ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ: ವೈದ್ಯಲೋಕಕ್ಕೆ ಕೈಮುಗಿದ ಅಮಿತ್ ಶಾ

|
Google Oneindia Kannada News

ನವದೆಹಲಿ, ಏಪ್ರಿಲ್ 8: ಮಾರಣಾಂತಿಕ ಕೊರೊನಾ ವೈರಸ್ ವಿರುದ್ದದ ಹೋರಾಟದಲ್ಲಿ ವೈದ್ಯಲೋಕ ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಧನ್ಯವಾದ ಸಲ್ಲಿಸಿದ್ದಾರೆ.

#ThankYouCoronaWarriors ಹ್ಯಾಷ್ ಟ್ಯಾಗ್ ಮೂಲಕ ಟ್ವೀಟ್ ಮಾಡಿರುವ ಅಮಿತ್ ಶಾ, "ಪ್ರಧಾನಿ ಮೋದಿ ನೇತೃತ್ವದಲ್ಲಿ ಕೋವಿಡ್ 19 ವಿರುದ್ದದ ಹೋರಾಟದಲ್ಲಿ ಎಲ್ಲರೂ ಒಂದಾಗಿದ್ದೇವೆ" ಎಂದು ಶಾ ಹೇಳಿದ್ದಾರೆ.

ಕೊರೊನಾ ಸಂಪೂರ್ಣ ನಿರ್ನಾಮ ಆಗುವವರೆಗೂ ವಿಮಾನ ಪ್ರಯಾಣ ಇಲ್ಲಕೊರೊನಾ ಸಂಪೂರ್ಣ ನಿರ್ನಾಮ ಆಗುವವರೆಗೂ ವಿಮಾನ ಪ್ರಯಾಣ ಇಲ್ಲ

"ಮಾನವೀಯತೆಯ ಉಳಿವಿಗಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ಕೊರೊನಾ ವಾರಿಯರ್ಸ್ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಅವರೆಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತಿದ್ದೇನೆ" ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

Union Home Minister Amit Shah, Thanked To Corona Warriors For Their Work

"ಸಾರ್ವಜನಿಕರು ತಮ್ಮ ಜವಾಬ್ದಾರಿಯನ್ನು ನಿಭಾಯಿಸಲು ಒಂದಾಗಿದ್ದಾರೆ. ವೈದ್ಯಲೋಕದವರ ಛಲ, ಬದ್ದತೆಯಿಂದಾಗಿ, ದೇಶ ಈ ವಿಚಾರದಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡು ಬರಲು ಶಕ್ತವಾಗಿದೆ" ಎಂದು ಅಮಿತ್ ಶಾ ಟ್ವೀಟ್ ನಲ್ಲಿ ಹೇಳಿದ್ದಾರೆ.

Exclusive: ಕರ್ನಾಟಕ ಕೊರೊನಾ ಹಾಟ್‌ಸ್ಪಾಟ್‌ನ ಪ್ರತ್ಯಕ್ಷ ವರದಿ; ವಿವರಗಳು ಗಂಭೀರ Exclusive: ಕರ್ನಾಟಕ ಕೊರೊನಾ ಹಾಟ್‌ಸ್ಪಾಟ್‌ನ ಪ್ರತ್ಯಕ್ಷ ವರದಿ; ವಿವರಗಳು ಗಂಭೀರ

"ಕೊರೊನಾ ವೈರಸ್ ವಿರುದ್ದ ನಾವು ಗೆಲುವು ಸಾಧಿಸುತ್ತೇವೆ. ಅಗತ್ಯ ವಸ್ತು ಪೂರೈಕೆ ಸಿಬ್ಬಂದಿ, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಪೌರ ಕಾರ್ಮಿಕರು, ವೈದ್ಯರು, ನರ್ಸ್‌ಗಳು, ದಾದಿಯರು, ಪೊಲೀಸರು, ಬ್ಯಾಂಕ್ ನೌಕರರು ಹಾಗೂ ಸರಕಾರೀ ಅಧಿಕಾರಿಗಳ ಸೇವೆ ನೆನಪಿಯಲ್ಲಿ ಉಳಿಯುವಂತದ್ದು" ಎಂದು ಅಮಿತ್ ಶಾ, ಟ್ವೀಟ್ ನಲ್ಲಿ ಹೇಳಿದ್ದಾರೆ.

ಭಾರತದಲ್ಲಿ ಇದುವರೆಗೆ 5,274 ಕೊರೊನಾ ಪಾಸಿಟೀವ್ ಕೇಸ್ ಗಳು ದಾಖಲಾಗಿದ್ದು, 149 ಜನರನ್ನು ಈ ವೈರಾಣು ಬಲಿ ಪಡೆದುಕೊಂಡಿದೆ.

English summary
Union Home Minister Amit Shah, Thanked To Corona Warriors For Their Work
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X