ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ರಾಜ್ಯಕ್ಕೆ 1869.85 ಕೋಟಿ ರೂ ಪ್ರವಾಹ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ

|
Google Oneindia Kannada News

ನವದೆಹಲಿ, ಜನವರಿ 6: ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆ, ಸಂಪತ್ತಿನ ನಷ್ಟ ಅನುಭವಿಸಿದ್ದ ರಾಜ್ಯಕ್ಕೆ ಕೇಂದ್ರ ಸರ್ಕಾರ ಕೊನೆಗೂ ಎರಡನೆಯ ಕಂತಿನ ಪರಿಹಾರ ಬಿಡುಗಡೆಯ ಘೋಷಣೆ ಮಾಡಿದೆ.

ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸೋಮವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ರಾಜ್ಯಕ್ಕೆ ಎರಡನೆಯ ಹಂತದ ಪರಿಹಾರ ನೀಡಲು ನಿರ್ಧಾರ ತೆಗೆದುಕೊಳ್ಳಲಾಯಿತು. ಏಳು ರಾಜ್ಯಗಳಿಗೆ 5,908 ಕೋಟಿ ರೂ ಅಧಿಕ ಅತಿವೃಷ್ಟಿ ಪರಿಹಾರ ನೀಡಲು ಅನುಮತಿ ನೀಡಲಾಗಿದೆ.

ಕರ್ನಾಟಕವಲ್ಲದೆ, ಭಾರಿ ಮಳೆ ಮತ್ತು ಪ್ರವಾಹಕ್ಕೆ ತುತ್ತಾದ ಇತರೆ ಕೆಲವು ರಾಜ್ಯಗಳಿಗೆ ಸಹ ಪರಿಹಾರ ಬಿಡುಗಡೆಗೆ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಸಿಂಹಪಾಲು ನೆರೆಯಿಂದ ಅಪಾರ ಹಾನಿ ಅನುಭವಿಸಿದ ಕರ್ನಾಟಕಕ್ಕೆ ದೊರಕಿದೆ. ಮೊದಲ ಹಂತದಲ್ಲಿ ರಾಜ್ಯ ಹೆಚ್ಚಿನ ಪರಿಹಾರ ಕೋರಿದ್ದರೂ ಕೇಂದ್ರ ಸರ್ಕಾರ ಕೇವಲ 1200 ಕೋಟಿ ರೂ ಬಿಡುಗಡೆ ಮಾಡಿತ್ತು. ಉಂಟಾಗಿರುವ ನಷ್ಟದ ಮುಂದೆ ಕೇಂದ್ರ ನೀಡಿರುವ ಹಣ ಯಾವುದಕ್ಕೂ ಸಾಲುವುದಿಲ್ಲ ಎಂದು ವಿರೋಧಪಕ್ಷಗಳು ಟೀಕಿಸಿದ್ದವು.

ಮನವಿ ಮಾಡಿದ್ದ ಯಡಿಯೂರಪ್ಪ

ಮನವಿ ಮಾಡಿದ್ದ ಯಡಿಯೂರಪ್ಪ

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ತುಮಕೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅತಿವೃಷ್ಟಿಯಿಂದ ಉಂಟಾದ ನಷ್ಟಕ್ಕೆ ಕೇಂದ್ರ ಸರ್ಕಾರ ಸೂಕ್ತ ಪರಿಹಾರ ನೀಡಿಲ್ಲ ಎಂಬ ಬೇಸರವನ್ನು ವೇದಿಕೆಯಲ್ಲಿಯೇ ಹೊರಹಾಕಿದ್ದರು.

1869.85 ಕೋಟಿ ರೂ ಪರಿಹಾರ

1869.85 ಕೋಟಿ ರೂ ಪರಿಹಾರ

ಅತಿವೃಷ್ಟಿಯಿಂದ ತೀವ್ರ ಹಾನಿ ಅನುಭವಿಸಿರುವ ಕರ್ನಾಟಕದ ಪ್ರವಾಹ ಪರಿಹಾರ ನಿಧಿಗೆ ಎರಡನೆಯ ಹಂತದಲ್ಲಿ 1869.85 ಕೋಟಿ ರೂ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ ರಾಜ್ಯಕ್ಕೆ 1,200 ಕೋಟಿ ರೂ ಬಿಡುಗಡೆ ಮಾಡಲಾಗಿತ್ತು.

ಎಲ್ಲಿಗೆ ಎಷ್ಟು ಪರಿಹಾರ?

ಎಲ್ಲಿಗೆ ಎಷ್ಟು ಪರಿಹಾರ?

ಮಧ್ಯಪ್ರದೇಶಕ್ಕೆ 1749.73 ಕೋಟಿ ರೂ., ಮಹಾರಾಷ್ಟ್ರಕ್ಕೆ 956.93 ಕೋಟಿ ರೂ., ಅಸ್ಸಾಂಗೆ 616.63 ಕೋಟಿ ರೂ, ಹಿಮಾಚಲ ಪ್ರದೇಶಕ್ಕೆ 284.93 ಕೋಟಿ ರೂ, ತ್ರಿಪುರಾಕ್ಕೆ 63.32 ಕೋಟಿ ರೂ ಮತ್ತು ಉತ್ತರ ಪ್ರದೇಶಕ್ಕೆ 367.17 ಕೋಟಿ ರೂ. ಪ್ರವಾಹ ಪರಿಹಾರ ನಿಧಿಗೆ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ.

35 ಸಾವಿರ ಕೋಟಿಗೂ ಅಧಿಕ ನಷ್ಟ

35 ಸಾವಿರ ಕೋಟಿಗೂ ಅಧಿಕ ನಷ್ಟ

ರಾಜ್ಯದಲ್ಲಿ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಮಳೆಯಿಂದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಆಸ್ತಿಪಾಸ್ತಿ ಕಳೆದುಕೊಂಡಿದ್ದರು. ಅತಿವೃಷ್ಟಿಯಿಂದಾಗಿ 35 ಸಾವಿರ ಕೋಟಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಪ್ರವಾಹ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಅಕ್ಟೋಬರ್‌ನಲ್ಲಿ 1,200 ಕೋಟಿ ಬಿಡುಗಡೆ ಮಾಡಿತ್ತು. ಎರಡನೆಯ ಹಂತದ ಪರಿಹಾರದಿಂದ ರಾಜ್ಯಕ್ಕೆ ಒಟ್ಟು 3,069.85 ಕೋಟಿ ಪರಿಹಾರ ದೊರೆತಂತಾಗಿದೆ.

English summary
Union government's high level committee chaired by Home Minister Amit Shah has approved Rs 1869.85 crore flood relief to Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X