ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ 2022: ಉದ್ಯೋಗಿ ವಲಯದ 5 ನಿರೀಕ್ಷೆಗಳು

|
Google Oneindia Kannada News

ನವದೆಹಲಿ, ಜನವರಿ 14: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಪ್ರತಿ ವರ್ಷದಂತೆ 2022-23ನೇ ಸಾಲಿನ ಬಜೆಟ್‌ನಿಂದಲೂ ತೆರಿಗೆದಾರರು ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ಸಂಸತ್‌ನ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭವಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರ ಮಂಗಳವಾರ ಬಜೆಟ್ ಮಂಡನೆ ಮಾಡಲಿದ್ದಾರೆ. ಕೇಂದ್ರದಲ್ಲಿ ನಾಲ್ಕನೇ ಬಾರಿ ಬಜೆಟ್ ಮಂಡಿಸಲಿರುವ ಸಚಿವೆ ನಿರ್ಮಲಾ ಸೀತಾರಾಮನ್, ಈ ಬಾರಿ ವೇತನ ಪಡೆಯುವ ಉದ್ಯೋಗಿಗಳ ವರ್ಗಕ್ಕೆ ಸಿಹಿಸುದ್ದಿ ನೀಡುವ ನಿರೀಕ್ಷೆಯಿದೆ. ಪಂಚರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲೇ ಮಂಡನೆ ಆಗಲಿರುವ ಬಜೆಟ್ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

ಜನವರಿ 31ರಿಂದ ಬಜೆಟ್ ಅಧಿವೇಶನ; ಫೆ. 1ರಂದು ಬಜೆಟ್ ಮಂಡನೆಜನವರಿ 31ರಿಂದ ಬಜೆಟ್ ಅಧಿವೇಶನ; ಫೆ. 1ರಂದು ಬಜೆಟ್ ಮಂಡನೆ

ದೇಶದ ಐದು ರಾಜ್ಯಗಳಲ್ಲಿ ಮತದಾರರ ಮನಸ್ಸು ಗೆಲ್ಲುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಜೆಟ್ ಮಂಡಿಸುವ ಸಾಧ್ಯತೆಯಿದೆ. ಇದರ ಮಧ್ಯೆ ಕೊವಿಡ್-19 ಸಾಂಕ್ರಾಮಿಕ ಪಿಡುಗಿನಿಂದ ಸಾಕಷ್ಟು ಸವಾಲುಗಳನ್ನು ಎದುರಿಸಿದ ಹಾಗೂ ಇಂದಿಗೂ ಎದುರಿಸುತ್ತಿರುವ ವೇತನ ಪಡೆಯುವ ಉದ್ಯೋಗಿಗಳ ವರ್ಗ ಮತ್ತು ತೆರಿಗೆದಾರರಿಗೆ ಸಿಹಿಸುದ್ದಿ ಸಿಗುತ್ತದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಕೇಂದ್ರ ಬಜೆಟ್ ಮೇಲೆ ವೇತನ ಪಡೆಯುವ ಉದ್ಯೋಗಿಗಳು ಹಾಗೂ ತೆರಿಗೆದಾರರು ಇಟ್ಟುಕೊಂಡಿರುವ ಪ್ರಮುಖ ನಿರೀಕ್ಷೆಗಳೇನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

Union Budget 2022: Five Things Salaried Class Employees Expectation From This Years Budget

1. ಒಂದು ಲಕ್ಷ ಸ್ಟ್ಯಾಂಡರ್ಡ್ ಡಿಡಕ್ಷನ್:

ಪ್ರಸ್ತುತ, ಸೆಕ್ಷನ್ 16ರ ಅಡಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ವೇತನ ಪಡೆಯುವ ವರ್ಗಗಳಿಗೆ 50,000 ರೂ.ಗೆ ನಿಗದಿಪಡಿಸಲಾಗಿದ್ದು, ಇದನ್ನು 1 ಲಕ್ಷಕ್ಕೆ ಹೆಚ್ಚಿಸಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಬಜೆಟ್‌ನಲ್ಲಿ ಕಾರ್ಮಿಕ ವರ್ಗವು ಬದಲಾವಣೆಯನ್ನು ನಿರೀಕ್ಷಿಸುತ್ತಿದೆ. ಪ್ರಮಾಣಿತ ಕಡಿತವನ್ನು ಹೆಚ್ಚಿಸಿದರೆ, ಸಂಬಳ ಪಡೆಯುವ ವರ್ಗವು ನೇರ ತೆರಿಗೆ ಪ್ರಯೋಜನಗಳನ್ನು ಪಡೆಯುತ್ತದೆ. ಏಕೆಂದರೆ, ಸರ್ಕಾರದ ಒಟ್ಟು ಆದಾಯ ತೆರಿಗೆ ಆದಾಯದ ಪ್ರಮುಖ ಭಾಗವು ಸಂಬಳ ಪಡೆಯುವ ಜನರ TDS ನಿಂದ ಬರುತ್ತದೆ.

