ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಮಾರ್ಚ್ 2024ಕ್ಕೆ 10 ಸಾವಿರ ಜನೌಷಧಿ ಕೇಂದ್ರ ಸ್ಥಾಪನೆ

|
Google Oneindia Kannada News

ನವದೆಹಲಿ, ಮೇ 31; ಕೇಂದ್ರ ಸರ್ಕಾರ 2024ರ ಮಾರ್ಚ್ ವೇಳೆಗೆ ದೇಶಾದ್ಯಂತ 10 ಸಾವಿರ ಪ್ರಧಾನ ಮಂತ್ರಿ ಭಾರತೀಯ ಜನ್ ಔಷಧಿ ಕೇಂದ್ರ ಸ್ಥಾಪನೆ ಗುರಿ ಹೊಂದಿದೆ. 2008ರಲ್ಲಿ ಮೊದಲ ಬಾರಿಗೆ ಈ ಯೋಜನೆಯನ್ನು ಆರಂಭಿಸಲಾಗಿತ್ತು.

ಮೇ 31ರ ಮಾಹಿತಿಯಂತೆ ದೇಶದ 739 ಜಿಲ್ಲೆಗಳಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (ಪಿಎಂಬಿಜೆಪಿ) ಯೋಜನೆ ಜಾರಿಗೆ ಬಂದಿದೆ. ಒಟ್ಟು 8,735 ಕೇಂದ್ರಗಳಿವೆ.

ಮಿಂಟೋ ಕಣ್ಣಾಸ್ಪತ್ರೆ ದುರಂತ: ಔಷಧ ಕಂಪನಿ ನಿರ್ದೇಶಕರು ಖುಲಾಸೆ ಮಿಂಟೋ ಕಣ್ಣಾಸ್ಪತ್ರೆ ದುರಂತ: ಔಷಧ ಕಂಪನಿ ನಿರ್ದೇಶಕರು ಖುಲಾಸೆ

ಕೋವಿಡ್ ಪರಿಸ್ಥಿತಿಯಲ್ಲಿಯೂ ಸಹ ಜನೌಷಧಿ ಕೇಂದ್ರ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿದೆ. 2021ರ ಮೇ ತಿಂಗಳಿನಲ್ಲಿ 83.77 ಕೋಟಿ ರೂ. ವಹಿವಾಟು ನಡೆಸಿದೆ.

ಅಫ್ಘಾನ್‌ಗೆ ಗೋಧಿ, ಔಷಧ ಸಾಗಿಸಲು ಭಾರತಕ್ಕೆ ಪಾಕ್ ಒಪ್ಪಿಗೆಅಫ್ಘಾನ್‌ಗೆ ಗೋಧಿ, ಔಷಧ ಸಾಗಿಸಲು ಭಾರತಕ್ಕೆ ಪಾಕ್ ಒಪ್ಪಿಗೆ

Union Govt To Aim Set Up 10,000 Janaushadhi Kendras By March 2024

ಜನರು ಪಿಎಂಬಿಜೆಪಿಯಲ್ಲಿ ಕಡಿಮೆ ದರದಲ್ಲಿ ಸಿಗುವ ಔಷಧಿಗಳನ್ನು ಖರೀದಿ ಮಾಡುತ್ತಿದ್ದಾರೆ. ಸದ್ಯ ಈ ಕೇಂದ್ರಗಳಲ್ಲಿ 1600 ಔಷಧಿಗಳು, 250 ಶಸ್ತ್ರ ಚಿಕಿತ್ಸಾ ಉಪಕರಣಗಳು ಲಭ್ಯವಿದೆ.

ಕೊರೊನಾ ಚಿಕಿತ್ಸೆ; ಸಿಆರ್‌ಡಿಐ Umifenovir ಔಷಧ ಪ್ರಯೋಗ ಯಶಸ್ವಿಕೊರೊನಾ ಚಿಕಿತ್ಸೆ; ಸಿಆರ್‌ಡಿಐ Umifenovir ಔಷಧ ಪ್ರಯೋಗ ಯಶಸ್ವಿ

ಎಲ್ಲರಿಗೂ ಕೈಗೆಟುಕುವ ದರದಲ್ಲಿ ಗುಣಮಟ್ಟದ ಔಷಧಗಳು ಲಭ್ಯವಾಗುವಂತೆ ಮಾಡುವ ಉದ್ದೇಶದೊಂದಿಗೆ ಭಾರತ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಈ ಯೋಜನೆ ಜಾರಿಗೊಳಿಸಿತು.

2008ರ ನವೆಂಬರ್ ನಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ (ಪಿಎಂಬಿಜೆಪಿ)ಯನ್ನು ಆರಂಭಿಸಲಾಯಿತು. ದೇಶದ ಮೂಲೆ ಮೂಲೆಗಳಲ್ಲಿ ಜನರಿಗೆ ಸುಲಭವಾಗಿ ಕೈಗೆಟುಕುವ ದರದಲ್ಲಿ ಔಷಧ ತಲುಪುವುದನ್ನು ಈ ಯೋಜನೆ ಖಾತ್ರಿಪಡಿಸುತ್ತಿದೆ. ಹೊಸ ಔಷಧಗಳು ಮತ್ತು ಪೌಷ್ಟಿಕಾಂಶ ಉತ್ಪನ್ನಗಳಾದ ಪ್ರೋಟೀನ್ ಪೌಡರ್, ಮಾಲ್ಟ್ ಆಧಾರಿತ ಪೂರಕ ಆಹಾರ ಉತ್ಪನ್ನಗಳು, ಪ್ರೊಟೀನ್, ರೋಗನಿರೋಧಕ ಉತ್ಪನ್ನಗಳು, ಸ್ಯಾನಿಟೈಸರ್, ಮಾಸ್ಕ್ ಇತ್ಯಾದಿ ಉತ್ಪನ್ನಗಳನ್ನೂ ಸಹ ಪರಿಚಯಿಸಲಾಗಿದೆ.

ಪಿಎಂಬಿಜೆಪಿ ಅಡಿಯಲ್ಲಿ ಔಷಧಗಳ ಬೆಲೆ ಬ್ರಾಂಡೆಡ್ ಔಷಧಿಗಳ ಬೆಲೆಗಿಂತ ಶೇ. 50ರಿಂದ 90ರಷ್ಟು ಕಡಿಮೆ. ಪ್ರಸ್ತುತ ಗುರುಗ್ರಾಮ, ಚೆನ್ನೈ ಮತ್ತು ಗೌವಾಹಟಿ ಮೂರು ಕಡೆ ಪಿಎಂಬಿಜೆಪಿ ಗೋದಾಮುಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಸೂರತ್ ನಲ್ಲಿ ನಾಲ್ಕನೇ ಗೋದಾಮು ನಿರ್ಮಾಣ ಹಂತದಲ್ಲಿದೆ.

English summary
Union government aim to increase Janaushadhi Kendras to 10,000 by March 2024. It will help people to purchase generic medicines and surgical equipment in low cost.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X