ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ಭದ್ರತೆಗೆ ವಿಶೇಷ ಮುತುವರ್ಜಿ ತೋರಿದ ಮೋದಿ ಸರಕಾರ

|
Google Oneindia Kannada News

Recommended Video

ರಾಹುಲ್, ಸೋನಿಯಾ ಬಗ್ಗೆ ವಿಶೇಷ ಕಾಳಜಿ ತೋರಿದ ಮೋದಿ. | Narendra Modi

ನವದೆಹಲಿ, ಅ 7: ಎಸ್‌ಪಿಜಿ ಭದ್ರತೆಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿ, ಮಾರ್ಗಸೂಚಿಯನ್ನು ಕೇಂದ್ರ ಗೃಹ ಇಲಾಖೆ ಹೊರಡಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಇತ್ತೀಚಿನ ಕಾಂಬೋಡಿಯಾ ಪ್ರವಾಸದ ನಂತರ, ಕೇಂದ್ರ ಈ ಬದಲಾವಣೆಯನ್ನು ತಂದಿದೆ.

ಸದ್ಯ, ಪ್ರಧಾನಿ ಮೋದಿ, ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಗೆ, ಎಸ್‌ಪಿಜಿ ಭದ್ರತೆ ವ್ಯವಸ್ಥೆಯಿದೆ.

ಎಸ್‌ಪಿಜಿ ಭದ್ರತೆಯಲ್ಲಿರುವ ವ್ಯಕ್ತಿಗಳು, ವಿದೇಶಕ್ಕೆ ಪ್ರಯಾಣಿಸಿದಾಗ, ಎಸ್‌ಪಿಜಿ ಸಿಬ್ಬಂದಿಗಳು ಎಲ್ಲ ಸಮಯದಲ್ಲೂ ಅವರೊಂದಿಗೆ ಹೋಗುವುದನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿದೆ.

Union Government Revises SPG Security Rules For VVIPs Including Gandhi Family

ವಿದೇಶ ಪ್ರವಾಸಕ್ಕೆ ಹೋಗುವಾಗ, ಒಂದು ವೇಳೆ, ಎಸ್‌ಪಿಜಿ ಸಿಬ್ಬಂದಿಗಳು ತಮ್ಮ ಜೊತೆ ಬರುವುದಕ್ಕೆ ಈ ಭದ್ರತಾಡಿಯಲ್ಲಿರುವವರು, ಆಕ್ಷೇಪ ಎತ್ತಿದ್ದೇ ಆದಲ್ಲಿ, ಅವರ ವಿದೇಶಿ ಭೇಟಿಗಳನ್ನು ಕೇಂದ್ರ ಸರಕಾರ ರದ್ದುಗೊಳಿಸಬಹುದು ಎಂದು ಹೇಳಲಾಗಿದೆ.

ಇದುವರೆಗೆ, ಗಾಂಧಿ ಕುಟುಂಬದ ಸದಸ್ಯರು ವಿದೇಶಕ್ಕೆ ಹೋದಾಗ, ವಿದೇಶದಲ್ಲಿ ಲ್ಯಾಂಡ್ ಆಗುವ ಮೊದಲ ಸ್ಥಳದವರೆಗೆ ಮಾತ್ರ, ಎಸ್‌ಪಿಜಿ ಸಿಬ್ಬಂದಿಗಳನ್ನು ಜೊತೆಗೆ ಕರೆದುಕೊಂಡು ಹೋಗಿ, ನಂತರ ವಾಪಸ್ ಕಳುಹಿಸುತ್ತಿದ್ದರು. ಆದರೆ, ಇದು ಅಪಾಯಕ್ಕೆ ಕಾರಣವಾಗಬಹುದು ಎನ್ನುವುದಕ್ಕಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

English summary
Special Protection Group (SPG), which provides proximate protection to protectee, has been issued fresh guidelines by the Centre. As per the guidelines, when protectee travels abroad, it will now be mandatory for SPG personnel to accompany them at all times.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X