ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಝಿಕಾ ವೈರಾಣು ತಡೆಗೆ ಕೇಂದ್ರದ ಮಾರ್ಗಸೂಚಿ

By Prasad
|
Google Oneindia Kannada News

ನವದೆಹಲಿ, ಫೆಬ್ರವರಿ 02 : ಝಿಕಾ ವೈರಾಣು ಜಾಗತಿಕ ಆತಂಕ ಸೃಷ್ಟಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ಘೋಷಿಸಿರುವ ಹಿನ್ನೆಲೆಯಲ್ಲಿ, ಝಿಕಾ ವೈರಾಣು ಹರಡುವುದನ್ನು ತಡೆಗಟ್ಟಲು ಕೇಂದ್ರ ಸರಕಾರ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದೆ.

2015ರಲ್ಲಿ ದಕ್ಷಿಣ ಅಮೆರಿಕಾ ಖಂಡದ ಬ್ರಜಿಲ್ ನಲ್ಲಿ ಮೊದಲು ಕಾಣಿಸಿಕೊಂಡ ಝಿಕಾ ವೈರಸ್ ಈಗಾಗಲೆ 24 ರಾಷ್ಟ್ರಗಳಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಂಡಿದೆ. ಭಾರತಕ್ಕೆ ಅಧಿಕೃತವಾಗಿ ಈ ಸೋಂಕು ಕಂಡುಬರದಿದ್ದರೂ ಎಚ್ಚರಿಕೆಯಿಂದ ಇರಬೇಕು ಮತ್ತು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಸೋಂಕು ತಗುಲಿದ ಸೊಳ್ಳೆ ಕಡಿತದಿಂದ ಹಬ್ಬುವ ಈ ರೋಗ ಡೆಂಗ್ಯೂ ಮತ್ತು ಚಿಕೂನ್‌ಗೂನ್ಯಾದೊಂದಿಗೆ ಸಾಮ್ಯತೆ ಹೊಂದಿದೆ. ಇದರಿಂದ ಸಾವು ಸಂಭವಿಸದಿದ್ದರೂ ಜಾಗತಿಕವಾಗಿ ಹಾವಳಿ ಎಬ್ಬಿಸುತ್ತಿರುವುದು ಖಚಿತವಾಗಿದೆ. ಸದ್ಯಕ್ಕೆ ಈ ಸೋಂಕಿಗೆ ಯಾವುದೇ ನಿಖರವಾದ ಚಿಕಿತ್ಸೆ ಅಥವಾ ಔಷಧಿ ಕಂಡುಹಿಡಿದಿರದಿರುವುದು ತಲೆನೋವಾಗಿ ಪರಿಣಮಿಸಿದೆ. [ಝಿಕಾ ವೈರಾಣು ಪತ್ತೆ ಕಿಟ್ ಗಾಗಿ ಮನವಿ: ಖಾದರ್]

Union health ministry guidelines to tackle Zika virus

ಜಿಕಾ ವೈರಾಣಿ ತಡೆಗೆ ಕೇಂದ್ರದ ಮಾರ್ಗದರ್ಶಿ

* ಈ ರೋಗ ಗರ್ಭಿಣಿಯರಿಗೆ ತಗಲುತ್ತಿರುವ ಹಿನ್ನೆಲೆಯಲ್ಲಿ ಗರ್ಭಿಣಿಯರು ಸೋಂಕು ತಗುಲಿದ ದೇಶಕ್ಕೆ ಅಥವಾ ಪ್ರದೇಶಕ್ಕೆ ಪ್ರಯಾಣಿಸುವುದನ್ನು ಮುಂದೂಡಬೇಕು ಅಥವಾ ಕ್ಯಾನ್ಸಲ್ ಮಾಡಬೇಕು.

* ಈ ರೋಗದ ಲಕ್ಷಣಗಳ ಬಗ್ಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ವಿವರಣೆ ನೀಡಿರಬೇಕು. [ಡೆಂಗ್ಯೂ ತಡೆಗೆ ಯಾವ ಮುಂಜಾಗ್ರತಾ ಕ್ರಮ ಬೇಕು?]

* ಸೋಂಕು ತಗುಲಿದ ದೇಶದಿಂದ ಮರಳುವವರು ಮತ್ತು ಸೋಂಕಿಗೆ ತುತ್ತಾದವರು ಕೂಡಲೆ ಕಸ್ಟಮ್ಸ್ ಅಧಿಕಾರಿಗಳಿಗೆ ವರದಿ ಮಾಡಬೇಕು.

* ಆರೋಗ್ಯ ಸೇವಾ ಮಹಾ ನಿರ್ದೇಶನಾಲಯದ ಅಡಿಯಲ್ಲಿ ತಂಡವನ್ನು ಕಟ್ಟಲಾಗಿದ್ದು, ಪರಿಸ್ಥಿತಿಯ ಅಧ್ಯಯನ ನಡೆಸಲು ಸೂಚಿಸಲಾಗಿದೆ. ಈ ಕುರಿತು ಸಂಶೋಧನೆ ನಡೆಸಲು ಮತ್ತು ತಕ್ಕ ಕ್ರಮ ತೆಗೆದುಕೊಳ್ಳಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೂ ತಿಳಿಸಲಾಗಿದೆ.

* ಅಲ್ಲದೆ, ಎಪಿಡಮಿಯಾಲಜಿಸ್ಟ್ ಅಥವಾ ಸಾರ್ವಜನಿಕ ಆರೋಗ್ಯ ತಜ್ಞ, ಮೈಕ್ರೊಬಯಾಲಜಿಸ್ಟ್ ಮತ್ತು ವೈದ್ಯಕೀಯ ತಜ್ಞರನ್ನೊಳಗೊಂಡ ತಂಡ ಕಟ್ಟಿ, ಝಿಕಾ ವೈರಾಣು ಹರಡದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಪ್ರತಿ ರಾಜ್ಯಗಳಿಗೆ ಸೂಚಿಸಿದೆ.

* ಈ ರೋಗದಿಂದ ಸಾವು ಸಂಭವಿಸದಿದ್ದರೂ, ಸೋಂಕು ತಗುಲಿದ ತಾಯಂದಿರಿಗೆ ಹುಟ್ಟುವ ಮಕ್ಕಳಲ್ಲಿ ನರದೌರ್ಬಲ್ಯ ಕಂಡುಬಂದಿದ್ದು, ಸಹಜಕ್ಕಿಂತ ತಲೆ ಚಿಕ್ಕದಿರುವ ಮಕ್ಕಳು ಹುಟ್ಟುತ್ತಿರುವುದು ಕಂಡುಬಂದಿದೆ. ಈ ಕಾರಣದಿಂದಾಗಿ ಗರ್ಭಿಣಿಯರು ಹೆಚ್ಚು ಎಚ್ಚರದಿಂದ ಇರಬೇಕೆಂದು ಸೂಚನೆ ನೀಡಲಾಗಿದೆ.

English summary
Union health ministry has issued detailed guidelines to tackle Zika virus, which is spreading all over the world. World Health Organization has declared outbreak of Zika virus as public health emergency. Pregnant women have been asked to defer or cancel their travel to infected areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X