• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕೋವಿಡ್ ಪಾಸಿಟಿವ್

|

ನವದೆಹಲಿ, ಅಕ್ಟೋಬರ್ 28: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಾವು ಕೊರೊನಾ ವೈರಸ್ ಪಾಸಿಟಿವ್‌ಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿರುವ ಸ್ಮೃತಿ ಇರಾನಿ, 'ನನಗೆ ಒಂದು ಘೋಷಣೆ ಮಾಡಲು ಪದಗಳಿಗಾಗಿ ಹುಡುಕಾಡುವಂತಹ ಅಪರೂಪದ ಸಂದರ್ಭ ಎದುರಾಗಿದೆ. ಹೀಗಾಗಿ ನಾನು ಅದನ್ನು ಅತ್ಯಂತ ಸರಳವಾಗಿ ಹೇಳುತ್ತಿದ್ದೇನೆ. ನಾನು ಕೋವಿಡ್ ಪಾಸಿಟಿವ್‌ಗೆ ಒಳಗಾಗಿದ್ದೇನೆ' ಎಂದು ತಿಳಿಸಿದ್ದಾರೆ.

ಕೊವಿಡ್ 19: ಭಾರತದಲ್ಲಿ ಸೋಂಕಿತರು 79 ಲಕ್ಷ, ಚೇತರಿಕೆ 7,201,070

ತಮ್ಮೊಂದಿಗೆ ಇತ್ತೀಚಿನ ದಿನಗಳಲ್ಲಿ ಸಂಪರ್ಕಕ್ಕೆ ಬಂದ ಎಲ್ಲ ಜನರೂ ಕೊರೊನಾ ವೈರಸ್ ಪರೀಕ್ಷೆಗೆ ಒಳಪಡುವಂತೆ ಅವರು ಮನವಿ ಮಾಡಿದ್ದಾರೆ. ಸ್ಮೃತಿ ಇರಾನಿ ಅವರು ಮಂಗಳವಾರವಷ್ಟೇ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ನಡೆಸಿದ್ದರು.

ಕಳೆದ ವಾರ ಬಿಹಾರದಲ್ಲಿ ಪ್ರಚಾರ ಆರಂಭಿಸಿದ್ದ ಸ್ಮೃತಿ ಇರಾನಿ, ಎನ್‌ಡಿಎ ಅಭ್ಯರ್ಥಿಗಳ ಪರವಾಗಿ ಗೋಪಾಲ್‌ಗಂಜ್, ಮುಂಗರ್, ಬುದ್ಧಗಯಾ ಮತ್ತು ದಿಘಾ ಸೇರಿದಂತೆ ಕನಿಷ್ಠ 10 ಸ್ಥಳಗಳಲ್ಲಿ ಪ್ರಚಾರ ಸಮಾವೇಶಗಳನ್ನು ನಡೆಸಿದ್ದರು.

ಬಿಹಾರ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಿದ್ದ ಮೂವರು ಪ್ರಮುಖ ಮುಖಂಡರು ಕೋವಿಡ್ ಸೋಂಕಿಗೆ ಒಳಗಾದಂತಾಗಿದೆ. ಇದಕ್ಕೂ ಮುನ್ನ ಶಹನವಾಜ್ ಹುಸೇನ್ ಮತ್ತು ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಅವರು ಕೋವಿಡ್ ಪಾಸಿಟಿವ್‌ಗೆ ಒಳಗಾಗಿದ್ದರು.

English summary
Union Women and Child Development minister Smriti Irani has tested positive for Covid 19 on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X