ಕೇಂದ್ರ ಪರಿಸರ ರಾಜ್ಯ ಸಚಿವ ಅನಿಲ್ ಮಾಧವ್ ದವೆ ನಿಧನ

Posted By:
Subscribe to Oneindia Kannada

ನವದೆಹಲಿ, ಮೇ 18 : ಹಲವು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರ ಪರಿಸರ ರಾಜ್ಯ ಸಚಿವ ಅನಿಲ್ ಮಾಧವ್ ದವೆ(60) ಇಂದು ಬೆಳಗ್ಗೆ (ಮೇ 18) ನಿಧನರಾಗಿದ್ದಾರೆ.

1956, ಜುಲೈ 2ರಂದು ಮಧ್ಯಪ್ರದೇಶದ ಉಜ್ಜೈನಿ ಬಂದ್ ನಗರದಲ್ಲಿ ಜನಿಸಿರುವ ಇವರು ಎಂಕಾಂ ಪದವೀಧರರಾಗಿದ್ದಾರೆ. ಮಾಧವ್ ದವೆ ಅವರು 2009ರಲ್ಲಿ ಮಧ್ಯಪ್ರದೇಶ ಬಿಜಿಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿ 2016ರಲ್ಲಿ ಕೇಂದ್ರ ಸಚಿವ ಸಂಪುಟ ಸೇರಿದ್ದರು.

Union Environment Minister Anil Madhav Dave passes away

ಇನ್ನು ಇವರ ಸಾವಿನ ಸುದ್ದಿ ತಿಳಿದ ಪ್ರಧಾನಿ ನರೇಂದ್ರ ಮೋದಿ ಅವರು, " ನನ್ನ ಸ್ನೇಹಿತ ಹಾಗೂ ಗೌರವಾನ್ವಿತ ಸಹೋದ್ಯೋಗಿ ಅನಿಲ್ ಮಾಧವ್ ದವೆ ಜೀಯವರ ನಿಧನದಿಂದ ಆಘಾತಕ್ಕೊಳಗಾಗಿದ್ದೇನೆ. ನಿನ್ನೆ(ಮೇ 17) ಸಾಯಂಕಾಲದವರೆಗೂ ನಾನು ಅವರ ಜತೆಗಿದ್ದೆ" ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Environment Minister Anil Dave passed away early this morning. He was 60. Dave had been unwell since January this year. He had not been able to recover since. Early this morning, he was rushed to the All India Institute of Medical Sciences where he passed away.
Please Wait while comments are loading...