ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ರಿವಳಿ ತಲಾಖ್ ಮಸೂದೆಗೆ ಕೇಂದ್ರ ಸಂಪುಟದ ಸಭೆಯಲ್ಲಿ ಅಂಗೀಕಾರ

By Mahesh
|
Google Oneindia Kannada News

ನವದೆಹಲಿ, ಡಿಸೆಂಬರ್ 15: ತ್ರಿವಳಿ ತಲಾಖ್ ಗೆ ಕಾನೂನು ಬಾಹಿರ, ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ, ಇದೀಗ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತ ಮಸೂದೆಗೆ ಸರ್ವಾನುಮತದ ಒಪ್ಪಿಗೆ ಸಿಕ್ಕಿದೆ.

ಸುಪ್ರಿಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ನೇತೃತ್ವದ ಪಂಚ ಸದಸ್ಯರ ನ್ಯಾಯಪೀಠವು ತ್ರಿವಳಿ ತಲಾಖ್ ಮಾನ್ಯತೆ ರದ್ದು ಮಾಡಿ ಆಗಸ್ಟ್ 27ರಂದು ತೀರ್ಪಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಏನಿದು ತ್ರಿವಳಿ ತಲಾಖ್? ಏಕೆ ಇದರ ಬಗ್ಗೆ ಚರ್ಚೆ?ಏನಿದು ತ್ರಿವಳಿ ತಲಾಖ್? ಏಕೆ ಇದರ ಬಗ್ಗೆ ಚರ್ಚೆ?

ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ: 370ನೇ ವಿಧಿ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತರಲಿರುವ ಹೊಸ ಕಾಯ್ದೆ ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ.

Union Cabinet clears triple talaq bill

ಕರಡು ಮಸೂದೆಯಲ್ಲೇನಿದೆ: ತ್ರಿವಳಿ ತಲಾಖ್ ಜಾಮೀನು ರಹಿತ ಅಪರಾಧ ಎಂದು ಪರಿಗಣನೆ, ಗರಿಷ್ಠ 3 ವರ್ಷ ಶಿಕ್ಷೆ, ಜಮ್ಮು-ಕಾಶ್ಮೀರಕ್ಕೆ ಅನ್ಯವಿಲ್ಲ, ಲಿಖಿತ, ಮಾತಿನ ಮೂಲಕ ಅಥವಾ ಎಲೆಕ್ಟ್ರಾನಿಕ್ ವಿಧಾನದಲ್ಲಿ ತಲಾಖ್ ನೀಡುವುದು ಮಸೂದೆಯಲ್ಲಿ ತಿಳಿಸಲಾಗಿದೆ.

ತ್ರಿವಳಿ ತಲಾಖ್ : ವಿವಾಹಿತ ಮಹಿಳೆಗೆ ವಿವಾಹ ವಿಚ್ಛೇದನ ನೀಡುವ ಒಂದು ರೀತಿಯ ಪದ್ಧತಿಯಾಗಿದೆ. ಈ ಪದ್ಧತಿಯಂತೆ ವಿವಾಹಿತ ಮುಸ್ಲಿಂ ವ್ಯಕ್ತಿಯು ತನ್ನ ಪತ್ನಿಗೆ ಕಾನೂನು ಮಾನ್ಯ ವಿಚ್ಛೇದನ ನೀದಿದ್ದೇನೆ ಎಂದು ಘೋಷಿಸಬಹುದಾಗಿದೆ.

ತ್ರಿವಳಿ ತಲಾಖ್ ಬಗ್ಗೆ ಸುಪ್ರೀಂ ತೀರ್ಪಿನ 9 ಪ್ರಮುಖ ಅಂಶಗಳುತ್ರಿವಳಿ ತಲಾಖ್ ಬಗ್ಗೆ ಸುಪ್ರೀಂ ತೀರ್ಪಿನ 9 ಪ್ರಮುಖ ಅಂಶಗಳು

ಇದು ಮೌಖಿಕವಾಗಿರಬಹುದು ಅಥವಾ ಲಿಖಿತರೂಪದಲ್ಲಿರಬಹುದು ಅಥವಾ ಇ ಮಾಧ್ಯಮದ ಮೂಲಕ ಎಸ್ಎಂಎಸ್, ಟೆಲಿಫೋನ್ ಕಾಲ್, ಇಮೇಲ್ ಅಥವಾ ಫೇಸ್ ಬುಕ್, ವಾಟ್ಸಪ್ ಮೂಲಕ ಕೂಡಾ ತಲಾಖ್ ತಲಾಖ್ ತಲಾಖ್ ಎಂದು ಮೂರು ಬಾರಿ ಕಳಿಸಿ ವಿಚ್ಛೇದನ ನೀಡಿದ ಉದಾಹರಣೆಗಳಿವೆ.

ವಿಚ್ಛೇದನ ನೀಡುವ ವ್ಯಕ್ತಿಯು ಯಾವುದೇ ಕಾರಣ ನೀಡುವ ಅಗತ್ಯವಿಲ್ಲ. ವಿಚ್ಛೇದನ ನೀಡುವ ಸಮಯದಲ್ಲಿ ಹಾಜರಿರಬೇಕು ಎಂಬ ನಿಯಮವಿಲ್ಲ. ಇದ್ದಾತ್ ಅವಧಿಯ ನಂತರ ಪತ್ನಿಯು ಗರ್ಭಿಣಿಯಾಗಿದ್ದಾರೆ ವಿಚ್ಛೇದನದ ವಿಧಾನ ಬದಲಾಗಲಿದೆ.

 ತ್ರಿವಳಿ ತಲಾಖ್ ಅಸಿಂಧು, ಸುಪ್ರಿಂನಿಂದ ಮಹತ್ವದ ತೀರ್ಪು ತ್ರಿವಳಿ ತಲಾಖ್ ಅಸಿಂಧು, ಸುಪ್ರಿಂನಿಂದ ಮಹತ್ವದ ತೀರ್ಪು

ಈ ಸಂದರ್ಭದಲ್ಲಿ ದಂಪತಿಗೆ ಸಲಹಾ ಸಮಿತಿಯ ಮುಂದೆ ಹಾಜರಾಗಿ, ಮತ್ತೆ ಒಂದಾಗುವ ಅವಕಾಶವಿರುತ್ತದೆ. ಆದರೆ, ಒಂದೇ ಬಾರಿ ಮೂರು ತಲಾಖ್ ಹೇಳುವ ಪ್ರಕ್ರಿಯೆ ಇನ್ನೂ ಜಾರಿಯಲ್ಲಿದೆ. ಇದಕ್ಕೆ ಯಾವುದೇ ನಿರ್ಬಂಧ ಹೇರಲಾಗಿಲ್ಲ.

English summary
Union Cabinet today cleared the Muslim Women (Protection of Rights on Marriage) Bill, 2017, to make the practice of "instant" triple talaq an offence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X