ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ 2022: ಗೂಗಲ್‌ನಲ್ಲಿ ಹೆಚ್ಚು ಹುಡುಕಲಾದ ಕೀವರ್ಡ್ಸ್‌ಗಳು ಇವು

|
Google Oneindia Kannada News

ನವದೆಹಲಿ, ಜನವರಿ 31: ಫೆಬ್ರವರಿ 1ರಂದು 2022ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಬಜೆಟ್‌ಗೂ ಮುನ್ನ ಜನರು ಗೂಗಲ್‌ನಲ್ಲಿ ಈ ಕುರಿತು ಏನೇನು ಸರ್ಚ್ ಮಾಡಿದ್ದಾರೆ ಎಂಬುದನ್ನು ನೋಡೋಣ.

ಕೊರೊನಾ ಸೋಂಕಿನಿಂದಾಗಿ ಕಳೆದ ಎರಡು ವರ್ಷಗಳಿಂದ ಬಡ ಹಾಗೂ ಮಧ್ಯಮ ವರ್ಗದವರ ಜೇಬು ಖಾಲಿಯಾಗಿದೆ. ಹೀಗಾಗಿ ನಿರ್ಮಲಾ ಸೀತಾರಮನ್ ಅವರು ಮಂಡಿಸಲಿರುವ ಬಜೆಟ್‌ನಲ್ಲಿ ಜನರು ಪರಿಹಾರವನ್ನು ನಿರೀಕ್ಷಿಸುತ್ತಿದ್ದಾರೆ.

ವಿವಿಧ ವರ್ಗದ ಜನರು ತಮ್ಮ ಮಾಸಿಕ ಬಜೆಟ್‌ಗಳನ್ನು ನೀಗಿಸಿಕೊಳ್ಳಲು ವಿಭಿನ್ನ ವಿಷಯಗಳನ್ನು ನಿರೀಕ್ಷಿಸುತ್ತಿದ್ದಾರೆ. ತಜ್ಞರ ಪ್ರಕಾರ, ಉತ್ತರ ಪ್ರದೇಶ ಚುನಾವಣೆ ಹಾಗೂ ಕೊರೊನಾ ಸೋಂಕಿನ ಮೂರನೇ ಅಲೆಯಿಂದಾಗಿ ಬಜೆಟ್‌ನಲ್ಲಿ ದೊಡ್ಡ ಬದಲಾವಣೆಯನ್ನು ಕಾಣಬಹುದಾಗಿದೆ.

Union Budget 2022: What Are The Most Searched Keywords On Google

ಆದಾಗ್ಯೂ, 2022ರ ಬಜೆಟ್‌ ಜನರಿಗೆ ಯಾವ್ಯಾವ ಅನುಕೂಲವನ್ನು ಮಾಡಿಕೊಡಬಹುದು ಎಂದು ಜನತೆ ಗೂಗಲ್‌ನಲ್ಲಿ ಸರ್ಚ್ ಮಾಡುತ್ತಿದ್ದಾರೆ.

ಬಜೆಟ್‌ನ ಅರ್ಥವೇನು?
ಅನೇಕ ಮಂದಿ ಗೂಗಲ್‌ನಲ್ಲಿ ಬಜೆಟ್‌ನ ಪದದ ಅರ್ಥವನ್ನು ಹುಡುಕಿದ್ದಾರೆ. ಬಜೆಟ್ ಬದವು ವಾಸ್ತವವಾಗಿ ಫ್ರೆಂಚ್ ಪದ ಬೌಗೆಟ್‌ನಿಂದ ಬಂದಿದೆ. ಇದರ ಅರ್ಥ ಸಣ್ಣ ಚೀಲ.
*ಬಜೆಟ್‌ನ ವಿಧಗಳೇನು?

ಬಜೆಟ್‌ನಲ್ಲಿ ಮೂರು ವಿಧಗಳಿಗೆ ಬ್ಯಾಲೆನ್ಸ್ಡ್‌ ಬಜೆಟ್, ಸರ್ಪ್ಲಸ್ ಬಜೆಟ್, ಡಿಫಿಸಿಟ್ ಬಜೆಟ್

*ಸಮತೋಲಿತ ಬಜೆಟ್ ಎಂದರೆ ಆದಾಯ ಹಾಗೂ ವೆಚ್ಚದ ಮೊತ್ತವು ಸಮಾನವಾಗಿರಬೇಕು.
*ಕೊರತೆ ಬಜೆಟ್ ಎಂದರೇನು?

