ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2021: ಸೆಸ್ ಹೆಚ್ಚಾದರೂ ಪೆಟ್ರೋಲ್, ಡೀಸೆಲ್, ಮದ್ಯದ ದರದಲ್ಲಿ ಬದಲಾವಣೆ ಇಲ್ಲ

|
Google Oneindia Kannada News

ನವದೆಹಲಿ, ಫೆಬ್ರವರಿ 1: ಪೆಟ್ರೋಲ್ ಮೇಲೆ ಲೀಟರ್‌ಗೆ 2.5 ರೂ ಮತ್ತು ಡೀಸೆಲ್ ಮೇಲೆ ಪ್ರತಿ ಲೀಟರ್‌ಗೆ 4 ರೂ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021ರ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಬಜೆಟ್ ವೇಳೆ ಈ ಪ್ರಸ್ತಾಪ ಮಾಡುತ್ತಿರುವಂತೆಯೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರಿ ಏರಿಕೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಇನ್ನೊಂದೆಡೆ ಇತರೆ ಸುಂಕಗಳನ್ನು ಕಡಿತಗೊಳಿಸಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಬದಲಾವಣೆಯಾಗುವುದಿಲ್ಲ.

ಕೃಷಿ ಸೆಸ್ ಇತರೆ ಅನೇಕ ಸರಕುಗಳ ಮೇಲೆಯೂ ಅನ್ವಯವಾಗುತ್ತಿದೆ. ಆಲ್ಕೋಹಾಲ್ ಮೇಲೆ ಶೇ 100ರಷ್ಟು ಸೆಸ್ ಬೀಳುತ್ತಿದೆ. ಚಿನ್ನ ಮತ್ತು ಬೆಳ್ಳಿ ಗಟ್ಟಿಗಳ ಮೇಲೆ ಶೇ 2.5ರಷ್ಟು ಸೆಸ್, ಕಚ್ಚಾ ಪಾಮ್ ತೈಲದಲ್ಲಿ ಶೇ 17.5ರಷ್ಟು, ಕಚ್ಚಾ ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆ ಶೇ 20ರಷ್ಟು, ಸೇಬುಹಣ್ಣಿನ ಮೇಲೆ ಶೇ 35ರಷ್ಟು ಮತ್ತು ಬಟಾಣಿ ಮೇಲೆ ಶೇ 40ರಷ್ಟು ಸೆಸ್ ವಿಧಿಸಲಾಗಿದೆ.

Budget 2021: ಯಾವ ಉತ್ಪನ್ನಗಳ ಮೇಲೆ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್?Budget 2021: ಯಾವ ಉತ್ಪನ್ನಗಳ ಮೇಲೆ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್?

ಈ ಎಲ್ಲ ಸೆಸ್‌ಗಳು ಫೆಬ್ರವರಿ 2ರಿಂದಲೇ ಅನ್ವಯವಾಗಲಿವೆ. ಆದರೆ ಈ ಸೆಸ್‌ಗಳು ಗ್ರಾಹಕ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಮುಂದೆ ಓದಿ.

ಬಿಇಡಿ, ಎಸ್‌ಎಬಿಡಿ ಇಳಿಕೆ

ಬಿಇಡಿ, ಎಸ್‌ಎಬಿಡಿ ಇಳಿಕೆ

'ಪೆಟ್ರೋಲ್ ಮತ್ತು ಡೀಸೆಲ್, ಮೂಲ ಅಬಕಾರಿ ಸುಂಕ (ಬಿಇಡಿ) ಮತ್ತು ವಿಶೇಷ ಹೆಚ್ಚುವರಿ ಅಬಕಾರಿ ಸುಂಕಗಳ (ಎಸ್‌ಎಇಡಿ) ದರಗಳನ್ನು ಕಡಿಮೆ ಮಾಡಲಾಗಿದೆ. ಹೀಗಾಗಿ ಇವುಗಳ ಮೇಲೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (ಎಐಡಿಸಿ) ಏರಿಕೆ ಮಾಡಿದ್ದರೂ ಅದು ಒಟ್ಟಾರೆಯಾಗಿ ಗ್ರಾಹಕರ ಮೇಲೆ ಯಾವುದೇ ಹೆಚ್ಚುವರಿ ಹೊರೆ ಉಂಟುಮಾಡುವುದಿಲ್ಲ' ಎಂದು ನಿರ್ಮಲಾ ಹೇಳಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಸುಂಕ ಕಡಿತ

