ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಕ್ಕೆ 100 ಸ್ಮಾರ್ಟ್ ಸಿಟಿ, ಕರ್ನಾಟಕಕ್ಕೆ ಎಷ್ಟು?

By Mahesh
|
Google Oneindia Kannada News

ನವದೆಹಲಿ, ಏ.29: ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆಗಳಲ್ಲಿ ಒಂದೆನಿಸಿರುವ ದೇಶದಲ್ಲಿ 100 ಸ್ಮಾರ್ಟ್‌ ಸಿಟಿ ನಗರಗಳ ನಿರ್ಮಾಣಕ್ಕೆ ಬುಧವಾರ ಅಧಿಕೃತ ಚಾಲನೆ ಸಿಕ್ಕಿದೆ. ಸ್ಮಾರ್ಟ್ ಸಿಟಿ ನಿರ್ಮಿಸಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಕರ್ನಾಟಕ ಒಟ್ಟು 11 ನಗರಗಳನ್ನು ಆಯ್ಕೆ ಮಾಡಲು ಪ್ರಸ್ತಾವನೆ ಕಳಿಸಿತ್ತು. ಈ ಪೈಕಿ ಆರು ನಗರ, ಪಟ್ಟಣಗಳಲ್ಲಿ ಸ್ಮಾರ್ಟ್ ಸಿಟಿ ತಲೆ ಎತ್ತಲಿವೆ. ಬೆಂಗಳೂರು,ಬಾದಾಮಿ, ಬೀದರ್, ವಿಜಯಪುರ(ಬಿಜಾಪುರ), ಕಲಬುರಗಿ(ಗುಲ್ಬರ್ಗಾ), ಪಟ್ಟದಕಲ್ಲು ಪ್ರದೇಶದಲ್ಲಿ ಸ್ಮಾರ್ಟ್ ಸಿಟಿ ನಿರ್ಮಿಸಲು ಕೇಂದ್ರ ಒಪ್ಪಿಗೆ ನೀಡಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ಹಾಗೂ ಮಹಾಕೂಟ ಪ್ರದೇಶವನ್ನು ಹೆರಿಟೇಜ್ ಸಿಟಿ ನಿರ್ಮಾಣ ಯೋಜನೆಗೂ ಸೇರಿಸಿಕೊಳ್ಳಲಾಗಿದೆ. [ಬೆಂಗಳೂರಲ್ಲಿ 24x7 ರಕ್ಷಣೆ ಸ್ಮಾರ್ಟ್ ಸಿಟಿ ಯೋಜನೆ]

ನಮ್ಮ ದೇಶದ ಅನುಭವ ಮತ್ತು ತಂತ್ರಜ್ಞಾನವನ್ನು ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಧಾರೆ ಎರೆಯಲಾಗುವುದು ಎಂದು ಸಿಂಗಾಪುರ ವಿದೇಶಾಂಗ ಸಚಿವ ಕೆ.ಷಣ್ಮುಗಂ ಭರವಸೆ ನೀಡಿದ್ದಾರೆ. ಆಸ್ಟ್ರೇಲಿಯಾ, ಫ್ರಾನ್ಸ್ ಸೇರಿದಂತೆ ಅನೇಕ ದೇಶಗಳು ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ನೆರವು ನೀಡಲು ಮುಂದಾಗಿವೆ.

Cabinet nod for Smart City Project, Atal rejuvenation mission

ಅಂದಾಜು ಖರ್ಚು ವೆಚ್ಚ?: 100 ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಸುಮಾರು 10 ವರ್ಷ ಕಾಲಾವಧಿ ಬೇಕಾಗುತ್ತದೆ. ಸುಮಾರು 45 ಲಕ್ಷ ಕೋಟಿ ರು ವ್ಯಯಿಸಬೇಕಾಗುತ್ತದೆ. ಸರ್ಕಾರಿ ಮತ್ತು ಸಾರ್ವಜನಿಕ ಸಹಭಾಗಿತ್ವ(PPP ಮಾದರಿ)ದಲ್ಲಿ ಯೋಜನೆ ಸಾಕಾರಗೊಳ್ಳಲಿದೆ. [ಮೋದಿ ಸ್ಮಾರ್ಟ್ ಸಿಟಿ ಯೋಜನೆಗೆ ರಾಜ್ಯದ 11 ನಗರ?]

