ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ಬಜೆಟ್‌ನಲ್ಲಿ 400 ಹೊಸ ವಂದೇ ಭಾರತ್ ರೈಲು ಘೋಷಣೆ ಸಾಧ್ಯತೆ

|
Google Oneindia Kannada News

ನವದೆಹಲಿ, ನ.27: ಕೇಂದ್ರ ಸರ್ಕಾರದ ಮುಂದಿನ ಬಜೆಟ್‌ನಲ್ಲಿ 300 ರಿಂದ 400 ಹೊಸ ವಂದೇ ಭಾರತ್ ರೈಲುಗಳನ್ನು ಘೋಷಿಸುವ ಸಾಧ್ಯತೆಯಿದೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಈ ರೈಲುಗಳಿಗಾಗಿ ಬಜೆಟ್‌ನಲ್ಲಿ ನಿಗದಿಪಡಿಸಿದ 1.37 ಟ್ರಿಲಿಯನ್‌ಗಿಂತ ಹೆಚ್ಚಿನ ಬೆಂಬಲವನ್ನು ಘೋಷಿಸಬಹುದು ಎಂದು ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ. 2021-22ರಲ್ಲಿ 1.07 ಟ್ರಿಲಿಯನ್‌ನಿಂದ ಪ್ರಸಕ್ತ ಹಣಕಾಸು ವರ್ಷದ ಬಜೆಟ್‌ನಲ್ಲಿನ ಬೆಂಬಲದ ಮೊತ್ತವು ಶೇ 28 ಹೆಚ್ಚಾಗಿದೆ. ಮುಂದಿನ ವರ್ಷ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.

ಮೈಸೂರಿಗೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗಾಗಿ ಬೇಡಿಕೆಮೈಸೂರಿಗೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗಾಗಿ ಬೇಡಿಕೆ

ಗರಿಷ್ಠ 160 km/ph ನಿಂದ ಎಲ್ಲಾ ಮುಖ್ಯ ಮಾರ್ಗಗಳಲ್ಲಿ ಸುಮಾರು 180 km/ph ವೇಗವನ್ನು ಹೆಚ್ಚಿಸುವ ವಂದೇ ಭಾರತ್, ರಾಜಧಾನಿ ಮತ್ತು ಶತಾಬ್ದಿ ಸೇರಿದಂತೆ ಪ್ರಸ್ತುತ ಎಲ್ಲಾ ಹೈಸ್ಪೀಡ್ ರೈಲುಗಳನ್ನು ಹಂತಹಂತವಾಗಿ ಬದಲಾಯಿಸುವ ಉದ್ದೇಶವನ್ನು ಹೊಂದಿದೆ. ಇನ್ನು ಮುಂಬರುವ ಆರ್ಥಿಕ ವರ್ಷದಲ್ಲಿ 100 ವಂದೇ ಭಾರತ್ ರೈಲುಗಳ ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆ.

Union Budget 2023-24: Govt May Announce 400 New Vande Bharat Trains

ರೈಲ್ವೇ ಸಚಿವ ಅಶ್ವನಿ ವೈಷ್ಣವ್ ಅವರ ಪ್ರಕಾರ, 2026 ರ ವೇಳೆಗೆ ಭಾರತವು ವಂದೇ ಭಾರತ್ ರೈಲುಗಳನ್ನು ರಫ್ತು ಮಾಡಲು ಪ್ರಾರಂಭಿಸುತ್ತದೆ. ಜೊತೆಗೆ ಸ್ಟ್ಯಾಂಡರ್ಡ್-ಗೇಜ್ ರೈಲನ್ನು ಸಹ ಹೊಂದಿರುತ್ತದೆ. ಈ ರೈಲನ್ನು ಪ್ರಪಂಚದಾದ್ಯಂತ ವ್ಯಾಪಕವಾಗಿ ಬಳಸಲಾಗುತ್ತದೆ.

ಇತ್ತ, ರಾಜಸ್ಥಾನದ ಜೋಧ್‌ಪುರದ ಬಳಿ, ಬ್ರಾಡ್ ಮತ್ತು ಸ್ಟ್ಯಾಂಡರ್ಡ್ ಗೇಜ್‌ನ ವಂದೇ ಭಾರತ್ ರೈಲುಗಳಿಗೆ ಪರೀಕ್ಷಾ ಹಳಿಗಳನ್ನು ಹಾಕಲಾಗುತ್ತಿದೆ. ಇಲ್ಲಿ ಗರಿಷ್ಠ 220 ಕಿ. ಮೀ. ವೇಗದ ರೈಲಿನ ವೇಗವನ್ನು ಪರೀಕ್ಷಿಸಲಾಗುತ್ತದೆ.

"ಒಂದು ವರ್ಷದ ಅವಧಿಯಲ್ಲಿ ಕನಿಷ್ಠ 100 ವಂದೇ ಭಾರತ್ ರೈಲುಗಳನ್ನು 10-12 ಲಕ್ಷ ಕಿ.ಮೀ.ವರೆಗೆ ಓಡಿಸುವ ಮೂಲಕ ತಂತ್ರಜ್ಞಾನವನ್ನು ಜಗತ್ತಿಗೆ ಪ್ರದರ್ಶಿಸಲು ಬಯಸುತ್ತೇವೆ. ಇದು ತಂತ್ರಜ್ಞಾನದ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸುತ್ತದೆ. ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಹಾಯ ಮಾಡುತ್ತದೆ" ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

Union Budget 2023-24: Govt May Announce 400 New Vande Bharat Trains

2024ರ ಮೊದಲ ತ್ರೈಮಾಸಿಕ ವೇಳೆಗೆ ವಂದೇ ಭಾರತ್‌ ಸ್ಲೀಪರ್‌ ಕೋಚ್‌ ರೈಲುಗಳ ಸಂಚಾರ ಪ್ರಾರಂಭಿಸಲು ಯೋಜಿಸಲಾಗಿದೆ. ರೈಲ್ವೇಯು ವಂದೇ ಭಾರತ್‌ನ ಟಿಲ್ಟಿಂಗ್ ಆವೃತ್ತಿಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಮುಂದಿನ 25 ವರ್ಷಗಳಲ್ಲಿ, ರೈಲ್ವೇಯು 1,00,000 ಕಿಮೀ ಹೆಚ್ಚುವರಿ ರೈಲು ಹಳಿಗಳನ್ನು ನಿರ್ಮಿಸಲು ಯೋಜಿಸಿದೆ.

English summary
Union Budget 2023-24: Government may announce up to 400 new Vande Bharat trains in the 2023-24 union budget projections. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X