ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ 170 ಜಿಲ್ಲೆಗಳು ಕೊರೊನಾ ಸೋಂಕಿನ ಹಾಟ್‌ಸ್ಪಾಟ್

|
Google Oneindia Kannada News

ನವದೆಹಲಿ, ಏಪ್ರಿಲ್ 15 : ಕೇಂದ್ರ ಆರೋಗ್ಯ ಸಚಿವಾಲಯ ದೇಶದಲ್ಲಿನ ಜಿಲ್ಲೆಗಳನ್ನು ಮೂರು ಭಾಗಗಳಾಗಿ ವಿಂಗಡನೆ ಮಾಡಿದೆ. ಕೊರೊನಾ ಹರಡದಂತೆ ತಡೆಯಲು ದೇಶದಲ್ಲಿ ಇಂದಿನಿಂದ 2ನೇ ಹಂತದ19 ದಿನಗಳ ಲಾಕ್ ಡೌನ್ ಜಾರಿಗೆ ಬಂದಿದೆ.

ಆರೋಗ್ಯ ಸಚಿವಾಲಯ ಹಾಟ್ ಸ್ಪಾಟ್, ನಾನ್ ಹಾಟ್ ಸ್ಪಾಟ್ ಮತ್ತು ಗ್ರೀನ್ ಝೋನ್ ಎಂದು ಜಿಲ್ಲೆಗಳನ್ನು ವಿಭಾಗ ಮಾಡಿದೆ. ದೇಶದ ಒಟ್ಟು 170 ಜಿಲ್ಲೆಗಳು ಹಾಟ್ ಸ್ಪಾಟ್‌ಗಳಾಗಿವೆ. ಈ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚು ಮತ್ತು ಏರಿಕೆಯಾಗುತ್ತಲೇ ಇದೆ.

ಲಾಕ್‌ಡೌನ್ ಮಾರ್ಗಸೂಚಿ: ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಬ್ಯಾಂಕ್‌ಗಳು ಲಾಕ್‌ಡೌನ್ ಮಾರ್ಗಸೂಚಿ: ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಬ್ಯಾಂಕ್‌ಗಳು

207 ಜಿಲ್ಲೆಗಳನ್ನು ನಾನ್ ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ. ಈ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ದಾಖಲಾಗಿವೆ. ಆದರೆ, ಅದು ನಿಯಂತ್ರಣದಲ್ಲಿದೆ. ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಾರ ಜಿಲ್ಲೆಗಳನ್ನು ವಿಂಗಡನೆ ಮಾಡಲಾಗಿದೆ.

ಕೊರೊನಾ : ಕೇಂದ್ರ ಗುರುತಿಸಿದ ದೇಶದ 25 ಹಾಟ್ ಸ್ಪಾಟ್ ನಗರಗಳು ಕೊರೊನಾ : ಕೇಂದ್ರ ಗುರುತಿಸಿದ ದೇಶದ 25 ಹಾಟ್ ಸ್ಪಾಟ್ ನಗರಗಳು

Union Government Declares 170 Districts As Coronavirus Hotspots

ಇದುವರೆಗೂ ಯಾವ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಾಖಲಾಗಿಲ್ಲವೋ? ಅವುಗಳನ್ನು ಹಸಿರು ಝೋನ್ ಎಂದು ಗುರುತಿಸಲಾಗಿದೆ. ಆದರೆ, ಈ ಜಿಲ್ಲೆಗಳಿಗೆ ಲಾಕ್ ಡೌನ್‌ನಿಂದ ವಿನಾಯಿತಿ ಇರುವುದಿಲ್ಲ.

ಲಾಕ್ಡೌನ್ 2: ರಾಜ್ಯಗಳಿಗೆ ಗೃಹ ಸಚಿವಾಲಯದಿಂದ ಮಾರ್ಗಸೂಚಿ ಲಾಕ್ಡೌನ್ 2: ರಾಜ್ಯಗಳಿಗೆ ಗೃಹ ಸಚಿವಾಲಯದಿಂದ ಮಾರ್ಗಸೂಚಿ

ಮೇ 3ರ ತನಕ ಲಾಕ್ ಡೌನ್ ವಿಸ್ತರಣೆಯಾದ ಹಿನ್ನಲೆಯಲ್ಲಿ ಕೇಂದ್ರ ಗೃಹ ಇಲಾಖೆ ಬುಧವಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಹಾಟ್ ಸ್ಪಾಟ್ ಜಿಲ್ಲೆಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತದೆ.

ಅಗತ್ಯ ವಸ್ತುಗಳನ್ನು ಕೊಳ್ಳಲು ಮಾತ್ರ ಅವಕಾಶವನ್ನು ನೀಡಲಾಗುತ್ತದೆ. ಅನಗತ್ಯವಾಗಿ ಯಾರಾದರೂ ಸಂಚಾರ ನಡೆಸಿದರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮಾರ್ಗಸೂಚಿ ಹೇಳಿದೆ.

ಯಾವುದೇ ಬಡಾವಣೆಯಲ್ಲಿ ಕೊರೊನಾ ಪ್ರಕರಣ ಪತ್ತೆಯಾದ ತಕ್ಷಣ ಅದನ್ನು ಕಂಟೇನ್‍ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗುತ್ತದೆ. ಸ್ಥಳೀಯ ಆಡಳಿತ ಮತ್ತು ಪೊಲೀಸರು ಪ್ರದೇಶವನ್ನು ವಶಕ್ಕೆ ಪಡೆದುಕೊಳ್ಳಲಿದ್ದು, ಸೋಂಕು ಹರಡದಂತೆ ಕ್ರಮ ಕೈಗೊಳ್ಳುತ್ತಾರೆ.

English summary
Union health ministry said that districts across the country have been divided into hotspots, non-hotspots, and green zone. While 170 districts have been classified as hotspots.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X