ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಮಿಕ ಸಂಹಿತೆಗಳ ಅನುಷ್ಠಾನದ ಮೇಲೆ ಎಲ್ಲರ ಚಿತ್ತ

|
Google Oneindia Kannada News

ನವದೆಹಲಿ, ಜನವರಿ 28: ನಾಲ್ಕು ಪ್ರಸ್ತಾವಿತ ಕಾರ್ಮಿಕ ಸಂಹಿತೆಯೇ ಮುಂಬರುವ ಕೇಂದ್ರ ಬಜೆಟ್ 2022 ನೌಕರರು ಮತ್ತು ಸಂಸ್ಥೆಗಳ ಮೇಲೆ ಬೀರಬಹುದಾದ ದೊಡ್ಡ ಪರಿಣಾಮವಾಗುವ ಸಾಧ್ಯತೆ ಇದೆ. ನಾಲ್ಕು ಪ್ರಸ್ತಾವಿತ ಕಾರ್ಮಿಕ ಸಂಹಿತೆ ಅನುಷ್ಠಾನವು ಬಹಳ ವಿಳಂಬವಾಗಿದೆ. ಆದರೆ ಈ ನೀತಿ ಅನುಷ್ಠಾನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ನಿಯಮಗಳು ಜಾರಿಗೆ ಬಂದರೆ, ಕಂಪನಿಗಳಿಗೆ ವೆಚ್ಚದ ಹೊರೆ ಹೆಚ್ಚಾಗುವ ನಿರೀಕ್ಷೆಯಿರುವುದರಿಂದ ಇಂಡಿಯಾ ಇಂಕ್ ಅವುಗಳ ಅನುಷ್ಠಾನದ ಬಗ್ಗೆ ಸ್ಪಷ್ಟತೆಗಾಗಿ ಕಾಯುತ್ತಿದೆ. "ನಿಯಮಗಳು ಉದ್ಯೋಗಿಗಳ ಟೇಕ್-ಹೋಮ್ ಸಂಬಳ, ಕೆಲಸದ ಸಮಯ ಮತ್ತು ವಾರದ ದಿನಗಳ ಸಂಖ್ಯೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ," ಎಂದು Aon ನ ಎಚ್‌ಆರ್‌ ರೂಪಂಕ್ ಚೌಧರಿ ತಿಳಿಸಿದ್ದಾರೆ.

 ಅಂಗನವಾಡಿ ಕಾರ್ಯಕರ್ತೆಯರಿಗೆ ಒಡಿಶಾ ಸರ್ಕಾರದಿಂದ ಸಿಹಿಸುದ್ದಿ ಅಂಗನವಾಡಿ ಕಾರ್ಯಕರ್ತೆಯರಿಗೆ ಒಡಿಶಾ ಸರ್ಕಾರದಿಂದ ಸಿಹಿಸುದ್ದಿ

ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಕಾರ್ಮಿಕ ಸಂಹಿತೆಗಳ ಅನುಷ್ಠಾನದ ಬಗ್ಗೆ ಯಾವುದಾದರೂ ಉಲ್ಲೇಖ ಇರುವ ವಿಚಾರದಲ್ಲಿ ಕಾತುರದಿಂದ ಕಾಯುತ್ತಿರುವುದಾಗಿ ಕಾಂಗ್ಲೋಮರೇಟ್ ಐಟಿಸಿಯ ಕಾರ್ಪೊರೇಟ್ ಮಾನವ ಸಂಪನ್ಮೂಲಗಳ ಮುಖ್ಯಸ್ಥ ಅಮಿತಾವ್ ಮುಖರ್ಜಿ ಬಿಸಿನೆಸ್ ಟುಡೇಗೆ ತಿಳಿಸಿದ್ದಾರೆ.

Union Budget 2022: All Eyes on Labour Codes Implementation

44 ಕೇಂದ್ರ ಕಾರ್ಮಿಕ ಕಾನೂನುಗಳನ್ನು ಸಮರ್ಥಿಸುವ ಸರ್ಕಾರವು ನಾಲ್ಕು ಕಾರ್ಮಿಕ ಮಸೂದೆಗಳನ್ನು ಪ್ರಸ್ತಾಪಿಸಿದೆ. ವೇತನ ಸಂಹಿತೆ, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ, ಕೈಗಾರಿಕಾ ಸಂಬಂಧಿತ ಸಂಹಿತೆ ಇದರಲ್ಲಿ ಒಳಗೊಂಡಿದೆ. 2019 ಮತ್ತು 2020 ರ ನಡುವೆ ಅಂಗೀಕರಿಸಲಾದ ಸಂಹಿತೆಗಳನ್ನು ಮೂಲತಃ ಏಪ್ರಿಲ್ 1, 2021 ರಿಂದ ಜಾರಿಗೆ ತರಲು ಯೋಜಿಸಲಾಗಿತ್ತು.

