ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ಲಾಂ ಕುರಿತು ಸಂಸದ ತೇಜಸ್ವಿ ಟ್ವೀಟ್: ಅಳಿಸಿ ಹಾಕಲು ಟ್ವಿಟ್ಟರ್‌ಗೆ ಕೇಂದ್ರ ಮನವಿ

|
Google Oneindia Kannada News

ನವದೆಹಲಿ, ಮೇ 8: ಇಸ್ಲಾಂ ಧರ್ಮದ ಕುರಿತಂತೆ ಸಂಸದ ತೇಜಸ್ವಿ ಸೂರ್ಯ ಮಾಡಿದ್ದ ಟ್ವೀಟ್‌ನ್ನು ಅಳಿಸಿಹಾಕುವಂತೆ ಕೇಂದ್ರ ಸರ್ಕಾರ ಟ್ವಿಟ್ಟರ್‌ಗೆ ಮನವಿ ಮಾಡಿದೆ.

Recommended Video

ಡಿ ಸಿ‌ ಎಂ ಅಶ್ವತ್ಥ್ ನಾರಾಯಣ ಅವರ ಜೊತೆ ಒನ್ ಇಂಡಿಯಾ ಸಂದರ್ಶನ | C.N Ashwath Narayan | Karnataka

ಅವರು ಟ್ವೀಟ್‌ನಲ್ಲಿ ಸಾಮಾನ್ಯವಾಗಿ ಎಲ್ಲಾ ಉಗ್ರರು ಮುಸ್ಲಿಮರು ಧರ್ಮದವರಾಗಿದ್ದಾರೆ, ಭಯೋತ್ಪಾದನೆಗೆ ಧರ್ಮವಿರುವುದಿಲ್ಲ ಆದರೆ ಭಯೋತ್ಪಾದಕರಿಗೆ ಖಂಡಿತವಾಗಿಯೂ ಧರ್ಮವಿರುತ್ತದೆ ಎಂದು ಹೇಳಿದ್ದರು.

ಕೆ ಆರ್ ಮಾರುಕಟ್ಟೆ ಸ್ಥಳಾಂತರಕ್ಕೆ ಸಂಸದ ತೇಜಸ್ವೀ ಸೂರ್ಯ ಆಗ್ರಹಕೆ ಆರ್ ಮಾರುಕಟ್ಟೆ ಸ್ಥಳಾಂತರಕ್ಕೆ ಸಂಸದ ತೇಜಸ್ವೀ ಸೂರ್ಯ ಆಗ್ರಹ

ಇಸ್ಲಾಂ ಕುರಿತಂತೆ ತೇಜಸ್ವಿ ಮಾಡಿದ್ದ 121 ಟ್ವೀಟ್‌ಗಳಲ್ಲಿ 5 ಟ್ವೀಟ್‌ಗಳನ್ನು ಅಳಿಸಿ ಹಾಕುವಂತೆ ಕೇಂದ್ರ ಕೇಳಿದೆ. ಏಪ್ರಿಲ್ 28ರಂದು ಕೇಂದ್ರ ಟ್ವಿಟ್ಟರ್ ಬಳಿ ಮನವಿ ಮಾಡಿತ್ತು. ಹಾಗೆಯೇ ಅರಬ್ ಮಹಿಳೆಯರ ಕುರಿತು ಕೂಡ ಅವರು ಕಾಮೆಂಟ್ ಮಾಡಿದ್ದರು.

Union Govt Asks Twitter To Remove BJP MP Tejasvi Surya’s Tweet On Islam

ಇಸ್ಲಾಂ ಧರ್ಮವನ್ನು ಭಯೋತ್ಪಾದಕರೊಂದಿಗೆ ಲಿಂಕ್ ಮಾಡಿರುವ 2015 ರ ತೇಜಸ್ವಿ ಸೂರ್ಯನ ಟ್ವೀಟ್‌ಗಳನ್ನು ತೆಗೆದುಹಾಕುವಂತೆ ಟ್ವಿಟರ್‌ಗೆ ಕೇಂದ್ರ ಸರ್ಕಾರ ಮನವಿ ಮಾಡಿದೆ. ನಿಜ, ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ ಎಂದು ಸೂರ್ಯ ಅವರ ಟ್ವೀಟ್ ಹೇಳಿದೆ. ಆದರೆ ಭಯೋತ್ಪಾದಕನಿಗೆ ಖಂಡಿತವಾಗಿಯೂ ಒಂದು ಧರ್ಮವಿದೆ, ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಅದು ಇಸ್ಲಾಂ ಧರ್ಮ ಎಂದು ತೇಜಸ್ವಿ ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದರು.

ಲೋಕಸಭೆಯಲ್ಲಿ ಪುಟ್ಬಾಲ್ ಆಡಿದ ಕರ್ನಾಟಕ ಸಂಸದರುಲೋಕಸಭೆಯಲ್ಲಿ ಪುಟ್ಬಾಲ್ ಆಡಿದ ಕರ್ನಾಟಕ ಸಂಸದರು

ಈ ಬಗ್ಗೆ ಟ್ವಿಟ್ಟರ್ ಪ್ರತಿಕ್ರಿಯಿಸಿದ್ದು, ಸರಕಾರದ ಮನವಿಯ ಮೇರೆಗೆ ಸೂರ್ಯನ ಸಂದೇಶವು ಇತ್ತೀಚೆಗೆ ಭಾರತದಲ್ಲಿ ನೋಡುವುದನ್ನು 'ತಡೆಹಿಡಿಯಲಾಗಿದೆ' ಎಂದು ಹೇಳಿದೆ. ತೇಜಸ್ವಿ ಅವರು ಮಾಡಿದ್ದ ಟ್ವೀಟ್‌ಗೆ ಸಾಮಾಜಿಕ ಜಾಲತಾಣಗಳಿಂದ ವಿರೋಧ ವ್ಯಕ್ತವಾಗಿದ್ದಷ್ಟೇ ಅಲ್ಲದೆ ಇದೀಗ ಕೇಂದ್ರ ಸರ್ಕಾರವೇ ಖುದ್ದಾಗಿ ಆ ಟ್ವೀಟ್ ಅಳಿಸಿ ಹಾಕಲು ಹೇಳಿದೆ.

ತೇಜಸ್ವಿ ಸೂರ್ಯ ಆಡಳಿತಾರೂಢ ಬಿಜೆಪಿಯಲ್ಲಿ ಉದಯೋನ್ಮುಖ ತಾರೆಯಾಗಿರಬಹುದು. ಆದರೆ ಮುಸ್ಲಿಂ ವಿರೋಧಿ ಮಾತುಗಳನ್ನು ಆಡುವುದರ ತೊಂದರೆಯಿದೆ
ಎಂದು ತಿಳಿದ ಬಿಜೆಪಿ ಅವರ ಹಳೆಯ ಟ್ವೀಟನ್ನು ಡಿಲಿಟ್ ಮಾಡಲು ಟ್ವಿಟ್ಟರ್ ಗೆ ಮನವಿ ಮಾಡಿಕೊಂಡಿದೆ.

English summary
Tejasvi Surya may be a rising star in the ruling BJP – a party not known to have a problem with anti-Muslim dog whistling – but his pre-parliamentary bigotry appears to have caused the establishment so much diplomatic grief that the Indian government last month asked Twitter to effectively take down one of his tweets from 2015 that linked Islam with terrorists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X