ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾತ್ರಿ 9 ರಿಂದ ಬೆಳಗ್ಗೆ 5ರ ತನಕ ಕರ್ಫ್ಯೂ; ಸರ್ಕಾರದ ಸ್ಪಷ್ಟನೆ

|
Google Oneindia Kannada News

ನವದೆಹಲಿ, ಜೂನ್ 12 : ಕೇಂದ್ರ ಗೃಹ ಇಲಾಖೆ 5ನೇ ಹಂತದ ಲಾಕ್ ಡೌನ್ ಮಾರ್ಗಸೂಚಿ ಪ್ರಕಟಿಸಿದಾಗ ದೇಶಾದ್ಯಂತ ಕರ್ಫ್ಯೂ ಜಾರಿಗೊಳಿಸುವ ಆದೇಶ ನೀಡಿತ್ತು. ಈ ಆದೇಶದ ಕುರಿತು ಇಂದು ರಾಜ್ಯಗಳಿಗೆ ಸ್ಪಷ್ಟನೆಗಳನ್ನು ನೀಡಲಾಗಿದೆ.

Recommended Video

Kaif Think Rohit Sharma Can Score First T20 Double Century | Rohit Sharma | Kaif

ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಬಳ್ಳಾಳ್ ಕರ್ಫ್ಯೂ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ/ಕೇಂದ್ರಾಡಳಿತ ಪ್ರದೇಶಗಳಿಗೆ ಶುಕ್ರವಾರ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದಲ್ಲಿ ಕರ್ಫ್ಯೂ ಬಗ್ಗೆ ಎದ್ದಿರುವ ಗೊಂದಲಗಳಿಗೆ ಸ್ಪಷ್ಟನೆ ಕೊಡಲಾಗಿದೆ.

ಕರ್ನಾಟಕದಲ್ಲಿ ಕರ್ಫ್ಯೂ ಸಮಯದಲ್ಲಿ ಬಸ್, ಆಟೋ,ಕ್ಯಾಬ್ ಓಡಾಟಕ್ಕೆ ಅನುಮತಿ ಕರ್ನಾಟಕದಲ್ಲಿ ಕರ್ಫ್ಯೂ ಸಮಯದಲ್ಲಿ ಬಸ್, ಆಟೋ,ಕ್ಯಾಬ್ ಓಡಾಟಕ್ಕೆ ಅನುಮತಿ

ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆಯ ತನಕ ಇರುವ ಕರ್ಫ್ಯೂ ಜನರ ಸಂಚಾರಕ್ಕೆ ಮಾತ್ರ ಅನ್ವಯವಾಗುತ್ತದೆ. ಹೆದ್ದಾರಿಗಳಲ್ಲಿ ಸಂಚಾರ ನಡೆಸುವ ಬಸ್, ಲಾರಿಗಳಿಗೆ ಅನ್ವಯ ಆಗುವುದಿಲ್ಲ ಎಂದು ಪತ್ರದಲ್ಲಿ ವಿವರಣೆ ನೀಡಲಾಗಿದೆ.

ಲಾಕ್ ಡೌನ್ 5.0; 9 ರಿಂದ 5 ಗಂಟೆ ತನಕ ದೇಶಾದ್ಯಂತ ಕರ್ಫ್ಯೂ ಲಾಕ್ ಡೌನ್ 5.0; 9 ರಿಂದ 5 ಗಂಟೆ ತನಕ ದೇಶಾದ್ಯಂತ ಕರ್ಫ್ಯೂ

 Union Govt Clarification On Night Curfew

ರಾತ್ರಿ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ರಾತ್ರಿ 9 ರಿಂದ ಬೆಳಗ್ಗೆ 5ರ ತನಕ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಜನರು ಸಂಚಾರ ನಡೆಸಲು ಅವಕಾಶ ನೀಡಬಾರದು. ಈ ಕುರಿತು ಸ್ಥಳೀಯ ಆಡಳಿತಕ್ಕೂ ಮಾಹಿತಿ ನೀಡಿ ಎಂದು ಪತ್ರದಲ್ಲಿ ಸೂಚನೆ ಕೊಡಲಾಗಿದೆ.

ಅನ್ ಲಾಕ್ 1.0: ಇಂದಿನಿಂದ ಬಂಡೀಪುರದಲ್ಲಿ ಸಫಾರಿ ಆರಂಭಅನ್ ಲಾಕ್ 1.0: ಇಂದಿನಿಂದ ಬಂಡೀಪುರದಲ್ಲಿ ಸಫಾರಿ ಆರಂಭ

ಜನರ ಸಂಚಾರವನ್ನು ರಾತ್ರಿ 9ರಿಂದ ಬೆಳಗ್ಗೆ 5ರ ತನಕ ನಿಷೇಧಿಸುವ ನಿಯಮ ಇಡೀ ದೇಶದಲ್ಲಿ ಜಾರಿಯಲ್ಲಿದೆ. ಹೆದ್ದಾರಿಗಳಲ್ಲಿ ಸಾಗುವ ವಾಹನಗಳಿಗೆ ಯಾವುದೇ ನಿರ್ಬಂಧವಿಲ್ಲ. ಅಗತ್ಯ ಸೇವೆಗಳನ್ನು ಪೂರೈಸುವ ಜನರು ಸಹ ಸಂಚಾರ ನಡೆಸಬಹುದು ಎಂದು ಗೃಹ ಇಲಾಖೆ ಹೇಳಿದೆ.

ಕರ್ಫ್ಯೂ ಅವಧಿಯಲ್ಲಿ ಲಾರಿಗಳಿಗೆ ಸರಕು ತುಂಬುವುದು, ಇಳಿಸುವುದಕ್ಕೆ ನಿರ್ಬಂಧವಿಲ್ಲ. ಪ್ರಯಾಣಿಕರು ಇರುವ ಬಸ್‌ಗಳು ಸಂಚಾರ ನಡೆಸಬಹುದು. ಬಸ್, ರೈಲು, ವಿಮಾನಗಳಲ್ಲಿ ಜನರು ಸಂಚಾರ ನಡೆಸಬಹುದು ಎಂದು ಕೇಂದ್ರ ಗೃಹ ಇಲಾಖೆ ತನ್ನ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದೆ.

English summary
Home ministry clarified that 9 pm to 5 am night curfew is meant for the people and not buses or trucks. Restrictions do not apply to buses and trucks to run on highways.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X