ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4ಜಿ ಸ್ಪೆಕ್ಟ್ರಂ ಮಾರಾಟಕ್ಕೆ ಕೇಂದ್ರ ಸಂಪುಟ ಅನುಮೋದನೆ

|
Google Oneindia Kannada News

ನವದೆಹಲಿ, ಡಿಸೆಂಬರ್ 17: ಕೇಂದ್ರ ಸಂಪುಟವು 2251.25 ಎಂಎಚ್ ಸ್ಪೆಕ್ಟ್ರಂಅನ್ನು 3.92 ಲಕ್ಷ ಕೋಟಿ ರೂ. ಮೊತ್ತಕ್ಕೆ ಏಳು ಫ್ರೀಕ್ವೆನ್ಸಿಗಳಲ್ಲಿ ಮಾರಾಟ ಮಾಡಲು ಬುಧವಾರ ಅನುಮೋದನೆ ನೀಡಿದೆ. ಈ ಹರಾಜು ಕೇವಲ 4ಜಿ ಸೇವೆಗಳಿಗೆ ನಡೆಯಲಿದೆ. 5ಜಿ ಸ್ಪೆಕ್ಟ್ರಂನ ಹರಾಜಿಗೆ ದೂರಸಂಪರ್ಕಗಳ ಇಲಾಖೆ ಇನ್ನೂ ಸ್ಪೆಕ್ಟ್ರಂ ಬ್ಯಾಂಡ್‌ಗಳನ್ನು ಅಂತಿಮಗೊಳಿಸಿಲ್ಲ.

ದೂರಸಂಪರ್ಕ ಸೇವಾ ಪೂರೈಕೆದಾರರಿಂದ ಅರ್ಜಿಗಳನ್ನು ಆಹ್ವಾನಿಸುವ ನೋಟಿಸ್ಅನ್ನು ಈ ತಿಂಗಳ ಅಂತ್ಯದ ಒಳಗೆ ಹೊರಡಿಸಲಾಗುತ್ತದೆ. ಮಾರ್ಚ್ 2021ರ ವೇಳೆಗೆ ಮಾರಾಟ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಸರ್ಕಾರ ಭರವಸೆ ಹೊಂದಿದೆ ಎಂದು ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ರೈತರ ಪ್ರತಿಭಟನೆಯಲ್ಲಿ ಸಿಮ್ ಬಹಿಷ್ಕಾರ: ಏರ್ಟೆಲ್, ವಿಐ ವಿರುದ್ಧ ಜಿಯೋ ಆರೋಪರೈತರ ಪ್ರತಿಭಟನೆಯಲ್ಲಿ ಸಿಮ್ ಬಹಿಷ್ಕಾರ: ಏರ್ಟೆಲ್, ವಿಐ ವಿರುದ್ಧ ಜಿಯೋ ಆರೋಪ

ಈ ಹೊಸ ಸುತ್ತಿನ ಹರಾಜುಗಳು ಸರ್ಕಾರಕ್ಕೆ ಆದಾಯ ಸಂಗ್ರಹವನ್ನು ಹೆಚ್ಚಿಸುವ ಪ್ರಯತ್ನಕ್ಕೆ ಉತ್ತೇಜನ ನೀಡುವ ಸಾಧ್ಯತೆ ಇದೆ. ಸರಕು ಮತ್ತು ಸೇವಾ ತೆರಿಗೆ, ನೇರ ತೆರಿಗೆಗಳು, ಪರೋಕ್ಷ ತೆರಿಗೆಗಳಂತಹ ಆದಾಯ ಸಂಗ್ರಹಗಳಲ್ಲಿ ಇಳಿಕೆಯಾಗಿರುವುದರಿಂದ 4ಜಿ ಸ್ಪೆಕ್ಟ್ರಂ ಹರಾಜು ಸರ್ಕಾರಕ್ಕೆ ಹೆಚ್ಚಿನ ಆದಾಯದ ನಿರೀಕ್ಷೆ ಮೂಡಿಸಿದೆ.

 Union Cabinet Approves Sale Of 4G Spectrum At Rs 3.92 Lakh Crore Reverse Price

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಶಿಫಾರಸು ಮಾಡಿರುವುದಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ 700, 800, 900, 1800, 2,100, 2,300 ಮತ್ತು 2,500 ಎಂಎಚ್ ಬ್ಯಾಂಡ್‌ಗಳಲ್ಲಿ ಸ್ಪೆಕ್ಟ್ರಂನ ರಿವರ್ಸ್ ದರದಲ್ಲಿ ಹರಾಜು ಮಾಡಲಾಗುತ್ತದೆ. ಟ್ರಾಯ್ ಶಿಫಾರಸನ್ನು ಡಿಜಿಟಲ್ ಸಂವಹನ ಸಮಿತಿ (ಡಿಸಿಸಿ) ಸ್ವೀಕರಿಸಿತ್ತು.

ಜಿಯೋ ದೇಶದ ವೇಗದ ಮೊಬೈಲ್ ನೆಟ್‌ವರ್ಕ್: ಟ್ರಾಯ್ ವರದಿಜಿಯೋ ದೇಶದ ವೇಗದ ಮೊಬೈಲ್ ನೆಟ್‌ವರ್ಕ್: ಟ್ರಾಯ್ ವರದಿ

2019ರ ಡಿಸೆಂಬರ್ 20ರಂದು ಡಿಸಿಸಿ, ದೂರಸಂಪರ್ಕ ವೃತ್ತದಲ್ಲಿ ಪರವಾನಗಿ ಪಡೆದ 22 ಸ್ಪೆಕ್ಟ್ರಂಗಳಲ್ಲಿ 8,300 ಮೆಗಾ ಹರ್ಟ್ಸ್ ಸ್ಪೆಕ್ಟ್ರಾಗಳ ಮಾರಾಟಕ್ಕೆ ಅನುಮೋದನೆ ನೀಡಿತ್ತು. ಬಳಿಕ ಅದು ಟ್ರಾಯ್ ನೀಡಿದ ಎಲ್ಲ ಶಿಫಾರಸುಗಳನ್ನೂ ಸ್ವೀಕರಿಸಲು ನಿರ್ಧರಿಸಿತ್ತು.

English summary
The Union Cabinet on Wednesday approved the sale of 2251.25 MHz 4G spectrum at a reverse price of 3.92 lakh crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X