ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಡಿಗೆ ತಾಯ್ತನ(ತಿದ್ದುಪಡಿ) ಕಾಯ್ದೆಗೆ ಅಸ್ತು ಎಂದ ಕೇಂದ್ರ ಸಚಿವ ಸಂಪುಟ

|
Google Oneindia Kannada News

ನವದೆಹಲಿ, ಫೆಬ್ರವರಿ 26: ಬಾಡಿಗೆ ತಾಯ್ತನ(ತಿದ್ದುಪಡಿ) ಕಾಯ್ದೆ 2020ಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಬುಧವಾರದಂದು ಸಮ್ಮತಿ ಸೂಚಿಸಿದೆ. ಸರಿ ಸುಮಾರು 15ಕ್ಕೂ ಅಧಿಕ ಬದಲಾವಣೆಗಳಿಗೆ ಒಪ್ಪಿಗೆ ಸಿಕ್ಕಿದೆ. ಈ ಪೈಕಿ ಯಾವುದೇ ಮಹಿಳೆಯು ಸ್ವಇಚ್ಛೆಯಿಂದ ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಳ್ಳಬಹುದು, ವಿಧವೆ, ವಿವಾಹ ವಿಚ್ಛೇದಿತರಿಗೂ ಆಯ್ಕೆ ಸ್ವಾತಂತ್ರ್ಯ ನೀಡಲಾಗಿದೆ.

"ಬಾಡಿಗೆ ತಾಯ್ತನವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದನ್ನು ನಿರ್ಬಂಧಿಸುವುದು ಈ ಕಾಯ್ದೆಯಿಂದ ಸಾಧ್ಯವಾಗಲಿದೆ. ರಾಜ್ಯಸಭೆಯ ಆಯ್ಕೆ ಸಮಿತಿ ಶಿಫಾರಸ್ಸಿನ ಅನ್ವಯ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿದೆ" ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.

ಕಾಯ್ದೆ ತಿದ್ದುಪಡಿ ಬಗ್ಗೆ ಮಾತನಾಡಿದ ಮಹಿಳಾ ಮತ್ತು ಕಲ್ಯಾಣ ಸಚಿವೆ ಸ್ಮೃತಿ ಇರಾನಿ, ಬಾಡಿಗೆ ತಾಯಿಯರಿಗೆ ನೀಡುವ ವಿಮೆ ಅವಧಿ 16 ತಿಂಗಳುಗಳಿಂದ 36 ತಿಂಗಳಿಗೆ ವಿಸ್ತರಿಸಲಾಗಿದೆ. ಭಾರತೀಯ ವಿವಾಹಿತ ದಂಪತಿ, ಭಾರತೀಯ ಮೂಲದ ದಂಪತಿ, ವಿಧವೆ, ವಿಚ್ಛೇದಿತೆ ಎಲ್ಲರಿಗೂ ಈ ಸೌಲಭ್ಯ ಬಳಕೆಗೆ ಅರ್ಹತೆ ಸಿಗಲಿದೆ ಎಂಡು ಹೇಳಿದರು.

Union Cabinet okays Surrogacy (Regulation) Bill

ಬಾಡಿಗೆ ತಾಯಿ ಎಂದರೆ ಮಹಿಳೆ ಯೊಬ್ಬಳು ಕೃತಕ ಗರ್ಭಧಾರಣೆ ಮೂಲಕ ಯಾವುದೇ ವ್ಯಕ್ತಿ ಅಥವಾ ದಂಪತಿಗಾಗಿ ಮಗುವನ್ನು ಹೆತ್ತುಕೊಡುವುದು.

ಭಾರತದಲ್ಲಿ ಬಾಡಿಗೆ ತಾಯ್ತನ ಮಾರುಕಟ್ಟೆಯು 1,000 ದಿಂದ 5,000 ಕೋಟಿ ರು. ವಹಿವಾಟು ಕಾಣುತ್ತಿದೆ. ಜರ್ಮನಿ, ಫ್ರಾನ್ಸ್, ಪೋಲೆಂಡ್, ಜೆಕ್ ಗಣರಾಜ್ಯ, ಇಟಲಿ, ನೆದರ್‌ಲೆಂಡ್, ಬೆಲ್ಜಿಯಂ ಮತ್ತು ಸ್ಪೇನ್ ರಾಷ್ಟ್ರಗಳ ದೂತಾವಾಸ ನಿರ್ದೇಶನಾಲಯಗಳು ಭಾರತದಲ್ಲಿರುವ ತನ್ನ ನಾಗರಿಕರಿಗೆ ಬಾಡಿಗೆ ತಾಯ್ತನ ನೆರವು ನೀಡದಂತೆ ಸೂಚಿಸಿದೆ' ಎಂದು ಗರ್ಭಧಾರಣೆಯೊಂದರ ವೈದ್ಯರು ತಿಳಿಸಿದ್ದಾರೆ.

ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಇಂತಹ ತಾಯ್ತನ ಒಪ್ಪಂದ ಅನೇಕ ಯುರೋಪ್ ರಾಷ್ಟ್ರಗಳಲ್ಲೂ ಕಾನೂನುಬಾಹಿರವಾಗಿದೆ. ಗಮನಾರ್ಹವೆಂದರೆ ಭಾರತದಲ್ಲಿಯೂ ಇದರ ಬಗ್ಗೆ ಯಾವುದೇ ಕಾನೂನು ಸ್ಪಷ್ಟವಾಗಿರಲಿಲ್ಲ. 2019ರಲ್ಲಿ ಲೋಕಸಭೆಯಲ್ಲಿ ಬಾಡಿಗೆ ತಾಯ್ತನ(ತಿದ್ದುಪಡಿ) ಮಸೂದೆ ಮಂಡನೆಯಾಗಿತ್ತು. ವಾಣಿಜ್ಯ ಉದ್ದೇಶಿತ ಬಾಡಿಗೆ ತಾಯ್ತನ ನಿಯಂತ್ರಿಸುವುದು, ಬಾಡಿಗೆ ತಾಯಂದಿರ ವೈದ್ಯಕೀಯ ವೆಚ್ಚ, ವಿಮೆ ಸೌಲಭ್ಯ ನೀಡುವುದು ಸರ್ಕಾರದ ಉದ್ದೇಶ. 2020ರ ತಿದ್ದುಪಡಿ ಮಸೂದೆ ಪ್ರಸ್ತುತ ಬಜೆಟ್ ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ.

English summary
The Union Cabinet on Wednesday approved the Surrogacy (Regulation) Bill after incorporating recommendations of a Rajya Sabha Select Committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X