ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಹೊಸ ರೂಪಾಂತರಿ ಓಮಿಕ್ರಾನ್ ಒಂದೇ ಒಂದು ಪ್ರಕರಣವಿಲ್ಲ

|
Google Oneindia Kannada News

ನವದೆಹಲಿ, ನವೆಂಬರ್ 30: ಭಾರತದಲ್ಲಿ ಇದುವರೆಗೂ ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಪ್ರಕರಣಗಳು ಒಂದೂ ವರದಿಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ. ರಾಜ್ಯಸಭೆಯ ಪ್ರಶ್ನಾವಳಿ ಅವಧಿಯಲ್ಲಿ ಸದನಕ್ಕೆ ಅವರು ಉತ್ತರಿಸಿದ್ದಾರೆ.

ಓಮಿಕ್ರಾನ್ ರೂಪಾಂತರದ ಕುರಿತು ಪ್ರಶ್ನೆಯನ್ನು ಉದ್ದೇಶಿಸಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಉತ್ತರ ನೀಡಿದರು. "ಈ ಹೊಸ ರೂಪಾಂತರವು ಇದುವರೆಗೂ ಒಟ್ಟು 14 ದೇಶಗಳಲ್ಲಿ ಕಂಡುಬಂದಿದೆ. ಭಾರತದಲ್ಲಿ ಇನ್ನೂ ಯಾವುದೇ ಓಮಿಕ್ರಾನ್ ಪ್ರಕರಣಗಳು ವರದಿಯಾಗಿಲ್ಲ. ನಾವು ಸಾಧ್ಯವಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ಜಿನೋಮ್ ಸೀಕ್ವೆನ್ಸಿಂಗ್ ಅನ್ನು ಮಾಡುತ್ತಿದ್ದೇವೆ," ಎಂದರು.

ಭಯ ಬಿಡಿ: ಕೊರೊನಾದ ಭಯ ಬಿಡಿ: ಕೊರೊನಾದ "ಓಮಿಕ್ರಾನ್ ರೂಪಾಂತರ" ಅಂಟಿದರೂ ಸಾವಿನ ಅಪಾಯವಿಲ್ಲ

ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆಯು ರೂಪಾಂತರವನ್ನು (ಬಿ.1.1.529) 'ಕಾಳಜಿ ರೂಪಾಂತರ' ಪ್ರಬೇಧ ಎಂದು ವರ್ಗೀಕರಿಸಿದೆ. ಸೋಮವಾರ ಈ ರೂಪಾಂತರವು "ಅತ್ಯಂತ ಹೆಚ್ಚು" ಜಾಗತಿಕ ಅಪಾಯವನ್ನು ಉಂಟು ಮಾಡುತ್ತದೆ ಎಂದು ಎಚ್ಚರಿಸಿದೆ.

ಜಿನೋಮ್ ಸೀಕ್ವೆನ್ಸಿಂಗ್ ಏಕೆ ಮಾಡಲಾಗುವುದು?

ಜಿನೋಮ್ ಸೀಕ್ವೆನ್ಸಿಂಗ್ ಏಕೆ ಮಾಡಲಾಗುವುದು?

ಸಾಮಾನ್ಯವಾಗಿ ವಿಜ್ಞಾನಿಗಳಿಗೆ ಕೋವಿಡ್ ಸ್ವ್ಯಾಬ್ ಮಾದರಿಯಿಂದ ವೈರಲ್ ವಸ್ತುಗಳನ್ನು ಪ್ರತ್ಯೇಕಿಸಲು, ಆರ್‌ಎನ್‌ಎ ಗುರುತಿಸಲು ಮತ್ತು ಅದರ ಸಂಯೋಜನೆಯನ್ನು ನಿರ್ಧರಿಸಲು ಜೀನೋಮ್ ಸೀಕ್ವೆನ್ಸಿಂಗ್ ಅನುವು ಮಾಡಿಕೊಡುತ್ತದೆ. ಆದ್ದರಿಂದ, ಒಬ್ಬ ವ್ಯಕ್ತಿಯು ಸೋಂಕಿಗೆ ಒಳಗಾಗಿರುವ ಕೊರೊನಾವೈರಸ್ ನಿಖರವಾದ ರೂಪಾಂತರವನ್ನು ಗುರುತಿಸಲು ಸಾಧ್ಯವಾಗುತ್ತದೆ.

ಭಾರತದಲ್ಲಿನ ಸಾಮಾನ್ಯ ಕೋವಿಡ್ -19 ಪರಿಸ್ಥಿತಿಯ ಕುರಿತು ಮಾತನಾಡಿದ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ,'ಕೋವಿಡ್ -19 ನಿಯಂತ್ರಣದಲ್ಲಿದೆ, ಆದರೆ ಹೋಗಿಲ್ಲ. ದೇಶಾದ್ಯಂತ ಇದುವರೆಗೆ 124 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಹರಡಿದ ಓಮಿಕ್ರಾನ್ ರೂಪಾಂತರ

ಜಾಗತಿಕ ಮಟ್ಟದಲ್ಲಿ ಹರಡಿದ ಓಮಿಕ್ರಾನ್ ರೂಪಾಂತರ

ದಕ್ಷಿಣ ಆಫ್ರಿಕಾ ಮತ್ತು ಬೋಟ್ಸ್ವಾನಾದಂತಹ ದಕ್ಷಿಣ ಆಫ್ರಿಕಾದ ದೇಶಗಳಲ್ಲಿ ಮೊದಲು ಪತ್ತೆಯಾದ ಓಮಿಕ್ರಾನ್ ರೂಪಾಂತರವು ಈಗ ಪ್ರಪಂಚದ ಹಲವಾರು ಭಾಗಗಳಿಗೆ ಹರಡಿದೆ. ಇದರ ಪರಿಣಾಮವಾಗಿ ದೇಶಗಳು ಹೊಸ ಪ್ರಯಾಣ ನಿರ್ಬಂಧ ಹೇರಲು ಮತ್ತು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

