ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ: ಮತದಾರರ ಪಟ್ಟಿಗೆ 'ಆಧಾರ್' ಜೋಡಣೆ ಮಸೂದೆ ಮಂಡನೆ

|
Google Oneindia Kannada News

ನವದೆಹಲಿ, ಡಿಸೆಂಬರ್ 20: ಮತದಾರರ ಪಟ್ಟಿಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡುವ ಚುನಾವಣಾ ಸುಧಾರಣೆಗಳ ಮಸೂದೆಯನ್ನು ಲೋಕಸಭೆಯಲ್ಲಿ ಇಂದು ಮಂಡಿಸಲಾಗುತ್ತಿದೆ. ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಮಸೂದೆಯನ್ನು ಮಂಡಿಸಲಿದ್ದಾರೆ. ಮತದಾರರ ಪಟ್ಟಿಯಲ್ಲಿ ಈಗಾಗಲೇ ನೋಂದಣಿಯಾಗಿರುವ ಜನರ ಹೆಸರಿನ ದೃಢೀಕರಣಕ್ಕಾಗಿ ಹಾಗೂ ಹೆಸರಿನ ದೃಢೀಕರಣಕ್ಕಾಗಿ ಮತ್ತು ಹೆಚ್ಚಿನ ಮತ ಕ್ಷೇತ್ರಗಳಲ್ಲಿ ನೋಂದಣಿಯಾಗಿರುವ ಮತದಾರರನ್ನು ಗುರುತಿಸಲೂ ಚುನಾವಣಾ ನೋಂದಣಿ ಅಧಿಕಾರಿಗಳು ಆಧಾರ್ ಸಂಖ್ಯೆ ಪಡೆಯಲಾಗುತ್ತದೆ.

ರಾಜ್ಯಸಭೆಯಲ್ಲಿ ರಿಜಿಜು ಮಧ್ಯಂತರ ಮಸೂದೆಯನ್ನು ಮಂಡಿಸಲಿದ್ದಾರೆ, ಹಾಗೆಯೇ ನಿರ್ಮಲಾ ಸೀತಾರಾಮನ್ ಎನ್‌ಡಿಪಿಎಸ್ ಮಸೂದೆಯನ್ನು ಮಂಡಿಸಲಿದ್ದಾರೆ. ಚುನಾವಣೆ ಪ್ರಕ್ರಿಯೆ ಸಮರ್ಪಕ ಅನುಷ್ಠಾನ, ಮತದಾನ ಹೆಚ್ಚಿಸಲು ಕ್ರಮ, ಚುನಾವಣೆ ಆಯೋಗಕ್ಕೆ ಹೆಚ್ಚಿನ ಅಧಿಕಾರ ನೀಡುವುದು ಹಾಗೂ ನಕಲಿ ಮತದಾನ ತಡೆಯುವ ದಿಸೆಯಲ್ಲಿ ಕೇಂದ್ರ ಸರಕಾರ ವಿಧೇಯಕ ಮಂಡಿಸಲಿದೆ.

ವಿಧಾನಸಭೆ ಚುನಾವಣೆಗೂ ಮುಂಚಿತವಾಗಿ ಹೊಸ ಮತದಾನ ಸುಧಾರಣೆಗೆ ಮುಂದಾದ ಸರ್ಕಾರವಿಧಾನಸಭೆ ಚುನಾವಣೆಗೂ ಮುಂಚಿತವಾಗಿ ಹೊಸ ಮತದಾನ ಸುಧಾರಣೆಗೆ ಮುಂದಾದ ಸರ್ಕಾರ

ಆಧಾರ್‌ ಸಂಖ್ಯೆ-ಪ್ಯಾನ್‌ ಸಂಖ್ಯೆ ಜೋಡಿಸಿದಂತೆ ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡುವುದು ಹೊಸ ಸುಧಾರಣೆಯಾಗಿದೆ. ಇದರಿಂದ ನಕಲಿ ಮತದಾನ ಹಾಗೂ ಎರಡು ಕಡೆ ಮತದಾರರ ಗುರುತಿನ ಚೀಟಿ ಹೊಂದುವುದು ತಪ್ಪುತ್ತದೆ.

Union Law Minister Kiren Rijiju introduces Election Laws (Amendment) Bill in Lok Sabha

ಈವರೆಗೆ ಪ್ರತಿ ವರ್ಷದ ಜನವರಿ 1ಕ್ಕೂ ಮೊದಲು 18 ವರ್ಷ ತುಂಬಿದವರು ವರ್ಷದಲ್ಲಿ ಒಮ್ಮೆ ಮಾತ್ರ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದಿತ್ತು. ಆದರೆ, ಇನ್ನು ಮುಂದೆ ನಾಲ್ಕು ಬಾರಿ ನೋಂದಣಿಗೆ ಅವಕಾಶ ನೀಡಲಾಗಿದೆ. ಜನವರಿ 1, ಏಪ್ರಿಲ್‌ 1, ಜುಲೈ 1 ಹಾಗೂ ಅಕ್ಟೋಬರ್‌ 1 ಎಂಬ ನಾಲ್ಕು ಕಟ್‌ಆಫ್‌ ದಿನಾಂಕ ನೀಡಿದೆ.

