ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ - 19 ಚಿಕಿತ್ಸೆಗಾಗಿ 215 ರೈಲ್ವೆ ನಿಲ್ದಾಣ ಗುರುತಿಸಿದ ಕೇಂದ್ರ

|
Google Oneindia Kannada News

ನವದೆಹಲಿ, ಮೇ 07 : ಕೇಂದ್ರ ಸರ್ಕಾರ ಭಾರತೀಯ ರೈಲ್ವೆಯ ಐಸೋಲೇಷನ್‌ ಕೋಚ್‌ಗಳನ್ನು ಬಳಕೆ ಮಾಡಿಕೊಳ್ಳಲು 215 ರೈಲ್ವೆ ನಿಲ್ದಾಣಗಳನ್ನು ಗುರುತಿಸಿದೆ. ಈ ನಿಲ್ದಾಣಗಳನ್ನು 'ಕೋವಿಡ್ ಕೇರ್ ಸೆಂಟರ್' ಎಂದು ಪಟ್ಟಿ ಮಾಡಲಾಗುತ್ತದೆ.

ಒಟ್ಟು 23 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ರೈಲು ನಿಲ್ದಾಣಗಳನ್ನು ಗುರುತು ಮಾಡಲಾಗಿದೆ. ರೈಲ್ವೆ ಸಿದ್ಧಪಡಿಸಿರುವ ಐಸೋಲೇಷನ್ ಕೋಚ್‌ಗಳಲ್ಲಿ ಕೋವಿಡ್ - 19 ಖಚಿತವಾದ, ಶಂಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ.

'ಶ್ರಮಿಕ್ ವಿಶೇಷ ರೈಲು' ವಿವಾದ ಎಬ್ಬಿಸಿದ್ದು ಏಕೆ? 'ಶ್ರಮಿಕ್ ವಿಶೇಷ ರೈಲು' ವಿವಾದ ಎಬ್ಬಿಸಿದ್ದು ಏಕೆ?

ಆರೋಗ್ಯ ಸಚಿವಾಲಯ ಬುಧವಾರ ಈ ಕುರಿತು ಅಧಿಸೂಚನೆಯನ್ನು ಹೊರಡಿಸಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಾಗ ರೈಲ್ವೆ ಕೋಚ್‌ಗಳನ್ನು ಚಿಕಿತ್ಸೆಗೆ ಬಳಕೆ ಮಾಡಿಕೊಳ್ಳಲಾಗುತ್ತದೆ.

ಶ್ರಮಿಕ್ ವಿಶೇಷ ರೈಲಿನ ದರ; ರೈಲ್ವೆ ಇಲಾಖೆಯ ಸ್ಪಷ್ಟನೆ ಶ್ರಮಿಕ್ ವಿಶೇಷ ರೈಲಿನ ದರ; ರೈಲ್ವೆ ಇಲಾಖೆಯ ಸ್ಪಷ್ಟನೆ

 Union Government Identified 215 Railway Station For COVID 19 Treatment

ರೈಲ್ವೆ ಕೋಚ್‌ಗಳಲ್ಲಿ ಇರುವ ರೋಗಿಗಳ, ಶಂಕಿತರ ಮೇಲೆ ನಿಗಾ ಇಡಲಾಗುತ್ತದೆ. ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯ ಇದೆ ಎಂದು ಅನ್ನಿಸಿದರೆ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪಿಪಿಇ ಕಿಟ್ ಉತ್ಪಾದನೆ ಆರಂಭಿಸಿದ ನೈಋತ್ಯ ರೈಲ್ವೆ ಪಿಪಿಇ ಕಿಟ್ ಉತ್ಪಾದನೆ ಆರಂಭಿಸಿದ ನೈಋತ್ಯ ರೈಲ್ವೆ

ಕೇಂದ್ರ ಸರ್ಕಾರ ಗುರುತಿಸಿರುವ ಕೊರೊನಾ ಹಾಟ್ ಸ್ಪಾಟ್ ನಗರಗಳು, ನಗರ ಪ್ರದೇಶ, ಪಟ್ಟಣ ಪ್ರದೇಶಗಳ ರೈಲು ನಿಲ್ದಾಣಗಳನ್ನು ಗುರುತಿಸಲಾಗಿದೆ. ರೈಲು ನಿಲ್ದಾಣಕ್ಕೆ ಕೋಚ್‌ಗಳನ್ನು ತರಲಾಗುತ್ತದೆ ಮತ್ತು ಹತ್ತಿರದ ಕೋವಿಡ್ - 19 ಆಸ್ಪತ್ರೆ ಜೊತೆ ಸಂಪರ್ಕ ಕಲ್ಪಿಸಲಾಗುತ್ತದೆ.

ಆರೋಗ್ಯ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ, ಕೋಲ್ಕತ್ತಾದ ರೈಲು ನಿಲ್ದಾಣಗಳು ಸೇರಿವೆ. ಉತ್ತರ ಪ್ರದೇಶ, ಅಸ್ಸಾಂ, ಮಧ್ಯಪ್ರದೇಶ, ಬಿಹಾರ, ಒಡಿಶಾ, ತ್ರಿಪುರ, ಗೋವಾ ಸೇರಿದಂತೆ ವಿವಿಧ ರಾಜ್ಯಗಳು ಸಹ ಸೇರಿವೆ.

ಕೊರೊನಾ ಸೋಂಕು ಹೆಚ್ಚು ಕಂಡುಬಂದಿರುವ ಮಹಾರಾಷ್ಟ್ರದ ಹಲವು ರೈಲು ನಿಲ್ದಾಣ ಗುರುತಿಸಲಾಗಿದೆ. ದೊಡ್ಡ ರಾಜ್ಯವಾದ ಕಾರಣ ಉತ್ತರ ಪ್ರದೇಶದಲ್ಲಿಯೂ ಹೆಚ್ಚು ನಿಲ್ದಾಣಗಳು ಪಟ್ಟಿಯಲ್ಲಿ ಇವೆ. ಐಸೋಲೇಷನ್ ವಾರ್ಡ್‌ಗೆ ಅಗತ್ಯ ಇರುವ ಸಿಬ್ಬಂದಿಯನ್ನು ಹತ್ತಿರದ ಕೋವಿಡ್ - 19 ಆಸ್ಪತ್ರೆ ಒದಗಿಸಲಿದೆ.

ಕೋಚ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಊಟ, ಮೂಲ ಸೌಕರ್ಯವನ್ನು ರೈಲ್ವೆ ಒದಗಿಸಲಿದೆ. ಪ್ರಸ್ತುತ ರೈಲ್ವೆ 5150 ಐಸೋಲೇಷನ್ ಕೋಚ್‌ಗಳನ್ನು ಸಿದ್ಧಪಡಿಸಿದೆ. ಇವು ರೋಗಿಗಳು ದಾಖಲಾಗಲು ಅಗತ್ಯ ಸೌಲಭ್ಯಗಳನ್ನು ಹೊಂದಿವೆ.

English summary
Union government identified 215 railway stations across the 23 state and union territories for the deployment of railways isolation coaches to be used as COVID Care Centres.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X