ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

24/7 ವಿದ್ಯುತ್ ಪೂರೈಕೆಗೆ ನೀಲಿನಕ್ಷೆ ತಯಾರು

|
Google Oneindia Kannada News

ನವದೆಹಲಿ, ಜುಲೈ 17:ದೇಶದ ಎಲ್ಲಾ ವಿದ್ಯುತ್ ಗ್ರಾಹಕರಿಗೆ ದಿನವಿಡೀ ನಿರಂತರ ವಿದ್ಯುತ್ ಪೂರೈಕೆ ಮಾಡಲು ಕೇಂದ್ರ ಸರ್ಕಾರ ನೀಲಿನಕ್ಷೆ ತಯಾರಿಸುತ್ತಿದೆ.

ನಿರಂತರ ವಿದ್ಯುತ್ ಸರಬರಾಜು ನೀತಿಗೆ ಸಂಬಂಧಿಸಿ ಇಂಧನ ಇಲಾಖೆ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಕೇಂದ್ರ ಇಂಧನ ಸಚಿವ ಆರ್‌ಕೆ ಸಿಂಗ್ ಮಂಗಳವಾರ ಮಾತುಕತೆ ನಡೆಸಿದ್ದಾರೆ.

ರಾಜ್ಯದಲ್ಲಿ ಮಳೆ ಕೊರತೆ, ಕುಡಿಯುವ ನೀರಿಗೂ ಅಭಾವ, ವಿದ್ಯುತ್ ವ್ಯತ್ಯಯ ಸಾಧ್ಯತೆರಾಜ್ಯದಲ್ಲಿ ಮಳೆ ಕೊರತೆ, ಕುಡಿಯುವ ನೀರಿಗೂ ಅಭಾವ, ವಿದ್ಯುತ್ ವ್ಯತ್ಯಯ ಸಾಧ್ಯತೆ

ನೀತಿಗೆ ಸಂಬಂಧಿಸಿದಂತೆ ಕರಡು ಪ್ರತಿ ಅಂತಿಮಗೊಂಡಿದ್ದು , ನೀತಿ ನಿರೂಪಣೆಯ ಕೊನೆಯ ಹಂತದ ಕೆಲಸ ನಡೆಯುತ್ತಿದೆ. ಹೀಗಾಗಿ ಎಲ್ಲಾ ರಾಜ್ಯಗಳ ವಿದ್ಯುತ್ ಸರಬರಾಜು ಸಂಸ್ಥೆಗಳ ಜೊತೆ ಸರಣಿ ಮಾತುಕತೆ ನಡೆಸಲಾಗುತ್ತಿದೆ.

Union government eying on Uninterrupted Electricity service

ಪ್ರಿಪೇಡ್ ಸ್ಮಾರ್ಟ್ ವಿದ್ಯುತ್ ಮೀಟರ್,ಆಧುನೀಕೃತ ಸರಬರಾಜು ವ್ಯವಸ್ಥೆ ಸುಧಾರಿಸಿದರೆ ವಿದ್ಯುತ್ ಸರಬರಾಜು ನಷ್ಟ ಹಾಗೂ ಸೋರಿಕೆಗೂ ಕಡಿವಾಣ ಬೀಳಲಿದೆ.

ಈ ಕುರಿತು ಕೇಂದ್ರೀಯ ವಿದ್ಯುತ್ ಪ್ರಾಧಿಕಾರ ನೀತಿ ರೂಪಿಸುತ್ತಿದೆ. ಈ ನೀತಿಗಳು ಎಲ್ಲಾ ರಾಜ್ಯಗಳಿಗೂ ಅನ್ವಯವಾಗಲಿದ್ದು, ಏಕರೂಪ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಇದೆ.

ವಿದ್ಯುತ್ ಕಂಬ ಮುಕ್ತ ನಗರವಾಗಲಿದೆಯೇ ಮೈಸೂರು?ವಿದ್ಯುತ್ ಕಂಬ ಮುಕ್ತ ನಗರವಾಗಲಿದೆಯೇ ಮೈಸೂರು?

ವಿದ್ಯುತ್ ಸರಬರಾಜು ಪ್ರಕ್ರಿಯೆ ಹಾಗೂ ಬಳಕೆದಾರರ ಜೊತೆಗಿನ ವ್ಯವಹಾರಕ್ಕೆ ಸಂಬಂಧಿಸಿ ಆಧುನಿಕ ವ್ಯವಸ್ಥೆ ಜಾರಿಗೆ ನಿರ್ಧರಿಸಲಾಗಿದ್ದು,ಸಂಪೂರ್ಣ ಡಿಜಿಟಲೀಕರಣಗೊಳಿಸಲು ಚಿಂತನೆ ನಡೆಸಲಾಗಿದೆ.

English summary
Union government eying on Uninterrupted power supply through out the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X