ಕಾರ್ಮಿಕ ಸಂಹಿತೆ ಕ್ರಮಬದ್ಧವಾಗಿ ಅನುಷ್ಠಾನ ಮಾಡಲು ಮನವಿ

"ಬಜೆಟ್ 2022 ಹೊಸ ಕಾರ್ಮಿಕ ಕಾನೂನುಗಳನ್ನು ಕ್ರಮಬದ್ಧವಾದ ರೀತಿಯಲ್ಲಿ ಅನುಷ್ಠಾನಗೊಳಿಸುವತ್ತ ಗಮನಹರಿಸಬೇಕು. ಯಾವುದೇ ಅಸ್ಪಷ್ಟತೆಯನ್ನು ತಪ್ಪಿಸಲು ರಾಜ್ಯ ಕಾರ್ಮಿಕ ನಿಯಮಗಳನ್ನು ಕೇಂದ್ರದ ನಿಯಮಗಳೊಂದಿಗೆ ಜೋಡಿಸಬೇಕು. ಪರವಾನಗಿ ಪ್ರಕ್ರಿಯೆಗೆ ಸ್ಪಷ್ಟತೆ ನೀಡಬೇಕು. ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಅಸ್ತಿತ್ವವನ್ನು ಹೊಂದಿರುವ ಕಂಪನಿಗಳಿಗೆ ರಾಷ್ಟ್ರೀಯ ಪರವಾನಗಿಯನ್ನು ಒದಗಿಸಬೇಕು," ಎಂದು ಸಿಬ್ಬಂದಿ ಮತ್ತು ನೇಮಕಾತಿ ಸಂಸ್ಥೆ ರಾಂಡ್‌ಸ್ಟಾಡ್ ಇಂಡಿಯಾ ತನ್ನ ಬಜೆಟ್ ಶಿಫಾರಸುಗಳಲ್ಲಿ ಹೇಳಿದೆ.

ಕಾರ್ಮಿಕ ಸಚಿವಾಲಯವು ನಾಲ್ಕು ಸಂಹಿತೆಗಳ ಅಡಿಯಲ್ಲಿ ನಿಯಮಗಳನ್ನು ಅಂತಿಮಗೊಳಿಸಿದೆ. ಆದರೆ , ಕಾರ್ಮಿಕರು ಏಕಕಾಲೀನ ವಿಷಯವಾಗಿರುವುದರಿಂದ ಅವುಗಳನ್ನು ಕಾನೂನುಗಳಾಗಿ ಪರಿವರ್ತಿಸಲು ಕೇಂದ್ರ ಮತ್ತು ರಾಜ್ಯಗಳೆರಡೂ ಈ ಸಂಹಿತೆಯ ಅಡಿಯಲ್ಲಿ ನಿಯಮಗಳನ್ನು ತಿಳಿಸಬೇಕಾಗಿದೆ. ರಾಜ್ಯಗಳು ಸಂಹಿತೆಗಳನ್ನು ರಚನೆ ಮಾಡುವ ಪ್ರಕ್ರಿಯೆ ನಡೆಸುತ್ತಿದೆ.

ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಡಿಸೆಂಬರ್ 2021 ರಲ್ಲಿ ರಾಜ್ಯಸಭೆಗೆ ನೀಡಿದ ಉತ್ತರದಲ್ಲಿ, "24 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ವೇತನದ ಸಂಹಿತೆಯ ಕುರಿತು ಕರಡು ಅಧಿಸೂಚನೆಗಳನ್ನು ಮೊದಲೇ ಪ್ರಕಟಿಸಿವೆ. 20 ರಾಜ್ಯಗಳು/ಯುಟಿಗಳು ಕೈಗಾರಿಕಾ ಸಂಬಂಧಿತ ಸಂಹಿತೆಗಳನ್ನು, ಸಾಮಾಜಿಕ ಭದ್ರತೆಯ ಸಂಹಿತೆಯ ಬಗ್ಗೆ 18 ರಾಜ್ಯಗಳು ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆಯ ಬಗ್ಗೆ 13 ರಾಜ್ಯಗಳು ಕರಡು ಅಧಿಸೂಚನೆಗಳನ್ನು ಪ್ರಕಟ ಮಾಡಿದೆ," ಎಂದು ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರವು ಆಗಸ್ಟ್ 8, 2019 ರಂದು ವೇತನದ ಸಂಹಿತೆ, 2019 ಅನ್ನು ಸೂಚಿಸಿದೆ. ಇದು ಸೆಪ್ಟೆಂಬರ್ 29, 2020 ರಂದು ಉಳಿದ ಮೂರು ಸಂಹಿತೆಗಳನ್ನು ಸೂಚಿಸಿದೆ.

ಭಾರತದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2022 ರಂದು ತಮ್ಮ ನಾಲ್ಕನೇ ಕೇಂದ್ರ ಬಜೆಟ್ ಅನ್ನು ಘೋಷಿಸಲಿದ್ದಾರೆ. ಸಂಸತ್ತಿನ ಉಭಯ ಸದನಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ನಾಯಕರನ್ನು ಮುಂದಿನ ಬಜೆಟ್ ಅಧಿವೇಶನದಲ್ಲಿ ಸಮಸ್ಯೆಗಳು ಮತ್ತು ಶಾಸಕಾಂಗ ವ್ಯವಹಾರಗಳ ಬಗ್ಗೆ ಚರ್ಚಿಸಲು ಸಭೆಗೆ ಆಹ್ವಾನಿಸಲಾಗಿದೆ. ಸಭೆಯು ವರ್ಚುವಲ್‌ ರೂಪದಲ್ಲಿ ಜನವರಿ 31 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. (ಒನ್‌ಇಂಡಿಯಾ ಸುದ್ದಿ)

English summary
Union Budget 2022: All eyes on labour codes implementation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X