ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ನೌಕರರ ವೇತನ ಏರಿಕೆ, ಬಜೆಟ್ ನಲ್ಲಿ ಯಾವುದೇ ಘೋಷಣೆ ಇಲ್ಲ

|
Google Oneindia Kannada News

ಮೋದಿ ನೇತೃತ್ವದ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕನಿಷ್ಟ ವೇತನ ಏರಿಕೆ ಮಾಡುವ ನಿರೀಕ್ಷೆಯಿತ್ತು. ಆದರೆ, ಸರ್ಕಾರಿ ನೌಕರರ ನಿರೀಕ್ಷೆ ಸುಳ್ಳಾಗಿದೆ.

7ನೇ ವೇತನ ಆಯೋಗ ಶಿಫಾರಸ್ಸಿನ ಅನ್ವಯ ಹೊಸ ವೇತನ ದರ ಪಟ್ಟಿ ಜಾರಿಗೆ ಬರಲಿದ್ದು, ಇದಕ್ಕೆ ಕೇಂದ್ರ ಸಚಿವ ಸಂಪುಟ ಕೂಡ 2016ರಲ್ಲೇ ಒಪ್ಪಿಗೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಮಧ್ಯಂತರ ಬಜೆಟ್ 2019: ಆದಾಯ ತೆರಿಗೆ ಮಿತಿಯಲ್ಲಿ ಏರಿಕೆ

ಆದರೆ, ಈಗ ಕನಿಷ್ಟ ವೇತನವನ್ನು 21 ಸಾವಿರ ರೂಪಾಯಿಗಳಿಗೆ ಏರಿಕೆ ಮಾಡುವ ಸಾಧ್ಯತೆ ಕಂಡು ಬಂದಿತ್ತು. ಈ ಬಗ್ಗೆ ಬಜೆಟ್ ನಲ್ಲಿ ಘೋಷಣೆ ನಿರೀಕ್ಷೆಯಿತ್ತು. ಆದರೆ, ಕಾರ್ಮಿಕರ ಪಿಂಚಣಿ, ವೃತ್ತಿ ಪರರ ತೆರಿಗೆದಾರರಿಗೆ ಸಮಾಧಾನಕರ ಸುದ್ದಿಯನ್ನು ಮಾತ್ರ ಸರ್ಕಾರ ನೀಡಿದೆ.

ಕೇಂದ್ರ ಬಜೆಟ್ : ಕಾರ್ಮಿಕ ವಲಯಕ್ಕೆ ಸಿಕ್ಕ ಯೋಜನೆಗಳೇನು?

ಬೇಡಿಕೆಗೆ ಅನುಸಾರವಾಗಿ ಮೂಲ ವೇತನವನ್ನು ಏರಿಕೆ ಮಾಡುವುದು ಹಾಗೂ ಫಿಟ್ಮೆಂಟ್ ಫಾರ್ಮುಲಾ ಅವರನ್ನು ಮೂಲವೇತನದ ಮೂರು ಪಟ್ಟು ಏರಿಕೆ ಮಾಡುವಂತೆ ಬೇಡಿಕೆ ಇದ್ದೇ ಇದೆ.

7ನೇ ವೇತನ ಆಯೋಗ ಏನು? ಏತ್ತ? ಯಾಕೆ? ಲೆಕ್ಕಾಚಾರ ಹೇಗೆ?7ನೇ ವೇತನ ಆಯೋಗ ಏನು? ಏತ್ತ? ಯಾಕೆ? ಲೆಕ್ಕಾಚಾರ ಹೇಗೆ?

2014ರ ಗಣತಿಯಂತೆ ಒಟ್ಟಾರೆ 48 ಲಕ್ಷ (ಈಗ 50 ದಾಟಿದೆ) ಕೇಂದ್ರ ಸರಕಾರಿ ನೌಕರರು (ಭಾರತೀಯ ರೈಲ್ವೆಯಲ್ಲೇ 13 ಲಕ್ಷ, ಗೃಹ ಇಲಾಖೆಯಲ್ಲಿ 9.80 ಲಕ್ಷ, ರಕ್ಷಣಾ ಇಲಾಖೆಯಲ್ಲಿ 3.98 ಲಕ್ಷ ಸೇರಿದ್ದಾರೆ) 14 ಲಕ್ಷಕ್ಕೂ ಅಧಿಕ ಮಂದಿಯನ್ನು ಹೊಂದಿರುವ ಭಾರತೀಯ ಸಶಸ್ತ್ರ ಪಡೆಯನ್ನು ನಾಗರಿಕ ಸೇವೆ ವಿಭಾಗಕ್ಕೆ ಸೇರಿಸಿಲ್ಲ.

ಹೆಚ್ಚು ಕನಿಷ್ಠ ವೇತನ ನೀಡುವ ಸಾಧ್ಯತೆ ಇಲ್ಲ

ಹೆಚ್ಚು ಕನಿಷ್ಠ ವೇತನ ನೀಡುವ ಸಾಧ್ಯತೆ ಇಲ್ಲ

ಕೇಂದ್ರ ಸರ್ಕಾರಿ ನೌಕರರು 6ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ, ಫಿಟ್ಮೆಂಟ್ ಫಾರ್ಮ್ಯೂಲಾದಂತೆ ಮೂಲ ವೇತನದ 2.57ರಂತೆ ವೇತನ ಪಡೆಯುತ್ತಿದ್ದಾರೆ. ಏಪ್ರಿಲ್ 1 ರಿಂದ 7 ನೇ ವೇತನ ಆಯೋಗದ ವರದಿ ಅನುಷ್ಠಾನವಾಗಲಿದ್ದು, ಆಯೋಗದ ಶಿಫಾರಸು ಮೀರಿ ಕನಿಷ್ಠ ವೇತನವನ್ನು 18,000 ರೂ.ನಿಂದ 21,000 ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇತ್ತು. ಆದರೆ, ಈ ಬಗ್ಗೆ ಯಾವುದೇ ಘೋಷಣೆಯಾಗಿಲ್ಲ.