2. ವರ್ಕ್ ಫ್ರಾಮ್ ಹೋಮ್ ಭತ್ಯೆ

ಕೊವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆ ಪ್ರಸ್ತುತ ಮನೆಯಿಂದ ಕೆಲಸ (WFH) ಮಾಡುತ್ತಿರುವ ಹಿನ್ನೆಲೆ ಉದ್ಯೋಗಿಗಳು ವಿದ್ಯುತ್, ಇಂಟರ್ನೆಟ್ ಶುಲ್ಕ, ಬಾಡಿಗೆ, ಪೀಠೋಪಕರಣಗಳು ಇತ್ಯಾದಿಗಳ ವೆಚ್ಚವು ಹೆಚ್ಚಾಗಿದೆ. ಅನೇಕ ಉದ್ಯೋಗದಾತ ಸಂಸ್ಥೆಗಳು ಉದ್ಯೋಗಿಗಳಿಗೆ ಮನೆಯಿಂದ ಕಚೇರಿ ಕೆಲಸಗಳನ್ನು ನಿರ್ವಹಿಸಲು ಭತ್ಯೆಗಳನ್ನು ನೀಡುತ್ತಿವೆ. ಆದರೆ ಉದ್ಯೋಗಿಗಳಿಗೆ ದೊಡ್ಡ ಪರಿಹಾರ ನೀಡುವುದರಿಂದ ಅಂತಹ ಭತ್ಯೆಗಳನ್ನು ಆದಾಯ ತೆರಿಗೆಯಿಂದ ವಿನಾಯಿತಿ ನೀಡಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಬಜೆಟ್‌ನಲ್ಲೂ ಏನಾದರೂ ಸಿಗಲಿದೆಯೇ ಎಂಬ ನಿರೀಕ್ಷೆಯಲ್ಲಿ ಉದ್ಯೋಗಿಗಳಿದ್ದಾರೆ.

3. ವಿಮೆ, ಮೆಡಿಕ್ಲೈಮ್ ಮತ್ತು 80C ವಿನಾಯಿತಿ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮಧ್ಯೆ ಜೀವ ವಿಮೆಗಳ ಸಂಖ್ಯೆ ಮತ್ತು ಪ್ರಮಾಣವೂ ಹೆಚ್ಚಾಗಿದೆ. ಆದ್ದರಿಂದ, ತೆರಿಗೆದಾರರು ಈಗ ಈ ವಿಷಯದಲ್ಲಿ ವಿನಾಯಿತಿ ನಿರೀಕ್ಷಿಸುತ್ತಿದ್ದಾರೆ. ಕೊರೊನಾದಿಂದ ಪಡೆದ ವಿಮೆಯನ್ನು 5-10 ವರ್ಷಗಳವರೆಗೆ ತೆರಿಗೆ ಮುಕ್ತಗೊಳಿಸಲು ಬೇಡಿಕೆ ಇಡಲಾಗುತ್ತಿದೆ. ಮುಂಬರುವ ಬಜೆಟ್‌ನಲ್ಲಿ ಒಟ್ಟಾರೆ 80ಸಿ ಮಿತಿಯನ್ನು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

4. ವಿಮೆ ಮೇಲೆ GST ಯಿಂದ ವಿನಾಯಿತಿ

ತೆರಿಗೆದಾರರು ವಿಮೆ, ಮೆಡಿಕ್ಲೈಮ್ ಪ್ರೀಮಿಯಂನಲ್ಲಿ GST ವಿನಾಯಿತಿಯನ್ನು ನಿರೀಕ್ಷಿಸುತ್ತಿದ್ದಾರೆ. ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ, ಈ ಬೇಡಿಕೆಯನ್ನು ಬಜೆಟ್‌ನಲ್ಲಿ ಸೇರಿಸಬಹುದು ಎಂದು ವರದಿಯಾಗಿದೆ.

5. ಹಿಂದೂ ಅವಿಭಜಿತ ಕುಟುಂಬವು ಸೆಕ್ಷನ್ 87 ಎ ಪ್ರಯೋಜನ

ವೈಯಕ್ತಿಕ ತೆರಿಗೆದಾರರ ವಿಭಾಗದಲ್ಲಿ ಸೆಕ್ಷನ್ 87A ಅಡಿಯಲ್ಲಿ ಪ್ರಸ್ತುತ ಲಭ್ಯವಿರುವ ರಿಯಾಯಿತಿಯನ್ನು ಹಿಂದೂ ಅವಿಭಜಿತ ಕುಟುಂಬಕ್ಕೂ (HUF) ಲಭ್ಯವಾಗುವಂತೆ ಜನರು ಒತ್ತಾಯಿಸುತ್ತಿದ್ದಾರೆ.

English summary
Union Budget 2022: Five Things Salaried Class Employees Expect From This Year's Budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X