಯೂನಿಯನ್ 9 ಕಾರ್ಮಿಕ ಸಂಘಟನೆಗಳನ್ನು ಪ್ರತಿನಿಧಿಸುತ್ತದೆ. ಭಾರತೀಯ ಬ್ಯಾಂಕ್‌ಗಳ ಪದಾಧಿಕಾರಿಗಳ ಜೊತೆ ಕಾರ್ಮಿಕರ ವೇತನ ಪರಿಷ್ಕರಣೆ ಬಗ್ಗೆ ಸಭೆ ನಡೆದಿತ್ತು. ಆದರೆ, ಸಭೆ ವಿಫಲವಾಗಿತ್ತು.

ಇ -ಕೆವೈಸಿ ಪ್ರಕ್ರಿಯೆಗೂ ಡಿಜಿ ಲಾಕರ್ ಬಳಸಲು ಆರ್ ಬಿಐ ಅನುಮತಿಇ -ಕೆವೈಸಿ ಪ್ರಕ್ರಿಯೆಗೂ ಡಿಜಿ ಲಾಕರ್ ಬಳಸಲು ಆರ್ ಬಿಐ ಅನುಮತಿ

ಎರಡು ದಿನಗಳ ಕಾಲ ಮುಷ್ಕರ ನಡೆಸಲಾಗುತ್ತದೆ. ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಏಪ್ರಿಲ್ 1ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ ಎಂದು ಯುನೈಟೆಡ್ ಪೋರಮ್ ಆಫ್ ಬ್ಯಾಂಕ್ ಯೂನಿಯನ್ ಎಚ್ಚರಿಕೆ ನೀಡಿದೆ.

ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2020-21ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಅಂದೇ ಬ್ಯಾಂಕ್ ಸಿಬ್ಬಂದಿಗಳು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮುಷ್ಕರಕ್ಕೆ ಕರೆ ಕೊಟ್ಟಿರುವ ಯುಎಫ್‌ಬಿ ಜೊತೆ ಇನ್ನೊಮ್ಮೆ ಮಾತುಕತೆ ನಡೆಯಲಿದೆಯೇ? ಕಾದು ನೋಡಬೇಕು.

English summary
United Forum Bankers called for nation wide strike from January 31 to two days demanding various demands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X