ಪೆಟ್ರೋಲ್ ಮತ್ತು ಡೀಸೆಲ್ ಸುಂಕ ಕಡಿತ

'ಬ್ರ್ಯಾಂಡ್ ರಹಿತ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ಕ್ರಮವಾಗಿ 1.4 ರೂ ಮತ್ತು 1.8 ರೂ ಮೂಲ ಅಬಕಾರಿ ಸುಂಕವನ್ನು ಹೊಂದಲಿವೆ. ಹಾಗೆಯೇ ಬ್ರ್ಯಾಂಡ್ ರಹಿತ ಪೆಟ್ರೋಲ್ ಮತ್ತು ಡೀಸಲ್ ದರವು ಪ್ರತಿ ಲೀಟರ್‌ಗೆ ಕ್ರಮವಾಗಿ 11 ರೂ ಮತ್ತು 8 ಲೀಟರ್ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಹೊಂದಲಿವೆ. ಇದೇ ರೀತಿಯ ಬದಲಾವಣೆಗಳನ್ನು ಬ್ರ್ಯಾಂಡೆಡ್ ಪೆಟ್ರೋಲ್ ಮತ್ತು ಡೀಸೆಲ್‌ಗಳಲ್ಲಿ ಮಾಡಲಾಗಿದೆ' ಎಂದು ತಿಳಿಸಿದ್ದಾರೆ.

ಬಜೆಟ್ 2021: ಕೇಂದ್ರ ಬಜೆಟ್‌ನ ಪ್ರಮುಖ ಅಂಶಗಳುಬಜೆಟ್ 2021: ಕೇಂದ್ರ ಬಜೆಟ್‌ನ ಪ್ರಮುಖ ಅಂಶಗಳು

ವೈನ್ ಬಳಕೆ ಸರಕುಗಳ ಸೆಸ್

ವೈನ್ ಬಳಕೆ ಸರಕುಗಳ ಸೆಸ್

ಶೇ 50ರಷ್ಟಿದ್ದ ಕೆಲವು ಮದ್ಯ ಉತ್ಪನ್ನಗಳ ಸೆಸ್‌ಅನ್ನು ದುಪ್ಪಟ್ಟು ಮಾಡಲಾಗಿದೆ. ಅಂದರೆ ಶೇ 100ಕ್ಕೆ ಈ ಉತ್ಪನ್ನಗಳ ಸೆಸ್ ಮೌಲ್ಯ ತಲುಪಿದೆ. ಎಲ್ಲ ವೈನ್ ಬಳಕೆಯ ಸರಕುಗಳ ಮೇಲಿನ ಸೆಸ್ ಶೇ 50ರಷ್ಟಿತ್ತು. ಅದನ್ನು ಈಗ ಶೇ 100ಕ್ಕೆ ಏರಿಸಲಾಗಿದೆ.

ಕೇಂದ್ರ ಬಜೆಟ್ 2021: ಕೃಷಿ ಕ್ಷೇತ್ರಕ್ಕೆ ಬಜೆಟ್ ಘೋಷಣೆಯೇನು?ಕೇಂದ್ರ ಬಜೆಟ್ 2021: ಕೃಷಿ ಕ್ಷೇತ್ರಕ್ಕೆ ಬಜೆಟ್ ಘೋಷಣೆಯೇನು?

ಮದ್ಯ ಉತ್ಪನ್ನಗಳ ಸೆಸ್

ಮದ್ಯ ಉತ್ಪನ್ನಗಳ ಸೆಸ್

ಇನ್ನು ತಾಜಾ ದ್ರಾಕ್ಷಿಯ ಮತ್ತು ಸುವಾಸಿತ ವೈನ್‌ಗಳು ಹಾಗೂ ಮದ್ಯಗಳ ಸೆಸ್ ಅನ್ನು ಶೇ 100ರವರೆಗೆ ಹೆಚ್ಚಿಸಲಾಗಿದೆ. ಸೇಬು ರಸ, ಪೇರಾ ಹಣ್ಣು, ಅಕ್ಕಿದ್ರವ್ಯದ ವೈನ್, ಕಿಣ್ವ ಮಿಶ್ರಿಯ ಪಾನೀಯ ಮುಂತಾದವುಗಳ ವೈನ್‌ಗಳು, ಬ್ರ್ಯಾಂಡಿ, ಬೌರ್ಬನ್ ವಿಸ್ಕಿ, ಸ್ಕಾಚ್ ಮುಂತಾದ ಎಲ್ಲ ಸರಕುಗಳ ಸೆಸ್ ಶೇ 100ರಷ್ಟು ಏರಿಕೆಯಾಗಿದೆ.

English summary
Union Budget 2021: Petrol, Diesel, Alcohol Prices to remain unchanged despite Agri Cess Imposed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X