ನೌಕರರಿಗೆ ಶುಭಸಿದ್ದಿ ಸಿಗುವ ನಿರೀಕ್ಷೆ ಹುಸಿ

ನೌಕರರಿಗೆ ಶುಭಸಿದ್ದಿ ಸಿಗುವ ನಿರೀಕ್ಷೆ ಹುಸಿ

ಕೆಳ ಹಂತದ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಕನಿಷ್ಟ ವೇತನವನ್ನು ಪರಿಷ್ಕರಣೆ ಮಾಡಲಾಗುತ್ತಿದೆ. 7 ನೇ ವೇತನ ಆಯೋಗ ಮಾಡಿರುವ ಶಿಫಾರಸ್ಸು ಮೀರಿ ನೌಕರರಿಗೆ ಕನಿಷ್ಠ ವೇತನ ನಿಗದಿ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಅವರು ಸಂಸತ್ತಿನಲ್ಲಿ ಭರವಸೆ ನೀಡಿದ್ದರು. ಸಂಬಳದಾರ ಮಧ್ಯಮ ವರ್ಗದವರಿಗೆ ಬಜೆಟ್ 2018ರಲ್ಲಿ ಅರುಣ್ ಜೇಟ್ಲಿ ಏನು ಕೊಟ್ಟಿಲ್ಲ ಎಂಬ ದೊಡ್ಡ ಆರೋಪ ಕೇಳಿ ಬಂದಿತ್ತು. ಇದನ್ನು ಸರಿದೂಗಿಸಲು ಮೋದಿ ಸರ್ಕಾರವು ಈ ಬಾರಿ ಸಂಬಳದಾರರಿಗೆ ಸಂತಸದ ಸುದ್ದಿಯನ್ನು ನೀಡಿದ್ದಾರೆ. ಆದರೆ, ಕೇಂದ್ರ ಸರ್ಕಾರಿ ನೌಕರರರ ವೇತನ ಏರಿಕೆ ಬಗ್ಗೆ ಯಾವುದೇ ಹೇಳಿಕೆ ಇಲ್ಲ.

ಕೇಂದ್ರ ಸರ್ಕಾರಿ ಸಿಬ್ಬಂದಿಗಳ ಬೇಡಿಕೆ ಏನಿದೆ?

ಕೇಂದ್ರ ಸರ್ಕಾರಿ ಸಿಬ್ಬಂದಿಗಳ ಬೇಡಿಕೆ ಏನಿದೆ?

ಕನಿಷ್ಟ ವೇತನವನ್ನು 18,000 ದಿಂದ 26,000 ರೂಪಾಯಿಗೆ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಪ್ರತಿಭಟನೆ ಕೂಡಾ ನಡೆಸಿದ್ದರು. ಅಂದರೆ, 3.7 ಫಿಟ್ಮೆಂಟ್ ಫಾರ್ಮುಲಾದಂತೆ ಮೂಲ ವೇತನ ಏರಿಕೆಗೆ ಆಗ್ರಹಿಸಲಾಗಿದೆ. ಆದರೆ, 21,000 ರು ಗಳಿಗೆ ನಿಗದಿ ಪಡಿಸಿ 3.00 ಫಿಟ್ಮೆಂಟ್ ನಂತೆ ಮೂಲ ವೇತನ ಏರಿಕೆ ಮಾಡುವ ನಿರೀಕ್ಷೆಯಿದೆ.

ಸರ್ಕಾರಕ್ಕೆ ಎಷ್ಟು ಹೊರೆ ಬೀಳಲಿದೆ?

ಸರ್ಕಾರಕ್ಕೆ ಎಷ್ಟು ಹೊರೆ ಬೀಳಲಿದೆ?

ಕೇಂದ್ರ ಸರ್ಕಾರಿ ನೌಕರರು ತಾವಿರುವ ನಗರಗಳ ಆಧಾರದ ಮೇಲೆ ಶೇ. 45ರವರೆಗೆ ಹೆಚ್ಚಿನ ಸಂಬಳ ಪಡೆಯಲಿದ್ದಾರೆ. 47 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ,53 ಲಕ್ಷ ಕೇಂದ್ರದ ಪಿಂಚಣಿದಾರರು, ಸೇನಾ ವಲಯದ 14 ಲಕ್ಷ ಸಿಬ್ಬಂದಿಗೆ ಇದರ ಲಾಭಗಳಾಗಲಿದ್ದು, ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ 30,748 ಕೋಟಿ ರು. ಹೊರೆ ಬೀಳಲಿದೆ. ಏಪ್ರಿಲ್ 1 ರಿಂದ 7 ನೇ ವೇತನ ಆಯೋಗದ ವರದಿಯ ಅನುಸಾರ ವೇತನ ಹೆಚ್ಚಳವಾಗಲಿದೆ. ಆದರೆ, ಕನಿಷ್ಟ ವೇತನ ಏರಿಕೆಯಾಗಿಲ್ಲ.

English summary
Union Interim Budget 2019: It has been clarified that it would be an interim budget and this brings us to the question, whether there would be any announcement relating to the 7th Pay Commission. Central Government employees have been demanding a hike in their basic minimum pay and have said that what was recommended by the pay panel was not sufficient
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X