ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2021: ಸರ್ಕಾರದ ಘೋಷಣೆಯಿಂದ ಖುಷಿಯಾದ ಸೆನ್ಸೆಕ್ಸ್, ನಿಫ್ಟಿ!

|
Google Oneindia Kannada News

ನವದೆಹಲಿ, ಫೆಬ್ರವರಿ 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಕೇಂದ್ರ ಬಜೆಟ್ ಮಂಡಿಸಿ ಮುಗಿಯುತ್ತಿದ್ದಂತೆಯೇ ಷೇರುಪೇಟೆಯಲ್ಲಿ ಸಂತಸ ಮೂಡಿದೆ. ಬಜೆಟ್ ಮಂಡನೆಯಲ್ಲಿ ಯಾವ ಕ್ಷೇತ್ರಗಳಿಗೆ ಸರ್ಕಾರ ಮಹತ್ವ ನೀಡಲಿದೆ ಎಂಬ ಕಣ್ಣಿಟ್ಟಿದ್ದ ಷೇರುಪೇಟೆ ಜಿಗಿತ ಕಂಡಿದೆ.

ಬಜೆಟ್ ಮಂಡನೆ ಮುಕ್ತಾಯವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ಮತ್ತು ನಿಫ್ಟಿಗಳು ಸುಮಾರು ಶೇ 3.5ರಷ್ಟು ಹೆಚ್ಚಳವಾಗಿದೆ. ಸೆನ್ಸೆಕ್ಸ್ 1,601.66 ಅಂಕಗಳಷ್ಟು ಏರಿಕೆಯಾಗಿದೆ. ನಿಫ್ಟಿ 14,000 ಅಂಕಗಳಷ್ಟು ಹೆಚ್ಚಳ ಕಂಡಿದೆ.

ನಿರ್ಮಲಾ ಸೀತಾರಾಮನ್ ಅವರು ಘೋಷಣೆಗಳನ್ನು ಮಾಡಿದ ಬಳಿಕ ಭಾರತದ ಎನ್‌ಎಸ್‌ಇ ನಿಫ್ಟಿ 50 ಮತ್ತು ಎಸ್‌ & ಪಿ ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕಗಳು ಸುಮಾರು ಶೇ 3.5ರವರೆಗೆ ಚೇತರಿಕೆ ಕಂಡವು. ಭಾರತದ ರೂಪಾಯ ಮೌಲ್ಯವು ಡಾಲರ್ ಎದುರು ಕೊಂಚ ಪ್ರಬಲವಾಗಿದ್ದು, 72.86 ರೂಪಾಯಿಗೆ ತಲುಪಿದೆ. 10 ವರ್ಷಗಳ ಬಾಂಡ್ ಯೀಲ್ಡ್ ಶೇ 5.89ಕ್ಕೆ ಕುಸಿದಿದೆ.

Union Budget 2021: Sensex, Nifty Jump 3.5 Percent, Dalal Street Celebrates Budget

ಬಜೆಟ್ ಘೋಷನೆಗಳಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕತೆಯ ಚೇತರಿಕೆಯ ಉದ್ದೇಶದಿಂದ ಹೂಡಿಕೆಗೆ ಮತ್ತು ಉದ್ಯಮ ವಲಯಕ್ಕೆ ಉತ್ತೇಜನ ನೀಡಿದ್ದು, ಸಮತೋಲನದ ಪ್ರಯತ್ನ ಮಾಡಿರುವುದು ಹೂಡಿಕೆದಾರರಲ್ಲಿ ಸಂತಸ ಮೂಡಿಸಿದೆ.

ಇಂಡಸ್‌ಲ್ಯಾಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳು ಸೆನ್ಸೆಕ್ಸ್‌ನಲ್ಲಿ ಪ್ರಮುಖವಾಗಿ ಏರಿಕೆಯಾಗಿವೆ.

English summary
Union Budget 2021: Sensex and Nifty gains to around 3.5% after Finance Minister Nirmala Sitharaman presents the Budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X