ವೆಚ್ಚಗಳು ಆದಾಯವನ್ನು ಮೀರಿದಾಗ ಕೊರತೆ ಬಜೆಟ್ ಉಂಟಾಗುತ್ತದೆ. ವ್ಯವಹಾರಕ್ಕಿಂತ ಹೆಚ್ಚಿನ ಖರ್ಚನ್ನು ಉಲ್ಲೇಖಿಸುವಾಗ ಸರ್ಕಾರ ಸಾಮಾನ್ಯವಾಗಿ ಕೊರತೆ ಬಜೆಟ್ ಎಂಬ ಪದವನ್ನು ಬಳಸುತ್ತದೆ. ಸಂಚಿತ ಕೊರತೆಗಳು ರಾಷ್ಟ್ರೀಯ ಸಾಲವನ್ನು ರೂಪಿಸುತ್ತವೆ.

ಪ್ರಮುಖ ಅಂಶಗಳು

ಪ್ರಸ್ತುತ ವೆಚ್ಚಗಳು ಪ್ರಮಾಣಿತ ಕಾರ್ಯಾಚರಣೆಗಳ ಮೂಲಕ ಪಡೆದ ಆದಾಯದ ಪ್ರಮಾಣವನ್ನು ಮೀರಿದಾಗ ಕೊರತೆ ಬಜೆಟ್ ಸಂಭವಿಸುತ್ತದೆ.
ಕೆಲವು ಅನಿರೀಕ್ಷಿತ ಘಟನೆಗಳು ಮತ್ತು ಸರಕಾರದ ನೀತಿಗಳು ಬಜೆಟ್ ಕೊರತೆಗೆ ಕಾರಣವಾಗಬಹುದು.
ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಮತ್ತು ಖರ್ಚುಗಳನ್ನು ಕಡಿತಗೊಳಿಸುವ ಮೂಲಕ ದೇಶಗಳು ಕೊರತೆ ಬಜೆಟ್‌ನ್ನು ಪರಿಣಾಮಕಾರಿಯಾಗಿ ಎದುರಿಸಬಹುದು.

ಕೊರತೆ ಬಜೆಟ್ ಬಗ್ಗೆ ವಿವರಣೆ

ಪ್ರಸ್ತುತ ವೆಚ್ಚಗಳು, ಪ್ರಮಾಣಿತ ಕಾರ್ಯಾಚರಣೆಗಳ ಮೂಲಕ ಪಡೆದ ಆದಾಯದ ಪ್ರಮಾಣವನ್ನು ಮೀರುತ್ತಿದ್ದರೆ ಕೊರತೆ ಬಜೆಟ್‌ನ್ನು ಗುರುತಿಸಲಾಗುತ್ತದೆ. ತನ್ನ ಬಜೆಟ್ ಕೊರತೆಯನ್ನು ಸರಿಪಡಿಸಲು ಬಯಸುವ ರಾಷ್ಟ್ರವು ಕೆಲವು ಖರ್ಚುಗಳನ್ನು ಕಡಿತಗೊಳಿಸಬೇಕಾಗಬಹುದು. ಆದಾಯ-ಉತ್ಪಾದಿಸುವ ಚಟುವಟಿಕೆಗಳನ್ನು ಹೆಚ್ಚಿಸಬೇಕಾಗಬಹುದು ಅಥವಾ ಎರಡರ ಸಂಯೋಜನೆಯನ್ನು ಬಳಸಿಕೊಳ್ಳಬೇಕಾಗುತ್ತದೆ.

ಕೊರತೆ ಬಜೆಟ್‌ಗೆ ವಿರುದ್ಧವಾಗಿ ಹೆಚ್ಚುವರಿ ಬಜೆಟ್ ಸಂಭವಿಸಿದಾಗ ಆದಾಯವು ಪ್ರಸ್ತುತ ಖರ್ಚುಗಳನ್ನು ಮೀರುತ್ತದೆ ಮತ್ತು ಹೆಚ್ಚುವರಿ ನಿಧಿಗೆ ಕಾರಣವಾಗುತ್ತದೆ. ಅದನ್ನು ಬಯಸಿದಂತೆ ಹಂಚಿಕೆ ಮಾಡಬಹುದು. ಒಳಹರಿವು ಹೊರಹರಿವುಗಳಿಗೆ ಸಮನಾಗಿರುವ ಸಂದರ್ಭಗಳಲ್ಲಿ, ಬಜೆಟ್ ಸಮತೋಲಿತವಾಗಿರುತ್ತದೆ.

*ಬಜೆಟ್ ದಿನಾಂಕವನ್ನು ಸಾಕಷ್ಟು ಮಂದಿ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ.
*ಬಜೆಟ್‌ನ ನಿರೀಕ್ಷೆನ ಕುರಿತು ಹಲವು ಮಂದಿ ಸರ್ಚ್ ಮಾಡಿದ್ದಾರೆ

English summary
The past two years have been heavy on the pockets of the middle class due to the COVID-19 pandemic and the common man is expecting a relief from the Union Budget of 2022 that will be presented by Finance Minister Nirmala Sitharaman on February 1, 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X