• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇಂದ್ರ ಸರ್ಕಾರದ 30 ಲಕ್ಷ ನೌಕರರಿಗೆ ಬಂಪರ್ ಕೊಡುಗೆ

|

ನವದೆಹಲಿ, ಅಕ್ಟೋಬರ್.21: ಭಾರತೀಯ ಕೇಂದ್ರ ಸರ್ಕಾರದ ಮೂಲತ್ತು ಲಕ್ಷ ನೌಕರರಿಗೆ ಭರ್ಜರಿ ಕೊಡುಗೆ ಸಿಕ್ಕಿದೆ. ದಸರಾ ಮತ್ತು ದೀಪಾವಳಿ ಹೊಸ್ತಿಲಿನಲ್ಲಿ 3737 ಕೋಟಿ ರೂಪಾಯಿ ಬೋನಸ್ ನೀಡುವುದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.

ನವದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುವ 30 ಲಕ್ಷ ನಾನ್ ಗೆಜೆಟೆಡ್ ಅಧಿಕಾರಿಗಳಿಗೆ ಬೋನಸ್ ಹಣವನ್ನು ನೀಡಲಾಗುತ್ತಿದ್ದು, ಮುಂದಿನ ಒಂದು ವಾರದಲ್ಲಿ ಹಂತ ಹಂತವಾಗಿ ಹಣವನ್ನು ಜಮೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಬಿಹಾರ ಕಾರ್ಮಿಕರಿಗೆ ಬಂಪರ್!

ವಿಜಯ ದಶಮಿ ಹಬ್ಬಕ್ಕೂ ಮೊದಲೇ ಕೇಂದ್ರ ಸರ್ಕಾರದ ಎಲ್ಲ ನಾನ್-ಗೆಜೆಟೆಡ್ ಹಂತದ ಅಧಿಕಾರಿಗಳಿಗೆ ಬೋನಸ್ ಹಣವನ್ನು ನೀಡಲಾಗುತ್ತದೆ. 30 ಲಕ್ಷದ ಪೈಕಿ 17 ಲಕ್ಷ ನಾನ್- ಗೆಜೆಟೆಡ್ ನೌಕರರು ಸೇರಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಮಾಹಿತಿ ನೀಡಿದ್ದಾರೆ.

3737 ಕೋಟಿ ರೂಪಾಯಿ ಬೋನಸ್:

ಕೇಂದ್ರ ಸರ್ಕಾರದ ವಾಣಿಜ್ಯ ಸಂಸ್ಥೆಗಳಾದ ರೈಲ್ವೆ ಇಲಾಖೆ, ಅಂಚೆ ಕಚೇರಿ, ಇಪಿಎಫ್ಒ, ಇಎಸ್ಐಸಿ ವಿಭಾಗದ ಉದ್ಯೋಗಿಗಳು 2791 ಕೋಟಿ ಪಾಲು ಪಡೆದುಕೊಳ್ಳಲಿದ್ದಾರೆ. ಉಳಿದಂತೆ ಉತ್ಪಾದನೆಯಿಲ್ಲದೇ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳಿಗೆ 946 ಕೋಟಿ ಹಣದಲ್ಲಿ ಬೋನಸ್ ನೀಡಲಾಗುತ್ತದೆ. ಮಧ್ಯಮ ಹಂತದ ನೌಕರರ ಕೈಯಲ್ಲಿ ಹಣವೇ ಇಲ್ಲದಂತಾಗಿದೆ. ಬೋನಸ್ ಹಣದಲ್ಲಿ ಹಬ್ಬವನ್ನು ಆಚರಿಸುವಂತಾ ಸ್ಥಿತಿ ನಿರ್ಮಾಣವಾಗಿದೆ ಎಂದು ಸಚಿವ ಪ್ರಕಾಶ್ ಜಾವ್ಡೇಕರ್ ಮಾಹಿತಿ ನೀಡಿದ್ದಾರೆ. ಇನ್ನು, ಕೇಂದ್ರ ರೈಲ್ವೆ ನೌಕರರು ಪ್ರಮುಖವಾಗಿ ಬೋನಸ್ ನೀಡುವಂತೆ ಪಟ್ಟು ಹಿಡಿದಿದ್ದರು. ದುರ್ಗಾ ಪೂಜೆಗೂ ಮೊದಲೇ ಬೋನಸ್ ನೀಡದಿದ್ದರೆ ರೈಲ್ವೆ ಸಂಚಾರವನ್ನು ತಡೆ ಹಿಡಿಯುವುದಾಗಿ ಎಚ್ಚರಿಕೆ ನೀಡಿದ್ದರು.

English summary
Union Cabinet Approves 3,737 Crore Bonus For 30 Lakh Central Government Employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X