ಹಾಗೆಯೇ, ಚುನಾವಣೆ ನಡೆಸಲು ಶಾಲೆ ಸೇರಿ ಹಲವು ಪ್ರಮುಖ ಸಂಸ್ಥೆಗಳಿಂದ ಕಟ್ಟಡ ನೀಡಲು ಆಕ್ಷೇಪ ವ್ಯಕ್ತವಾದ ಹಿನ್ನೆಲೆ ಚುನಾವಣೆ ಆಯೋಗಕ್ಕೆ ಚುನಾವಣೆ ನಡೆಸಲು ಯಾವುದೇ ಕಟ್ಟಡ ಸ್ವಾಧೀನಪಡಿಸಿಕೊಳ್ಳುವ ಅಧಿಕಾರ ನೀಡಲು ತೀರ್ಮಾನಿಸಲಾಗಿದೆ.

ಸೇವಾ ಅಧಿಕಾರಿಗಳಲ್ಲಿ ಲಿಂಗ ಸಮಾನತೆ ತರಲು ಕಾನೂನು ರೂಪಿಸಲು ಸಹ ಕೇಂದ್ರ ಸರಕಾರ ತೀರ್ಮಾನಿಸಿದೆ. ಇದುವರೆಗೆ ಸರಕಾರಿ ಉದ್ಯೋಗದಲ್ಲಿರುವ ಪುರುಷ ಉದ್ಯೋಗಿಯ ಪತ್ನಿಗೆ ಮಾತ್ರ ಅಂಚೆ ಮೂಲಕ ಮತದಾನ ಮಾಡಲು ಅನುಮತಿ ಇತ್ತು. ಆದರೆ, ಇನ್ನು ಮುಂದೆ ಮಹಿಳಾ ನೌಕರರ ಪತಿಯಂದಿರೂ ಕೂಡ ಅಂಚೆ ಮತದಾನ ಮಾಡಬಹುದಾಗಿದೆ.

ಆಧಾರ್​ ಲಿಂಕ್​ ಕಡ್ಡಾಯವಲ್ಲ: ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಲ್ಲ. ಆದ್ರೆ, ಆಧಾರ್​ ಲಿಂಕ್ ಮಾಡುವುದರಿಂದ ನಕಲಿ ಮತದಾನ ಹಾಗೂ ಎರಡು ಕಡೆ ಮತದಾರರ ಗುರುತಿನ ಚೀಟಿ ಹೊಂದುವುದು ತಪ್ಪಿಸುವಂತೆ ಆಗುತ್ತದೆ.

ಆಧಾರ್ ಲಿಂಕ್ ಮಾಡುವುದು ಹೇಗೆ?:

https://voterportal.eci.gov.in ಗೆ ಭೇಟಿ ನೀಡಿ. ಬಳಿಕ ನಿಮ್ಮ ಮೊಬೈಲ್ ಸಂಖ್ಯೆ/ಇಮೇಲ್ ಐಡಿ/ವೋಟರ್ ಐಡಿ ಸಂಖ್ಯೆ ಬಳಸಿ ಲಾಗಿನ್ ಆಗಿ ಮತ್ತು ಪಾಸ್‌ವರ್ಡ್ ಹಾಕಿ..

ನಿಮ್ಮ ಹೆಸರು, ಹುಟ್ಟಿದ ದಿನಾಂಕ ಮತ್ತು ತಂದೆಯ ಹೆಸರು ಸೇರಿದಂತೆ ರಾಜ್ಯ, ಜಿಲ್ಲೆ ಮತ್ತು ವೈಯಕ್ತಿಕ ವಿವರಗಳನ್ನು ನೀಡಿ..

ವಿವರಗಳನ್ನು ನೀಡಿದ ಬಳಿಕ 'Search' ಬಟನ್ ಕ್ಲಿಕ್ ಮಾಡಿ. ನೀವು ನೀಡಿರುವ ವಿವರಗಳು ಸರ್ಕಾರಿ ಡೇಟಾಬೇಸ್‌ಗೆ ಹೊಂದಿಕೆಯಾಗಬೇಕು. ಬಳಿಕ ವಿವರಗಳು ಪರದೆಯ ಮೇಲೆ ಗೋಚರಿಸುತ್ತವೆ.

