ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Infographics: ಕೇಂದ್ರ ಬಜೆಟ್‌ನಲ್ಲಿ ಯಾವ ಯೋಜನೆಗಳಿಗೆ ಎಷ್ಟೇಷ್ಟು ಅನುದಾನ ಘೋಷಣೆ ಆಗಿದೆ?

ದೇಶದ ವಿವಿಧ ಕ್ಷೇತ್ರಗಳ ಅಭಿವೃದ್ಧಿ ರೂಪಿಸಲಾದ ವಿವಿಧ ಯೋಜನೆಗಳಿಗೆ ಕಳೆದ ಮೂರು ವರ್ಷಗಳಿಂದ ಭಾರತ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಾ ಬಂದಿದೆ. ಈ ವರ್ಷ ಎಷ್ಟು ಅನುದಾನ ಬಿಡುಗಡೆ ಎಂಬುದನ್ನು ತಿಳಿಯಿರಿ.

|
Google Oneindia Kannada News

ಬೆಂಗಳೂರು, ಫೆಬ್ರುವರಿ 02: ಕೇಂದ್ರ ಆಯವ್ಯಯವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಫೆ.1ರಂದು ಮಂಡಿಸಿದ್ದಾರೆ. ದೇಶದ ವಿವಿಧ ಕ್ಷೇತ್ರಗಳ ಅಭಿವೃದ್ಧಿ ರೂಪಿಸಲಾದ ವಿವಿಧ ಯೋಜನೆಗಳಿಗೆ ಕಳೆದ ಮೂರು ವರ್ಷಗಳಿಂದ ಭಾರತ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಾ ಬಂದಿದೆ. ಈ ಪೈಕಿ ಪ್ರಸಕ್ತ ಆರ್ಥಿಕ ವರ್ಷ 2023-24ನೇ ವರ್ಷಕ್ಕೆ ಯಾವ ಯಾವ ಯೋಜನೆಗಳಿಗೆ ಎಷ್ಟು ಹಣ ಮೀಸಲಿಟ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಕೇಂದ್ರ ಬಜೆಟ್: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಜೆಟ್‌ ಬಗ್ಗೆ ಭಾರೀ ಮೆಚ್ಚುಗೆ! ಕೇಂದ್ರ ಬಜೆಟ್: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಜೆಟ್‌ ಬಗ್ಗೆ ಭಾರೀ ಮೆಚ್ಚುಗೆ!

ಪ್ರಧಾನಮಂತ್ರಿ ಜನ್ ಆಯೋಗ್ ಯೋಜನೆ, ಗಡಿ ಪ್ರದೇಶದ ಅಭಿವೃದ್ಧಿ ಪರಿಸರ, ಅರಣ್ಯ, ವನ್ಯಜೀವಿ ಸಂರಕ್ಷಣೆ, ನ್ಯಾಯಾಂಗ ವ್ಯವಸ್ಥೆಗೆ ಮೂಲಭೂತ ಸೌಕರ್ಯ, ಜಲಜೀವನ್ ಮಿಷನ್ (ರಾಷ್ಟ್ರೀಯ, ಗ್ರಾಮೀಣ), ಆರೋಗ್ಯ ಶೀಕ್ಷಣ ಸೇರಿದಂತೆ ಬಹುತೇಕ ಯೋಜನೆಗಳಿಗೆ ಒಟ್ಟು ಕಳೆದ ಮೂರು ವರ್ಷಗಳಲ್ಲಿ ಅನುದಾನ ಹೆಚ್ಚಿಸುತ್ತಾ ಬರಲಾಗಿದೆ.

Union Budget 2023: How much grant has been announced for which Schemes, Know more

ಆಯುಷ್ಮಾನ್ ಭಾರತ್ ಯೋಜನೆಗೆ 2021-22ನೇ ವರ್ಷದಲ್ಲಿ 3116 ಕೋಟಿ ರೂಪಾಯಿ, 2022-23ರಲ್ಲಿ 6427 ಕೋಟಿ ರೂಪಾಯಿ ಹಾಗೂ ಈ ವರ್ಷ 2023-24ರಲ್ಲಿ ಒಟ್ಟು 7200 ಕೋಟಿ ರೂಪಾಯಿ ಘೋಷಿಸಲಾಗಿದೆ. ಅದೇ ರೀತಿ ಮಿಷನ್ ಶಕ್ತಿ (ಮಹಿಳಾ ಸಬಲೀಕರಣ) ಯೋಜನೆಗೆ 1912 ಕೋಟಿ ರೂಪಾಯಿ (2021-22ರಲ್ಲಿ), 2280 ಕೋಟಿ ರೂಪಾಯಿ (2022-23ರಲ್ಲಿ) ಮತ್ತು ಈ ವರ್ಷ 3144 ಕೋಟಿ ರೂಪಾಯಿ (2023-24ರಲ್ಲಿ) ನೀಡಲಾಗಿದೆ.

Union Budget 2023: How much grant has been announced for which Schemes, Know more

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ 13,992 ಕೋಟಿ ರೂಪಾಯಿ (2021-22ರಲ್ಲಿ), 19,000 ಕೋಟಿ ರೂಪಾಯಿ (2022-23ರಲ್ಲಿ) ಮತ್ತು 19,000 ಕೋಟಿ ರೂಪಾಯಿ (2023-24ರಲ್ಲಿ) ಘೋಷಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಗೆ 2021-22ರಲ್ಲಿ ಹಣ ಮೀಸಲು ಇಟ್ಟಿರಲಿಲ್ಲ. ನಂತರ 2022-23ರಲ್ಲಿ 6572 ಕೋಟಿ ರೂ. ಹಾಗೂ ಈ ವರ್ಷ 7425 ಕೋಟಿ ರೂಪಾಯಿ ಘೋಷಿಸಿದೆ. ಹೀಗೆ ಅನೇಕ ಕೇಂದ್ರ ಯೋಜನೆಗಳಿಗೆ ಈ ವರ್ಷವು ಅನುದಾನ ವಿತರಣೆಯಲ್ಲಿ ಹೆಚ್ಚಳ ಮಾಡಲಾಗಿದೆ.

English summary
Union Budget 2023: How much grant has been announced for which Schemes, Know.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X