ಆಯ್ಕೆ ಮಾನದಂಡವೇನು?: ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗಸೂಚಿ ಪ್ರಕಾರ, ಸ್ಮಾರ್ಟ್ ಸಿಟಿಗೆ ಯಾವುದೇ ನಗರಗಳನ್ನು ಆಯ್ಕೆ ಮಾಡಬೇಕಾದರೆ ಒಂದರಿಂದ ನಾಲ್ಕು ಮಿಲಿಯನ್ ಜನಸಂಖ್ಯೆಯನ್ನು ಹೊಂದಿರಲೇಬೇಕು ಎಂಬ ನಿಯಮವಿದೆ. ಹೀಗಾಗಿ 2011ರ ಜನಗಣತಿ ಪ್ರಕಾರ, ಬೆಂಗಳೂರಿನ ಜನಸಂಖ್ಯೆ 96 ಲಕ್ಷ ಮೀರಿರುವುದರಿದ ಈ ನಗರವನ್ನು ಆಯ್ಕೆ ಮಾಡುವ ಕಡಿಮೆ ಎನ್ನಲಾಗಿತ್ತು. ಅದರೆ, ಬೆಂಗಳೂರಿಗೆ ಬಂಪರ್ ಲಾಟರಿ ಹೊಡೆದಿದೆ. [ನೂರು ಸ್ಮಾರ್ಟ್ ಸಿಟಿಗಳ ನಿರ್ಮಾಣ ನಾಯ್ಡು ಗುರಿ]

ರಾಮನಗರ, ತುಮಕೂರು, ದೇವನಹಳ್ಳಿ, ಮೈಸೂರು, ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಉಡುಪಿ, ಹೊಸಪೇಟೆ ಮತ್ತು ವಿಜಯಪುರಗಳನ್ನು ಆಯ್ಕೆ ಮಾಡಿ ಅನುಮೋದನೆಗಾಗಿ ಕಳುಹಿಸಿಕೊಡಲಾಗಿತ್ತು. ಇದರ ಜೊತೆಗೆ ಪಾರಂಪರಿಕ ನಗರಗಳ ಪಟ್ಟಿಗೆ ಸೇರಬೇಕಿದ್ದ ತುಮಕೂರು, ರಾಮನಗರ, ದೇವನಹಳ್ಳಿ ಕೂಡಾ ಪಟ್ಟಿಯಿಂದ ಹೊರಗುಳಿದಿವೆ.

JNNRUM ಹೆಸರು ಬದಲು?: Atal Mission for Rejuvenation and Urban Transformation (AMRUT) ಹೆಸರಿನಲ್ಲಿ 50,000 ಕೋಟಿ ರು ವೆಚ್ಚದಲ್ಲಿ ನಗರಗಳು ಸ್ಮಾರ್ಟ್ ಆಗಲಿವೆ. Jawaharlal Nehru National Urban Renewal Mission (JNNURM) ಅಡಿಯಲ್ಲಿ ಜಾರಿಯಲ್ಲಿರುವ ಅಭಿವೃದ್ಧಿ ಕಾರ್ಯಗಳು 2017ರ ತನಕ ಹಾಗೆ ಮುಂದುವರೆಯಲಿದೆ. AMRUT ಇದರ ಹೊಸ ಅವತಾರವಾಗಿ ಮುಂದಿನ ದಿನಗಳಲ್ಲಿ ಬದಲಾಗಲಿದೆ. (ಒನ್ ಇಂಡಿಯಾ ಸುದ್ದಿ)

English summary
Union Cabinet on Wednesday gave its nod to NDA government’s flagship 100 smart cities project and the new urban renewal mission with a total outlay of about Rs one lakh crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X