ಪರದೆಯ ಎಡಭಾಗದಲ್ಲಿ ಗೋಚರಿಸುವ 'Feed Aadhaar No' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಆಗ ಆಧಾರ್ ಕಾರ್ಡ್, ಆಧಾರ್ ಸಂಖ್ಯೆ, ಮತದಾರರ ಗುರುತಿನ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ನೋಂದಾಯಿತ ಇಮೇಲ್ ವಿಳಾಸದಲ್ಲಿ ನಮೂದಿಸಿರುವಂತೆ ನಿಮ್ಮ ಹೆಸರನ್ನು ಭರ್ತಿ ಮಾಡಬೇಕಾದ ಪುಟವೊಂದು ತೆರೆದುಕೊಳ್ಳುತ್ತದೆ. ಆ ಪುಟದಲ್ಲಿ ಎಲ್ಲಾ ವಿವರಗಳನ್ನು ಸರಿಯಾಗಿ ನಮೂದಿಸಿ. ಬಳಿಕ Submit ಬಟನ್ ಒತ್ತಿರಿ. ಇದಾದ ನಂತರ ನಿಮ್ಮ ಅರ್ಜಿ ಯಶಸ್ವಿಯಾಗಿ ನೋಂದಾಯಿಸಲಾಗಿದೆ ಎಂಬ ಸಂದೇಶ ಕಾಣಿಸುತ್ತದೆ.

ಎಸ್‌ಎಂಎಸ್ ಮೂಲಕ ಆಧಾರ್​ ಲಿಂಕ್​ : ಈ ಮಾದರಿಯಲ್ಲಿ ಬರೆದು 166 ಅಥವಾ 51969ಗೆ ಎಸ್​ಎಂಎಸ್ ಕಳುಹಿಸುವ ಮೂಲಕ ನೀವು ನಿಮ್ಮ ಆಧಾರ್ ಅ​ನ್ನು ವೋಟರ್ ಐಡಿಯೊಂದಿಗೆ ಲಿಂಕ್ ಮಾಡಬಹುದಾಗಿದೆ.

ಫೋನ್ ಮೂಲಕ ಆಧಾರ್ ಲಿಂಕ್ : ನೀವು ಕಾಲ್ ಸೆಂಟರ್​ಗಳಿಗೆ ಕರೆ ಮಾಡುವ ಮೂಲಕ ನಿಮ್ಮ ಗುರುತಿನ ಚೀಟಿಗೆ ಆಧಾರ್​ ಲಿಂಕ್​ ಅನ್ನು ಮಾಡಬಹುದಾಗಿದೆ. ನೀವು ವಾರದ ದಿನಗಳಲ್ಲಿ 10 ರಿಂದ ಸಂಜೆ 5ರ ನಡುವೆ 1950 ನಂಬರ್​ಗೆ ಡಯಲ್ ಮಾಡಬೇಕಾಗುತ್ತದೆ. ನಂತರ ಆಧಾರ್ ಹಾಗೂ ವೋಟರ್ ಐಡಿ ಲಿಂಕ್ ಮಾಡಲು ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಳ್ಳವ ಮೂಲಕ ನಿಮ್ಮ ಗುರುತಿನ ಚೀಟಿಗೆ ಆಧಾರ್​ ಲಿಂಕ್​ನ್ನು ಮಾಡಬಹುದಾಗಿದೆ.

ನಿಮ್ಮ ಆಧಾರ್ ಕಾರ್ಡ್ ವೋಟರ್ ಐಡಿಯೊಂದಿಗೆ ಲಿಂಕ್ ಆಗಿದೆಯೇ ಎಂಬುದನ್ನು ಪರಿಶೀಲಿಸಲು ನೀವು UIDAIಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ. ಹೀಗೆ ಮೇಲಿನ ಮಾಹಿತಿ ಮೂಲಕ ಆಧಾರ್ ಲಿಂಕ್​ನ್ನು ನಿಮ್ಮ ಗುರುತಿನ ಚೀಟಿಗೆ ಜೋಡಿಸಬಹುದಾಗಿದೆ.

ಬೂತ್ ಮಟ್ಟದ ಅಧಿಕಾರಿಗಳ ಮೂಲಕ ಆಧಾರ್ ಲಿಂಕ್ : ಹತ್ತಿರದ ಬೂತ್ ಮಟ್ಟದ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸುವ ಮೂಲಕ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡಬಹುದಾಗಿದೆ. ಬೂತ್ ಮಟ್ಟದ ಅಧಿಕಾರಿಯು ಎಲ್ಲಾ ವಿವರಗಳನ್ನು ಪರಿಶೀಲಿಸುತ್ತಾರೆ. ವಿವರಗಳನ್ನು ಪರಿಶೀಲಿಸಲು ನಿಮ್ಮ ಮನೆಗಳಿಗೆ ಭೇಟಿ ನೀಡಬಹುದು. ಒಮ್ಮೆ ಪರಿಶೀಲಿಸಿದರೆ, ನಂತರ ಅದು ದಾಖಲೆಗಳಲ್ಲಿ ಕಾಣಿಸಿಕೊಳ್ಳಲಿದೆ.

English summary
The Election Laws (Amendment) Bill, 2021, which seeks to link electoral rolls with the Aadhaar ecosystem to weed out duplication, was introduced in Lok Sabha on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X