ಒಮಿಕ್ರಾನ್‌ನ ಸೋಂಕಿತ ಪ್ರಕರಣಗಳು ಹೊಸ ದೇಶ ಮತ್ತು ಪ್ರದೇಶಗಳಿಗೆ ಹರಡಿದ ದಿನದಂದು ವಿಶ್ವ ಆರೋಗ್ಯ ಸಂಸ್ಥೆಯು ಈ ಎಚ್ಚರಿಕೆಯನ್ನು ನೀಡಿದೆ. ದಕ್ಷಿಣ ಆಫ್ರಿಕಾದ ಹೊರತಾಗಿ ಸ್ಕಾಟ್ಲೆಂಡ್ ಆರು ಪ್ರಕರಣಗಳನ್ನು ವರದಿ ಮಾಡಿದರೆ, ಪೋರ್ಚುಗಲ್ 13 ಪ್ರಕರಣಗಳನ್ನು ವರದಿ ಮಾಡಿದೆ. ಕೆನಡಾದಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿದ್ದರೆ, ಆಸ್ಟ್ರೇಲಿಯಾದಲ್ಲಿ ಈ ಹಿಂದೆ ಪತ್ತೆಯಾದ ಎರಡರ ಜೊತೆಗೆ ಇನ್ನೂ ಎರಡು ಪ್ರಕರಣಗಳು ವರದಿಯಾಗಿವೆ. ಒಮಿಕ್ರಾನ್ ರೂಪಾಂತರ ಸೋಂಕುಗಳ ತಗುಲಿದವರ ಸಂಖ್ಯೆಯು ಈಗ 150ಕ್ಕೆ ಏರಿಕೆಯಾಗಿದ್ದು, ಕನಿಷ್ಠ 15 ದೇಶಗಳು ಅಥವಾ ಪ್ರದೇಶಗಳಲ್ಲಿ ಇದುವರೆಗೆ ಈ ರೂಪಾಂತರ ಪತ್ತೆಯಾಗಿದೆ.

ಹೊಸ ರೂಪಾಂತರದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಹೊಸ ರೂಪಾಂತರದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಕಳೆದ ಭಾನುವಾರ ಓಮಿಕ್ರಾನ್ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಆದರೆ ತದನಂತರದಲ್ಲಿ ವರದಿಯಾದ ಪ್ರಕರಣಗಳ ಪರಾಮರ್ಶೆ ನಂತರ ಈ ರೂಪಾಂತರವು ಹೆಚ್ಚು ಹರಡುವಿಕೆ ಹಾಗೂ ಅಪಾಯವನ್ನು ಹೊಂದಿರುವ ಸಾಧ್ಯತೆಗಳಿವೆ ಎಂದು ಹೇಳಿದೆ. ಪ್ರತಿರೋಧಕವನ್ನು ದಾಟಿಕೊಂಡು ಹರಡುವ ಸಾಮರ್ಥ್ಯವನ್ನು ಹೊಂದಿರುವ ಓಮಿಕ್ರಾನ್ ರೂಪಾಂತರವು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಹರಡುವ ಅಪಾಯವಿದೆ. ಜಾಗತಿಕ ಮಟ್ಟದಲ್ಲಿ ಓಮಿಕ್ರಾನ್ ಅಪಾಯವನ್ನು ಸೃಷ್ಟಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆ ನೀಡಿತು.

ಭಾರತದಲ್ಲಿ ಓಮಿಕ್ರಾನ್ ಕುರಿತು ಹೇಗಿದೆ ಪ್ರತಿಕ್ರಿಯೆ

ಭಾರತದಲ್ಲಿ ಓಮಿಕ್ರಾನ್ ಕುರಿತು ಹೇಗಿದೆ ಪ್ರತಿಕ್ರಿಯೆ

ದೇಶದಲ್ಲಿ ಓಮಿಕ್ರಾನ್ ಸೋಂಕಿನ ಕುರಿತು ಮುನ್ನೆಚ್ಚರಿಕೆಯಾಗಿ ಹಲವು ರಾಜ್ಯಗಳು ತಮ್ಮದೇ ಆಗಿರುವ ನಿರ್ಬಂಧಗಳನ್ನು ಹಾಕಿಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಜೊತೆಗೆ ಸೋಂಕಿನ ಪರೀಕ್ಷೆ ಹಾಗೂ ಜಿನೋಮ್ ಸೀಕ್ವೆನ್ಸಿಂಗ್ ಅನ್ನು ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ. ಹೆಚ್ಚುವರಿಯಾಗಿ, ವಾಣಿಜ್ಯ ಅಂತಾರಾಷ್ಟ್ರೀಯ ವಿಮಾನಗಳ ಪುನರಾರಂಭದ ವಿಷಯದಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು, 'ಅಪಾಯದಲ್ಲಿರುವ' ದೇಶಗಳಿಂದ ಆಗಮಿಸುವ ಪ್ರಯಾಣಿಕರು ಭಾರತಕ್ಕೆ ಪ್ರವೇಶಿಸಿದ ನಂತರ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗುವುದನ್ನು ಕಡ್ಡಾಯಗೊಳಿಸಲಾಗಿದೆ.

Recommended Video

ಸರ್ಕಾರದ ನಿರ್ಧಾರ ಎನ್ ಗೊತ್ತಾ? | Oneindia Kannada

English summary
Union health minister Mansukh Mandaviya said, No Omicron cases has been found in India yet. We are taking all possible precautions. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X