ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2021: ಹಿರಿಯ ನಾಗರಿಕರಿಗೆ ಆದಾಯ ತೆರಿಗೆಯಲ್ಲಿ ನೆಮ್ಮದಿ

|
Google Oneindia Kannada News

ನವದೆಹಲಿ, ಫೆಬ್ರವರಿ 1: ಆದಾಯ ತೆರಿಗೆ ಪಾವತಿಸುವ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ನೆಮ್ಮದಿಯ ಸುದ್ದಿ ನೀಡಿದೆ. ಇನ್ನು ಮುಂದೆ 75 ವರ್ಷ ದಾಟಿದ ಹಿರಿಯ ನಾಗರಿಕರು ಹಾಗೂ ಕೇವಲ ಪಿಂಚಣಿ ಮತ್ತು ಬಡ್ಡಿ ಮೂಲಕ ಆದಾಯ ಪಡೆದುಕೊಳ್ಳುವ ವ್ಯಕ್ತಿಗಳು ಇನ್ನು ಮುಂದೆ ಆದಾಯ ತೆರಿಗೆ ರಿಟರ್ನ್ಸ್ ಪಾವತಿ ಮಾಡುವ ಅಗತ್ಯವಿಲ್ಲ ಎಂದು ಸೋಮವಾರ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದರಿಂದ ಹಿರಿಯ ನಾಗರಿಕರಿಗೆ ವಿನಾಯಿತಿ ನೀಡಲಾಗಿದೆ. ಆದರೆ ಅವರ ಬದಲು ಇನ್ನು ಮುಂದೆ ಸಂಬಂಧಿತ ಬ್ಯಾಂಕ್‌ಗಳು ಐಟಿಆರ್ ಸಲ್ಲಿಕೆ ಮಾಡಲಿವೆ.

ಹಾಗೆನೇ ಅನಿವಾಸಿ ಭಾರತೀಯರಿಗೆ ಬಜೆಟ್‌ನಲ್ಲಿ ಮತ್ತಷ್ಟು ಉತ್ತೇಜನ ನೀಡಲಾಗಿದೆ. ಅನಿವಾಸಿ ಭಾರತೀಯರ ವಿದೇಶಿ ನಿವೃತ್ತಿ ಫಂಡ್‌ನಲ್ಲಿನ ದುಪ್ಪಟ್ಟು ತೆರಿಗೆಯನ್ನು ತೆಗೆದುಹಾಕಲು ಸರ್ಕಾರ ಅಧಿಸೂಚನೆ ಹೊರಡಿಸಲಿದೆ ಎಂದು ನಿರ್ಮಲಾ ತಿಳಿಸಿದ್ದಾರೆ.

Union Budget 2021: Senior Citizens Above 75 Years Need Not To File IT Returns

ಟ್ಯಾಕ್ಸ್ ರಿಟರ್ನ್ಸ್ ಅನ್ನು ಮರು ತೆರೆಯಲು ಇದ್ದ ಸಮಯದ ಮಿತಿಯನ್ನು ಮೂರು ವರ್ಷಗಳಿಗೆ ಇಳಿಸಲಾಗಿದೆ. ಪ್ರಸ್ತುತ ಅದು ಆರು ವರ್ಷಗಳವರೆಗೆ ಇತ್ತು. ಗಂಭೀರ ವಂಚನೆಗಳಲ್ಲಿಯೂ 50 ಲಕ್ಷಕ್ಕೂ ಅಧಿಕ ಮೊತ್ತದ ತೆರಿಗೆಯ ಸಾಧ್ಯತೆ ಇದ್ದರೆ ಮಾತ್ರ ಈ ಮಿತಿಯನ್ನು ಹೆಚ್ಚುವರಿಯಾಗಿ ನೀಡಬಹುದು.

ಆದಾರ ತೆರಿಗೆ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ 2014ರಲ್ಲಿ 3.31 ಕೋಟಿ ಇದ್ದರೆ, ಅದು 2020ರ ವೇಳೆಗೆ 6.48 ಕೋಟಿಗೆ ಏರಿಕೆಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು. ನಮ್ಮ ತೆರಿಗೆ ವ್ಯವಸ್ಥೆಯು ಪಾರದರ್ಶಕವಾಗಬೇಕು. ನೇರ ತೆರಿಗೆ ವ್ಯವಸ್ಥೆಯಲ್ಲಿ ಸರ್ಕಾರವು ಸರಣಿ ಸುಧಾರಣೆಗಳನ್ನು ಆರಂಭಿಸಿದೆ. ತೆರಿಗೆ ದಕ್ಷತೆಯನ್ನು ಸುಧಾರಿಸಲು ನೇರ ತೆರಿಗೆ ಆಡಳಿತದಲ್ಲಿ ಮುಖರಹಿತ ಮೌಲ್ಯನಿರ್ಣಯ ಪದ್ಧತಿಯನ್ನು ಜಾರಿಗೊಳಿಸಲಾಗಿದೆ. ಸಣ್ಣ ತೆರಿಗೆದಾರರಿಗಾಗಿ ಖುದ್ದು ಹಾಜರಾಗುವ ಅಗತ್ಯವಿಲ್ಲದ ವಾಜ್ಯ ಪರಿಹಾರ ಪದ್ಧತಿ ಜಾರಿಗೆ ತರಲಾಗುತ್ತದೆ.

ಮಧ್ಯಮ ಮತ್ತು ಸಣ್ಣ ಉದ್ಯಮಗಳಲ್ಲಿನ ತೆರಿಗೆ ಲೆಕ್ಕಪರಿಶೋಧನೆ ಮಿತಿಯನ್ನು 5 ಕೋಟಿ ರೂಪಾಯಿಯಿಂದ 10 ಕೋಟಿ ರೂಗೆ ಹೆಚ್ಚಿಸಲಾಗಿದೆ.

English summary
Union Budget 2021: No income tax filing required for seniors citizens above 75 years of age and who have income only from pension and interest income.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X