ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

|
Google Oneindia Kannada News

ನವದೆಹಲಿ, ಜುಲೈ 8: ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಸಾಕಷ್ಟು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ನವೆಂಬರ್ ವರೆಗೆ ವಿಸ್ತರಣೆ ಮಾಡಲು ಸಭೆಯಲ್ಲಿ ಅನುಮತಿ ದೊರೆತಿದೆ. ಜುಲೈಯಿಂದ ನವೆಂಬರ್ ವರೆಗೂ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಏಪ್ರಿಲ್ ತಿಂಗಳಿನಲ್ಲಿ 74.3 ಕೋಟಿ ಮಂದಿಗೆ ಅನುಕೂಲವಾಗಿದೆ. ಮೇ ತಿಂಗಳಿನಲ್ಲಿ 74.75 ಕೋಟಿ, ಜೂನ್ ನಲ್ಲಿ 64.72 ಕೋಟಿ ಜನರನ್ನು ಯೋಜನೆ ತಲುಪಿದೆ.

Union Cabinet Meeting Highlights: Key Decisions Announced By Modi Govt

ಉದ್ಯೋಗಿಗಳ ಪಿಂಚಣಿ ಹಂಚಿಕೆಯ ಶೇ.24ರ ಮಿತಿಯನ್ನು ಆಗಸ್ಟ್‌ವರಗೆ ವಿಸ್ತರಿಸಲಾಗಿದೆ. ಅದರಲ್ಲಿ ಶೇ.12 ರಷ್ಟು ಉದ್ಯೋಗಿಗಳು ಹಾಗೂ ಶೇ.12ರಷ್ಟು ಉದ್ಯಮಿಗಳ ಶೇರ್ ಇರುತ್ತದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಇದನ್ನು ವಿಸ್ತರಿಸಲಾಗಿದೆ. ಇದಕ್ಕೆ ಒಟ್ಟು 4,860 ಕೋಟಿ ರೂ ವೆಚ್ಚ ತಗುಲಲಿದೆ. ಇದರಿಂದ 75 ಲಕ್ಷ ಉದ್ಯೋಗಿಗಳಿಗೆ ಸಹಾಯವಾಗಲಿದೆ.

-ಪಿಎಂ ಉಜ್ವಲ ಯೋಜನೆ ಸೆಪ್ಟೆಂಬರ್‌ವರೆಗೆ ವಿಸ್ತರಣೆ: ಪಿಎಂ ಉಜ್ವಲ ಯೋಜನೆಯನ್ನು ಸೆಪ್ಟೆಂಬರ್ ವರೆಗೆ ವಿಸ್ತರಣೆ ಮಾಡಲು ಅನುಮತಿ ದೊರೆತಿದೆ.
- ಕಡಿಮೆ ದರದಲ್ಲಿ ವಲಸೆ ಕಾರ್ಮಿಕರಿಗೆ ಬಾಡಿಗೆ ಮನೆಯನ್ನು ಒದಗಿಸಲು ಸಂಪುಟ ಒಪ್ಪಿಗೆ, ಇದರಲ್ಲಿ 3 ಲಕ್ಷ ಮಂದಿ ಫಲಾನುಭವಿಗಳಿಗೆ ಅನುಕೂಲವಾಗಲಿದೆ.
-ಸರ್ಕಾರವು 7.5 ಮಿಲಿಯನ್ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲಿದೆ
-ಸೆಪ್ಟೆಂಬರ್ ವರೆಗೆ 7.4 ಕೋಟಿ ಬಡ ಮಹಿಳೆಯರಿಗೆ ಉಚಿತ ಎಲ್‌ಪಿಜಿ ಸಿಲಿಂಡರ್ ವಿತರಣೆ. 13500 ಕೋಟಿ ರೂ ಮೀಸಲು.
-ಕಳೆದ ಮೂರು ತಿಂಗಳಿನಲ್ಲಿ 1.2 ಕೋಟಿ ಟನ್ ಆಹಾರ ಧಾನ್ಯಗಳ ವಿತರಣೆಯಾಗಿದೆ. 4.6 ಲಕ್ಷ ಟನ್ ಅಷ್ಟು ಬೇಳೆ ನೀಡಲಾಗಿದೆ.

English summary
Here are the key decisions take by the Modi government on today's cabinet meeting. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X